ಲಕ್ನೋ:- ಯುವಕನೊಬ್ಬ ತನ್ನನ್ನು ತಾನೇ ಕಿಡ್ನಾಪ್ ಆಗಿದ್ದೇನೆಂದು ಹೇಳಿಕೊಂಡು ಮನೆಯವರನ್ನು ನಂಬಿಸಿದ ಘಟನೆ ಲಕ್ನೋದಲ್ಲಿ ಜರುಗಿದೆ.
BBK11: ಬಿಗ್ ಮನೆಯಿಂದ ತ್ರಿವಿಕ್ರಮ್ ಔಟ್? ಗಳಗಳನೆ ಕಣ್ಣೀರಿಟ್ಟ ಭವ್ಯಾ!
ಮನೆಯವರು ಪ್ರೀತಿಸುತ್ತಾರಾ ಎಂದು ಪರೀಕ್ಷಿಸಲು ಆತ ಈ ರೀತಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಡಿಸೆಂಬರ್ 20ರಂದು 112 ಸಹಾಯವಾಣಿಗೆ ಪೊಲೀಸರಿಗೆ ಕಾಣೆಯಾಗಿರುವ ಬಗ್ಗೆ ಫೋನ್ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಕರೆ ಮಾಡಿದ ವ್ಯಕ್ತಿ ತನ್ನನ್ನು ಅನೂಪ್ ಪಟೇಲ್ ಎಂದು ಹೇಳಿಕೊಮಡಿದ್ದು, ಗೋಮತಿನಗರ ರೈಲ್ವೆ ನಿಲ್ದಾಣದ ಬಳಿ ತನ್ನನ್ನು ಯಾರೋ ಅಪಹರಿಸಿರುವುದಾಗಿ ಹೇಳಿಕೊಂಡಿದ್ದಾನೆ. ಅನೂಪ್ ತನ್ನನ್ನು ಆಟೋದಲ್ಲಿ ಬಂದವರು ಅಪಹರಣ ಮಾಡಿದರು ಎಂದಿದ್ದಾನೆ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕ ಕೆಲವೇ ನಿಮಿಷಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಪೊಲೀಸರು ಸುಳಿವಿಗಾಗಿ ಹುಡುಕಾಟ ನಡೆಸಿದರು. ಅನೂಪ್ ಪಟೇಲ್ ಒದಗಿಸಿದ ಮೊಬೈಲ್ ಸಂಖ್ಯೆಯನ್ನು ಬಳಸಿ, ಪೊಲೀಸರು ಆತನ ಸ್ಥಳವನ್ನು ಪತ್ತೆಹಚ್ಚಿದರು.
ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ, ಅನೂಪ್ ಯಾವುದೇ ಟೆನ್ಷನ್ ಇಲ್ಲದೆ ಶಾಂತವಾಗಿ ಕುಳಿತಿರುವುದನ್ನು ಕಂಡು ಆಶ್ಚರ್ಯಚಕಿತರಾದರು. ವಿಚಾರಣೆ ನಡೆಸಿದಾಗ ಇಡೀ ಕಥೆಯನ್ನು ತಾನೇ ಹೆಣೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ತಾನೇ ಮನೆಯಿಂದ ದೂರ ಬಂದಿರುವುದಆಗಿ ಹೇಳಿರುವ ಆತ ಮನೆಯವರಿಗೆ ತನ್ನ ಮೇಲೆ ಪ್ರೀತಿ ಇದೆಯೇ ಎಂದು ಪರೀಕ್ಷಿಸಲು ಕಿಡ್ನಾಪ್ ನಾಟಕವಾಡಿರುವುದಾಗಿ ಹೇಳಿಕೊಂಡಿದ್ದಾನೆ.