ಹುಬ್ಬಳ್ಳಿ : ನಗರದ ಚೇತನ ಬ್ಯುಸಿನೆಸ್ ಸ್ಕೂಲ್ ನಲ್ಲಿ 2022-2024 ನೇ ಸಾಲಿನ ವಿದ್ಯಾರ್ಥಿಗಳ ಪದವಿ ಪ್ರಮಾಣ ಪತ್ರ ವಿತರಿಸುವ ಉದ್ದೇಶಕ್ಕಾಗಿ ಗ್ರಾಜುವೇಷನ್ ಡೇ ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರಿನಲ್ಲಿ ಕಂಡಕ್ಟರ್-ಡ್ರೈವರ್ ಮೇಲೆ ಹಲ್ಲೆ ಕೇಸ್ ಹೆಚ್ಚಳ: ಕ್ರಮಕ್ಕೆ ಮುಂದಾದ BMTC ಅಧಿಕಾರಿಗಳು!
ವಿದ್ಯಾರ್ಥಿಗಳು ಗೌನ್ ಗಳನ್ನು ಧರಿಸಿ ಸಂಸ್ಥೆ ಆವರಣದಿಂದ ಕಾರ್ಯಕ್ರಮದ ಸ್ಥಳ ಪ್ರೆಸಿಡೆಂಟ್ ಹೋಟೆಲವರೆಗೆ ಮೆರವಣಿಗೆಯಲ್ಲಿ ನಡೆದರು.
ಡಾ.ಕೆ. ಬಿ. ಗುಡಸಿ, ವಿಶ್ರಾಂತ ಕುಲಪತಿಗಳು, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮುಖ್ಯ ಅತಿಥಿಗಳಾಗಿ ಸಂಜೀವ, ರಿಲಯನ್ಸ್ ವಿಶ್ರಾಂತ ಸಿಇಓ ಮತ್ತು ಡಾ . ಎ. ಎಚ್. ಚಚಡಿ ಗೌರವಾನ್ವಿತ ಅಥಿತಿಗಳಾಗಿ ಭಾಗವಹಿಸಿದ್ದರು. ಡಾ. ವಿ.ಎಂ.ಕೊರವಿ ಅಧ್ಯಕ್ಷತೆ ವಹಿಸಿದ್ದರು ಹಾಗೆಯೇ ಎಲ್ಲ ವಿದ್ಯಾರ್ಥಿಗಳ ಪಾಲಕರು, ಆಹ್ವಾನಿತರು ಭಾಗವಹಿಸಿದ್ದರು.
ಡಾ. ಎ ಎಚ್ ಚಚಡಿಯವರು ಮಾತನಾಡುತ್ತ ಕೆಲಸದಲ್ಲಿ ನೈತಿಕತೆಯನ್ನು ಕಾದುಕೊಳ್ಳಬೇಕು ಹಾಗೂ ವೃತ್ತಿಯಲ್ಲಿ ಯಶಸ್ವಿಯಾಗಲು ಸಂಸ್ಥೆಯ ಸಂಸ್ಕೃತಿಯನ್ನು ಅರಿತುಕೊಂಡರೆ ಸಂಸ್ಥೆಯಲ್ಲಿ ನೆಲೆಗೊಳ್ಳಲು ಸಹಾಯಕವಾಗುತ್ತದೆ ಎಂದರು
ಗೌರವ ಅತಿಥಿಗಳಾದ ಡಾ. ಕೆ ಬಿ ಗುಡಸಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ವೃತ್ತಿ ಮತ್ತು ಸಾಧನೆಯಲ್ಲಿ ಜ್ಞಾನದ ಬಳಕೆಯ ಬಗ್ಗೆ ವಿವರಿಸಿದರು. ಜ್ಞಾನಾರ್ಜನೆ ಮತ್ತು ಕೌಶಲತೆಯು ನಿರಂತರವಾಗಿ ನವೀಕರಣ ಹೊಂದುವದಾಗಿದೆ ಎಂದರು.
ಇದೇ ಸಮಯದಲ್ಲಿ ಅತಿಥಿಗಳಿಂದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ನಿರ್ದೇಶಕ ಕೊರವಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ವಚನ ಬೋಧಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು ಜೀವನದ ಸಾಧನೆಯಲ್ಲಿ ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿದರು. ಸಂಸ್ಥೆಯು ಅವರ ವಿಶ್ವಾಸಕ್ಕೆ ಆಭಾರಿಯಾಗಿದೆ. ವಿದ್ಯಾರ್ಥಿಗಳಿಗೆ ತಂದೆತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದರು.
ಪ್ರೊ. ಶ್ರೇಯಸ್ ಮುರ್ಡೇಶ್ವರ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು ಮತ್ತು ಗೌರವ ಅಥಿತಿಗಳಾದ ಪ್ರೊ. ಸಂಜೀವ ಘನತೆ ಮತ್ತು ಪ್ರೊ. ಎ ಎಚ್ ಚಚಡಿ ಅವರನ್ನು ಪ್ರೊ. ಭಾರ್ಗವ ರೇವಣಕರ್ ಹಾಗು ಪ್ರೊ. ರಮಕಾಂತ ಕುಲಕರ್ಣಿ ಅನುಕ್ರಮವಾಗಿ ಪರಿಚಯಿಸಿದರು. ಡಾ. ಮಂಗಳಾ ಯರಗಟ್ಟಿ ಸ್ವಾಗತಿಸಿದರು, ಡಾ. ಎಂ ಎನ್ ಮಾಣಿಕ್ ವಂದಿಸಿದರು, ಕಾರ್ಯಕ್ರಮದ ಸಂಯೋಜಕರಾದ ಡಾ. ಅನಿರುದ್ಧ ಅಂಕೋಲೆಕರ ಪ್ರಮಾಣಪತ್ರಗಳ ವಿತರಣೆಯನ್ನು ನಡೆಸಿದರು, ಪ್ರೊ. ಶ್ವೇತಾ ಸಜ್ಜನರ ನಿರೂಪಿಸಿದರು.