ಬೆಂಗಳೂರು: ಕಾಲೇಜಿನಲ್ಲೇ ಮಾತ್ರೆ ಸೇವಿಸಿ ಪ್ರೊಫೆಸರ್ ಆತ್ಮಹತ್ಯೆ ಯತ್ನ ನಡೆಸಿರುವ ಘಟನೆ ಬೆಂಗಳೂರಿನ ಎಸ್ ಎಸ್ ಎಂ ಆರ್ ವಿ ಪದವಿ ಕಾಲೇಜಿನಲ್ಲಿ ನಡೆದಿದೆ.
ಶಬಾನಾ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೊಫೆಸರ್ ಆಗಿದ್ದು ಪ್ರಾಂಶುಪಾಲರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯಗೆ ಯತ್ನ ಎಂದು ಆರೋಪ ಮಾಡಲಾಗುತ್ತಿದೆ.
ಇಂದು ಚೇಂಬರ್ ಗೆ ತೆರಳಿ ಮಾತನಾಡಿ ಹೊರಬಂದಿದ್ದ ಶಬಾನಾ ಬಳಿಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು
ಸ್ಥಳಕ್ಕೆ ತಿಲಕ್ ನಗರ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾಋಎ.