ಬ್ಯಾಂಕಾಕ್:- ಎಲ್-ನಿನೋದಿಂದಾಗಿ ಏಷ್ಯಾದಲ್ಲಿ ಕಬ್ಬು ಬೆಳೆಯಲ್ಲಿ ಕುಂಠಿತ ಉಂಟಾಗಿ, ಸಕ್ಕರೆ ಉತ್ಪಾದನೆ ಮೇಲೆ ಕರಿನೆರಳು ಬಿದ್ದಿದೆ. 2011ರಿಂದ ಈಚೆಗೆ ನಿಧಾನವಾಗಿ ಭಾರತ ಮತ್ತು ಥಾಯ್ಲೆಂಡ್ನಲ್ಲಿ ಮುನಿಸಿಕೊಂಡ ಮಳೆ, ಪ್ರತಿಕೂಲ ಹವಾಮಾನದಿಂದಾಗಿ ಕಬ್ಬು ಬೆಳೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಜಗತ್ತಿನ ಒಟ್ಟು ಸಕ್ಕರೆ ಉತ್ಪಾದನೆಯಲ್ಲಿ ಶೇ.2 ಇಳಿಕೆಯಾಗುವ ಮುನ್ಸೂಚನೆ ನೀಡಿದೆ. ಬೆಲೆ ಏರಿಕೆಯು ನೈಜೀರಿಯಾದಲ್ಲಿ ಬ್ರೆಡ್ ಉತ್ಪಾದಿಸುವ ಘಟಕಗಳ ಮೇಲೆ ಬರೆ ಎಳೆದಿದೆ. ಏಕೆಂದರೆ ಈ ರಾಷ್ಟ್ರದಲ್ಲಿ ಬ್ರೆಡ್ ಜನರ ಪ್ರಧಾನ ಆಹಾರ. ಗೋಧಿ ಹಿಟ್ಟು, ತರಕಾರಿಗಳಿಂದ ಸಿದ್ಧಗೊಳಿಸಿದ ಎಣ್ಣೆ, ಗೋಧಿ ಹುಡಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿರುವುದರಿಂದ ಅಲ್ಲಿನ ಬ್ರೆಡ್ ತಯಾರಿಕಾ ಘಟಕಗಳಲ್ಲಿ ಆತಂಕದ ಛಾಯೆ ಮೂಡಿದೆ.
ಜಗತ್ತಿನ ಮಾರುಕಟ್ಟೆಗಳಲ್ಲಿ ಸಕ್ಕರೆಯ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ.