ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆಗೆ ಗುಡ್ ಬಾಯ್ ಹೇಳಿದ್ದಾರೆ. ಸುದೀರ್ಘ 11 ವರ್ಷಗಳ ಕಾಲ ಬಿಗ್ ಬಾಸ್ ನಿರೂಪಣೆ ಮಾಡಿಕೊಂಡು ಬಂದಿದ್ದ ಸುದೀಪ್ ಅವರು ಭಾನುವಾರದ ಸಂಚಿಕೆ ಮೂಲಕ ಬಿಗ್ ಬಾಸ್ ಕೊನೆಯ ನಿರೂಪಣೆ ಮಾಡಿದ್ದಾರೆ. ಈ ಮೊದಲು ಅವರು ನೀಡಿದ್ದ ಒಂದು ಹೇಳಿಕೆಯಿಂದ ಜನರಿಗೆ ಇನ್ನೂ ನಿರೀಕ್ಷೆ ಇದೆ. ಮನಸ್ಸು ಬದಲಿಸುವ ಸಾಧ್ಯತೆ ಇದೆ ಎಂದು ಸುದೀಪ್ ಈ ಮೊದಲು ಹೇಳಿಕೊಂಡಿದ್ದರು. ಹಾಗಾದರೆ, ಈ ಬಗ್ಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವೇದಿಕೆಯ ಮೇಲೆ ಸುದೀಪ್ ಏನು ಹೇಳಿದರು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವೇದಿಕೆ ಮೇಲೆ ಸುದೀಪ್ ಅವರು ಬಿಗ್ ಬಾಸ್ ತೊರೆಯುವ ಬಗ್ಗೆಯಾಗಲೀ, ಇದೇ ತಮ್ಮ ಕೊನೆಯ ಸೀಸನ್ ಎಂಬುದಾಗಿ ಅವರು ಹೇಳಿಲ್ಲ. ಆದರೆ, ಅವರು ‘ಕಲರ್ಸ್ ಕನ್ನಡ’ಕ್ಕೆ ಹಾಗೂ ಮುಂದೆ ಬರುವ ಬಿಗ್ ಬಾಸ್ ಸೀಸನ್ಗಳನ್ನು ಬೆಂಬಲಿಸುವಂತೆ ಕೋರಿದ್ದಾರೆ.
ಸುದೀಪ್ ಅವರು ಬಿಗ್ ಬಾಸ್ ಪೂರ್ಣಗೊಳ್ಳುವಾಗ ಎಲ್ಲರಿಗೂ ಧನ್ಯಾವಾದ ಹೇಳಿದ್ದಾರೆ. ತಮ್ಮ ಸಹಾಯಕ್ಕೆ ನಿಂತವರಿಗೆ ಹಾಗೂ ಶೋನ ಉತ್ತಮವಾಗಿ ಮೂಡಿ ಬರಲು ಕಾರಣ ಆದವರಿಗೆ ಸುದೀಪ್ ಧನ್ಯವಾದ ಹೇಳಿದ್ದಾರೆ. ‘119 ದಿನಗಳ ಜರ್ನಿಗೆ ಪೂರ್ಣ ವಿರಾಮ ಹಾಕುವ ಸಮಯ. ನನ್ನ ಸ್ಟಾಫ್ಗೆ ಧನ್ಯವಾದ. ಡಿಸೈನರ್ ಸಾಗರ್ಗೆ ಥ್ಯಾಂಕ್ಸ್’ ಎಂದು ಸುದೀಪ್ ಹೇಳಿದ್ದಾರೆ.
‘ಪ್ರತಿ ಬಾರಿ ವೇದಿಕೆಗೆ ಸ್ವಾಗತಿಸಿದ್ದಕ್ಕೆ ಥ್ಯಾಂಕ್ಸ್. ಬಿಗ್ ಬಾಸ್ ಕಾರ್ಯಕ್ರಮ ಹೀಗೆ ಚೆನ್ನಾಗಿ ಆಗಲಿ. ಮತ್ತೆ ಮುಂದಿನ ಬಿಗ್ ಬಾಸ್ ಸ್ಟಾರ್ಟ್ ಆಗೋವರೆಗೂ ನೀವೆಲ್ಲರೂ ಬೇರೆ ಕಾರ್ಯಕ್ರಮ ನೋಡಿ. ಬಿಗ್ ಬಾಸ್ಗೆ ನಿಮ್ಮ ಬೆಂಬಲ ಯಾವಾಗಲೂ ಇರಲಿ’ ಎಂದು ಸುದೀಪ್ ಮನವಿ ಮಾಡಿದ್ದಾರೆ.