ಚಿಕ್ಕಬಳ್ಳಾಪುರ:- ಫೈನಾನ್ಸ್ ಸೇರಿ ಹಲವು ಕೈಸಾಲ ಮಾಡಿಕೊಂಡಿದ್ದ ವ್ಯಕ್ತಿ ಸಾಲಭಾದೆ ತಾಳಲಾರದೇ ಸೂಸೈಡ್ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಮಾಂಸಪ್ರಿಯರೇ ಅಪ್ಪಿತಪ್ಪಿಯೂ ಮಾಂಸ ತಿಂದ ಬಳಿಕ ಇವುಗಳನ್ನು ಸೇವಿಸಬಾರದು! ಯಾಕೆ?
ಗಿರೀಶ್ ಮೃತ ವ್ಯಕ್ತಿ. ತಡರಾತ್ರಿ ಮನೆಯಿಂದ ತೋಟದ ಕಡೆ ಹೋಗಿದ್ದವ ಮಧ್ಯರಾತ್ರಿ ಮನೆಗೆ ಬಂದು ನೇಣಿಗೆ ಶರಣಾಗಿದ್ದಾನೆ. ಬೆಳಗ್ಗೆ ಎದ್ದು ಮನೆಯವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ 1 ವರ್ಷದ ಹಿಂದೆ ಸಹ ಕೃಷಿಕಾಯಕಕ್ಕೆ ಲೋನ್ ಮಾಡಿ ತಗೊಂಡಿದ್ದ ಟ್ರಾಕ್ಟರನ್ನ ಸಹ ಜಫ್ತಿ ಮಾಡಲಾಗಿತ್ತಂತೆ, ಇನ್ನೂ ಲೋನ್ ಮೇಲೆ ತಗೊಂಡಿದ್ದ ಬೈಕ್ ಕಂತು ಸಹ ಕಟ್ಟಲು ಕಷ್ಟವಾಗಿದ್ದು, ಹೆಂಡತಿ ಹಾಗೂ ತಾಯಿಯ ಹೆಸರಲ್ಲಿ ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ಮಾಡಿಕೊಂಡಿದ್ದ ಅಂತ ತಿಳಿದುಬಂದಿದೆ.
ಹೀಗಾಗಿ ಸಾಲದ ಹೊರೆ ಹೆಚ್ಚಾಗಿ ಸೂಸೈಡ್ ಮಾಡಿಕೊಂಡಿದ್ದಾನೆ.