ಕೊಪ್ಪಳ : ವಿದೇಶಿ ಪ್ರವಾಸಿ ಮತ್ತು ಹೋಮ್ ಸ್ಟೇ ಮಾಲಕಿ ಮೇಲೆ ಗ್ಯಾಂಗರೇಪ್ ಪ್ರಕರಣದ ನಂತರ ಇದೀಗ ಪೊಲೀಸ್ ಇಲಾಖೆ ಎಚ್ಚೆತ್ತಿದೆ. ಕೊಪ್ಪಳದ ರೆಸಾರ್ಟ್ ಗಳಲ್ಲಿ ಅಕ್ರಮ ಚಟುವಟಿಕೆ ಹಾಗೂ ವಿದೇಶಿಗರ ಬಗ್ಗೆ ಯಾವುದೇ ಮಾಹಿತಿ ನೀಡದ ಆರೋಪ ಕೇಳಿ ಬಂದಿದೆ.
ಕೊಪ್ಪಳದಲ್ಲಿ ತಲೆತಗ್ಗಿಸುವ ಘಟನೆ ; ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಪ್ರವಾಸಿಗನ ಹತ್ಯೆ
ಹೀಗಾಗಿ ಕೊಪ್ಪಳ ಎಪಿ ಡಾ.ರಾಮ್ ಅರಸಿದ್ದಿ ಅವರು ರಾತ್ರೋರಾತ್ರಿ ನಗರದ ರೆಸಾರ್ಟ್ಗಳ ಮೇಲೆ ದಾಳಿ ನಡೆಸಿದ್ದಾರೆ. ಕೊಪ್ಪಳ ತಾಲೂಕಿನ ಬಸ್ಸಾಪುರ ಗಂಗಾವತಿ ತಾಲೂಕಿನ ಆನೆಗೊಂದಿ ಸುತ್ತಮುತ್ತಲಿರೋ ವಿವಿಧ ಹೋಮ್ ಸ್ಟೇ, ರೆಸಾರ್ಟ್ ಗಳ ಮೇಲೆ ದಿಢೀರ್ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ. ದಾಖಲಾತಿಗಳ ನಿರ್ವಹಣೆ, ಮದ್ಯ, ಗಾಂಜಾ ಪೂರೈಕೆ ಬಗ್ಗೆ ಪರಿಶೀಲನೆ ನಡೆಸಿದ್ದು, ಅಕ್ರಮ ಚಟುವಟಿಕೆ ನಡೆಸಿದರೆ ಕಠಿಣ ಕ್ರಮದ ಎಚ್ಚೆರಿಕೆ ನೀಡಿದ್ದಾರೆ.