6 ಫೈನಲಿಸ್ಟ್ಗಳ ಜೊತೆ ಎಲಿಮಿನೇಟ್ ಆಗಿರೋ ಸ್ಪರ್ಧಿಗಳು ಕೂಡ ಬಿಗ್ ಬಾಸ್ ವೇದಿಕೆಗೆ ಆಗಮಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದಾರೆ.
ಸುದೀಪ್ (Sudeep) ವೇದಿಕೆಗೆ ಬರುತ್ತಿದ್ದಂತೆ ಎಲ್ಲ ಹಳೆಯ ಸ್ಪರ್ಧಿಗಳನ್ನು ಮಾತನಾಡಿಸುತ್ತಾ ಹೇಗಿದ್ದೀರಿ? ಎಂದು ಕೇಳಿದರು. ರಕ್ಷಕ್ ಬಳಿ ಬರುತ್ತಿದ್ದಂತೆ, ಮೊದಲಿಗೆ ನಿಮ್ಮ ಕ್ಷಮೆ ಕೇಳಬೇಕು ನಾನು ಎಂದರು ರಕ್ಷಕ್. ಅದೆಲ್ಲ ಇರಲಿ ಪರವಾಗಿಲ್ಲ, ಸಂದರ್ಶನದಲ್ಲಿ ಇದ್ದ ವಾಯ್ಸ್ ಈಗೇಕೆ ಇಲ್ಲ ಎಂದು ಸುದೀಪ್ ಪ್ರಶ್ನೆ ಮಾಡಿದ್ದರು
ನೀವು ಎದುರಿಗೆ ಇದ್ದೀರಲ್ಲ, ಅದಕ್ಕೆ ಗೌರವ ತುಸು ಹೆಚ್ಚು ಎಂದು ರಕ್ಷಕ್ ಮಾತನಾಡಿದ್ದರು. ಇರಲಿ, ನಿಮಗೆ ಯಾರ ಬಗ್ಗೆಯಾದರೂ ಮಾತನಾಡುವ ಅಧಿಕಾರ ಇದೆ. ಮಾತನಾಡಿ, ಸಮಸ್ಯೆಯಿಲ್ಲ. ಕ್ಷಮೆ ಎಲ್ಲ ಕೇಳಬೇಡಿ ಎಂದು ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದರು. ಅದಕ್ಕೆ ರಕ್ಷಕ್, ಇಲ್ಲ ಅಣ್ಣ, ನನ್ನ ಉದ್ದೇಶ ಅದಾಗಿರಲಿಲ್ಲ ಎಂದು ಸ್ಪಷ್ಟನೆ ಕೊಡಲು ಪ್ರಯತ್ನಿಸಿದರು. ಆದರೆ ಸುದೀಪ್, ಪರವಾಗಿಲ್ಲ ಬಿಡಿ, ನಿಮ್ಮ ಜೀವನದಲ್ಲಿ ನಿಮಗೆ ಒಳ್ಳೆಯದಾಗಲಿ ಎಂದು ಮುಂದುವರೆದರು.
ಬಿಗ್ ಬಾಸ್ ಸೀಸನ್ 10’ರಲ್ಲಿ 3ನೇ ವಾರವೇ ರಕ್ಷಕ್ ಬುಲೆಟ್ ಎಲಿಮಿನೇಟ್ ಆಗಿ ಹೊರಬಂದಿದ್ದರು. ಎಲಿಮಿನೇಷನ್ ನಂತರ ಶೋ ಕುರಿತು ಹಲವು ವಿಚಾರಗಳನ್ನು ರಕ್ಷಕ್ ಮಾತನಾಡಿದ್ದರು. ಸುದೀಪ್, ಬಿಗ್ ಬಾಸ್ ಶೋ ಕುರಿತು ರಕ್ಷಕ್ ಮಾತನಾಡಿದ್ದ ಮಾತುಗಳು ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು. ಹಾಗಾಗಿಯೇ ಇದೀಗ ಫಿನಾಲೆಯಲ್ಲಿ ರಕ್ಷಕ್ಗೆ ಸುದೀಪ್ ಪ್ರಶ್ನೆ ಮಾಡಿದ್ದಾರೆ. ನೇರವಾಗಿ ಹೇಳದೇ ಇದ್ದರೂ ಪರೋಕ್ಷವಾಗಿ ರಕ್ಷಕ್ಗೆ ಸುದೀಪ್ ಕಿವಿಹಿಂಡಿದ್ದಾರೆ.