ನಟ ಶಿವರಾಜ್ಕುಮಾರ್ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ಶಿವರಾಜ್ ಕುಮಾರ್ ಅವರೇ ಈ ವಿಚಾರವನ್ನು ಖಚಿಪಡಿಸಿದ್ದರು. ತಮಗೆ ಅನಾರೋಗ್ಯ ಆಗಿದೆ ಎಂಬುದನ್ನು ಹೇಳಿದ್ದರು. ಆದರೆ, ಏನಾಗಿದೆ ಎಂಬ ವಿಚಾರವನ್ನು ರಿವೀಲ್ ಮಾಡಿರಲಿಲ್ಲ. ಈಗ ಶಿವರಾಜ್ಕುಮಾರ್ ಅವರು ಅಮೆರಿಕ ಹೊರಟಿದ್ದು ಅವರಿಗೆ ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ.
ಶಿವರಾಜ್ಕುಮಾರ್ ಅವರು ಸರ್ಜರಿಗಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಇಂದು (ಡಿಸೆಂಬರ್ 18) ಸಂಜೆ ವೇಳೆಗೆ ಶಿವರಾಜ್ ಕುಮಾರ್ ಅಮೆರಿಕಕ್ಕೆ ಪ್ರವಾಸ ಬೆಳೆಸಲಿದ್ದಾರೆ. ಅದಕ್ಕೂ ಮೊದಲು ಅನೇಕ ಗಣ್ಯರು, ಗೆಳೆಯರು, ಕುಟುಂಬದವರು ಶಿವಣ್ಣ ಅವರನ್ನು ಭೇಟಿ ಮಾಡಿದ್ದಾರೆ.
ಶಿವರಾಜ್ಕುಮಾರ್ ಹಾಗೂ ಸುದೀಪ್ ಮಧ್ಯೆ ಒಳ್ಳೆಯ ಸ್ನೇಹವಿದ್ದು ಇಬ್ಬರು ಅಣ್ಣ ತಮ್ಮಂದಿರಂತಿದ್ದಾರೆ. ಇದೀಗ ಶಿವರಾಜ್ಕುಮಾರ್ ಅಮೆರಿಕಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಮೊದಲು ಅವರ ನಿವಾಸಕ್ಕೆ ಸುದೀಪ್ ಆಗಮಿಸಿ ಶುಭ ಹಾರೈಸಿದ್ದಾರೆ.
ಶಿವಣ್ಣ ಅವರು ಕಾಣುತ್ತಿದ್ದಂತೆ ಸುದೀಪ್ ಪ್ರೀತಿಯಿಂದ ಹಗ್ ಮಾಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ. ಇವರ ಬಾಂಧವ್ಯ ಕಂಡು ಎಲ್ಲರೂ ಕೊಂಡಾಡುತ್ತಿದ್ದಾರೆ.
ಶಿವರಾಜ್ಕುಮಾರ್ ಅವರಿಗೆ ಇರುವ ಅನಾರೋಗ್ಯದ ವಿಚಾರ ತಿಳಿದು ಸುದೀಪ್ ಗಾಬರಿಗೊಂಡಿದ್ದರು. ಆದರೆ, ಶಿವಣ್ಣ ಅವರ ಪಾಸಿಟಿವ್ ಎನರ್ಜಿಯಿಂದ ಅವರು ಖುಷಿಪಟ್ಟಿದ್ದಾರೆ. ಈಗ ಶಿವರಾಜ್ಕುಮಾರ್ ಚಿಕಿತ್ಸೆಗಾಗಿ ಮಿಯಾಮಿಗೆ ತೆರಳುತ್ತಿದ್ದಾರೆ. ಹೀಗಾಗಿ, ಕಿಚ್ಚ ಶುಭ ಹಾರೈಸಿದ್ದಾರೆ. ಅವರು ಸಂಪೂರ್ಣ ಚೇತರಿಕೆ ಕಾಣಲಿ ಎಂದು ಕೋರಿದ್ದಾರೆ.