ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟರ್ನಲ್ಲಿ 9.2 ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಇದು ಅವರನ್ನು ಟ್ವಿಟರ್ನಲ್ಲಿ ಅತಿ ದೊಡ್ಡ ಷೇರುದಾರನನ್ನಾಗಿ ಮಾಡಿದೆ. ಟೆಸ್ಲಾದ ವಾರ್ಷಿಕ ಆದಾಯ 100 ಬಿಲಿಯನ್ ಡಾಲರ್ನಷ್ಟಾಗಿದೆ. ಅದರ ಮಾರುಕಟ್ಟೆ ಸಂಪತ್ತು 700 ಬಿಲಿಯನ್ ಡಾಲರ್ ಆಗಿದೆ. ವರ್ಷಕ್ಕೆ 18 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಈಗ ಇದೇ ಆಪ್ಟಿಮಸ್ ರೋಬೋಟ್ ಪ್ರಾಜೆಕ್ಟ್ನಲ್ಲಿ ವಿಆರ್ ಹೆಡ್ಹೆಟ್ ಹಾಗೂ ಮೋಷನ್ ಕ್ಯಾಪ್ಚರ್ ಸೂಟ್ ಧರಿಸಿ ದಿನಕ್ಕೆ 7 ಗಂಟೆಗಳ ಕಾಲ ನಡೆಯುವ ಆಫರ್ಅನ್ನು ನೀಡಿದೆ.
ಅದಕ್ಕಾಗಿ ದಿನಕ್ಕೆ ಗರಿಷ್ಠ ಗಂಟೆಗೆ 48 ಯುಎಸ್ ಡಾಲರ್ ಅಂದರೆ 28 ಸಾವಿರ ರೂಪಾಯಿ ವೇತನ ನೀಡುವುದಾಗಿ ತಿಳಿಸಿದೆ. ತನ್ನ ಹ್ಯೂಮನಾಯ್ಡ್ ಆಪ್ಟಿಮಸ್ ರೋಬೋಟ್ಗೆ ತರಬೇತಿ ನೀಡಲು ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಪಾಲೋ ಆಲ್ಟೋ ಕೇಂದ್ರ ಕಚೇರಿಯಲ್ಲಿ ಈ ಕೆಲಸ ಇರುತ್ತದೆ. ಟೆಸ್ಲಾ ಬೋಟ್ನ ಡೇಟಾ ಕಲೆಕ್ಷನ್ ಆಪರೇಟರ್ ಹುದ್ದೆ ಇದಾಗಿದ್ದು, ವ್ಯಕ್ತಿಗಳು ಕನಿಷ್ಠ 5.7 ಇಂದ 5.11 ಎತ್ತರ ಇರಬೇಕು ಎಂದು ತಿಳಿಸಲಾಗಿದೆ.
ಇದರು ಪೂರ್ಣ ಪ್ರಮಾಣದ ಉದಯೋಗಿಯಾಗಿ ಇರಲಿದ್ದು, ನೈಟ್ಶಿಫ್ಟ್ನಲ್ಲಿಯೇ ಕೆಲಸ ಮಾಡಬೇಕಿದೆ ಎಂದು ಟೆಸ್ಲಾ ತಿಳಿಸಿದೆ. ತನ್ನ ಡೇಟಾ ಕಲೆಕ್ಷನ್ ಟೀಮ್ಅನ್ನು ಬೆಂಬಲಿಸುವ ನಿಟ್ಟಿನಲ್ಲಿ ಉತ್ಸಾಹಿ ವ್ಯಕ್ತಗಳನ್ನು ಕಂಪನಿ ನೋಡುತ್ತಿದೆ. ಈ ಕೆಲಸದ ಪ್ರಮುಖ ಉದ್ದೇಶವ ಡೇಟಾವನ್ನು ಸಂಗ್ರಹಣೆ ಮಾಡುವುದು, ಇಂಜಿನಿಯರಿಂಗ್ ರಿಕ್ವೆಸ್ಟ್ಗಳಿಗೆ ಸಹಾಯ ಮಾಡುವುದು ಮಾತ್ರ ಇಕ್ವಿಪ್ಮೆಂಟ್ ಫೀಡ್ಬ್ಯಾಕ್ಅನ್ನು ರಿಪೋರ್ಟ್ ಮಾಡುವುದು ಎಂದು ತಿಳಿಸಿದೆ.
Ration Card Fine: ಪಡಿತರ ಚೀಟಿ ಪಡೆದ ಅನರ್ಹರಿಂದ ₹1.89 ಕೋಟಿ ದಂಡ ವಸೂಲಿ.! BPL ಕಾರ್ಡ್ ಅನರ್ಹತೆ ನಿಯಮಗಳೇನು.?
ಈ ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳು ಡೇಟಾ ಚಾಲಿತ ನಿರ್ಧಾರಗಳನ್ನು ಅತ್ಯಂತ ವೇಗವಾದ ಕೆಲಸದ ವಾತಾವರಣದಲ್ಲಿ ಮಾಡಬೇಕಾಗಿರುತ್ತದೆ. ರೊಬೊಟಿಕ್ಸ್ ಕ್ಷೇತ್ರದಲ್ಲಿ ಉತ್ಸಾಹ ಮತ್ತು ಟೆಸ್ಲಾ ಬಾಟ್ನ ಅಭಿವೃದ್ಧಿಗೆ ಕೊಡುಗೆ ನೀಡುವ ಬಲವಾದ ಬಯಕೆಯನ್ನು ಹೊಂದಿರುವ ಯಾರನ್ನಾದರೂ ನಾವು ಈ ಕೆಲಸಕ್ಕೆ ಹುಡುಕುತ್ತಿದ್ದೇವೆ ಎಂದಿದ್ದಾರೆ.
ಮಾಡಬೇಕಾಗಿರೋದೇನು: ಡೇಟಾ ಸಂಗ್ರಹಣೆಗಾಗಿ ಪ್ರತಿದಿನ ಪೂರ್ವನಿರ್ಧರಿತ ಪರೀಕ್ಷಾ ಮಾರ್ಗದಲ್ಲಿ ನಡೆಯಬೇಕಾಗುತ್ತದೆ. ಯೋಜನೆಯ ಅವಶ್ಯಕತೆಗಳ ಆಧಾರದ ಮೇಲೆ ಗೊತ್ತುಪಡಿಸಿದ ಚಲನೆಗಳು ಮತ್ತು ಕ್ರಿಯೆಗಳನ್ನು ನಿರ್ವಹಿಸುವಾಗ ಮೋಷನ್ ಕ್ಯಾಪ್ಚರ್ ಸೂಟ್ ಮತ್ತು ವರ್ಚುವಲ್ ರಿಯಾಲಿಟಿ ಹೆಡ್ಸೆಟ್ ಅನ್ನು ಧರಿಸಬೇಕಾಗುತ್ತದೆ. ರೆಕಾರ್ಡಿಂಗ್ ಸಾಧನಗಳನ್ನು ಸ್ಟಾರ್ಟ್ ಮಾಡುವುದು ಮತ್ತು ನಿಲ್ಲಿಸುವುದು, ಸಣ್ಣ ಉಪಕರಣಗಳು ಮತ್ತು ಸಾಫ್ಟ್ವೇರ್ ಡೀಬಗ್ ಮಾಡುವಿಕೆಯನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಇಕ್ವಿಪ್ಮೆಂಟ್ಗಳ ಕಾರ್ಯಕ್ಷಮತೆಯ ಬಗ್ಗೆ ಪ್ರತಿಕ್ರಿಯೆಯನ್ನು ನೀಡಬೇಕಿರುತ್ತದೆ.
ಶಿಫ್ಟ್ ಸಮಯದಲ್ಲಿ ಸಂಗ್ರಹಿಸಿದ ಡೇಟಾವನ್ನು ವಿಶ್ಲೇಷಿಸಿ ಮತ್ತು ವರದಿ ಮಾಡಬೇಕಾಗುತ್ತದೆ. ನಿಯೋಜಿಸಲಾದ ಉಪಕರಣಗಳು ಸರಿಯಾದ ಮತ್ತು ಸುರಕ್ಷಿತ ಕೆಲಸದ ಸ್ಥಿತಿಯಲ್ಲಿವೆ ಮತ್ತು ಸುರಕ್ಷಿತವಾಗಿ ವಿವಿಧ ಸಂಗ್ರಹಣೆ ಸೈಟ್ಗಳಿಗೆ ಸಾಗಿಸಲಾಗಿದೆ ಎನ್ನುವುದನ್ನು ತಿಳಿಸಬೇಕಿರುತ್ತದೆ. ಸಕಾಲಿಕವಾಗಿ ಪರಿಹರಿಸಬೇಕಾದ ಸಮಸ್ಯೆಗಳು ಉದ್ಭವಿಸಿದಾಗ ಟೀಮ್ ಜೊತೆಗೆ ಸಂವಹನ ನಡೆಸಬೇಕಿರುತ್ತದೆ ಎಂದು ಹೇಳಿದೆ.