ಚಿಕ್ಕಮಗಳೂರು:-ಜಿಲ್ಲೆಯ ಆಲ್ದೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ. ಇದರಿಂದಾಗಿ ಆಲ್ದೂರು ಸುತ್ತ ಮುತ್ತಲಿನ 10 ಹಳ್ಳಿಗಳಲ್ಲಿ ಶನಿವಾರ ರಾತ್ರಿಯಿಂದ ಇಂದು ರಾತ್ರಿ 9:00 ಗಂಟೆ ವರೆಗೂ ನಿಷೇಧಾಜ್ಞೆ ಜಾರಿ ಮಾಡಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
CM ಸಿದ್ದರಾಮಯ್ಯಗೆ ತಪ್ಪದ ಸಂಕಷ್ಟ: ಮತ್ತೊಂದು ಸ್ಪೋಟಕ ಸಾಕ್ಷಿ ಬಯಲು ಮಾಡಿದ “ಮುಡಾ” ದೂರುದಾರ!
ತುಡುಕೂರು, ಆಲ್ದೂರುಪುರ, ಹೊಸಹಳ್ಳಿ, ತೋರಣಮಾವು ಮತ್ತು ಚಿತ್ತುವಳ್ಳಿ ಸೇರಿದಂತೆ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.
ವಿದ್ಯುತ್ ತಂತಿ ತುಳಿದು ನಿನ್ನೆ ಕಾಡಾನೆ ಮೃತಪಟ್ಟಿತ್ತು. ಸಾವನ್ನಪ್ಪಿದ ಸಲಗದ ಬಳಿ 23 ಕಾಡಾನೆಗಳು ಬೀಡು ಬಿಟ್ಟಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮೃತಪಟ್ಟ ಸಲಗದ ಬಳಿ ಇರುವ 23 ಕಾಡಾನೆಗಳ ಹಿಂಡು ಬೀಡು ಬಿಟ್ಟಿರುವ ಹಿನ್ನೆಲೆಯಲ್ಲಿ, ಮೃತಪಟ್ಟದ ಆನೆ ಬಳಿ ತೆರಳಲು ಅರಣ್ಯ ಇಲಾಖೆಯ ಸಿಬ್ಬಂದಿ ಪರದಾಡುತ್ತಿದ್ದಾರೆ. ಇನ್ನು, ಕಾಡಾನೆಗಳ ಹಿಂಡು ಅರಣ್ಯ ಇಲಾಖೆ ಮತ್ತು ಇಟಿಎಫ್ ಸಿಬ್ಬಂದಿಗಳ ಮೇಲೆ ದಾಳಿಗೆ ಮುಂದಾಗುತ್ತಿವೆ. ಕಾಡಾನೆಗಳು ತಾವಾಗಿಯೇ ತೆರಳುವವರೆಗು ಸಾವನ್ನಪ್ಪಿದ ಸಲಗದ ಬಳಿ ತೆರಳದಂತೆ ಸಿಬ್ಬಂದಿಗಳಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಸಾವನ್ನಪ್ಪಿದ ಸಲಗ ವಿಕ್ರಾಂತ್ ಎಂದು ಮಾಹಿತಿ ನೀಡಿದ್ದಾರೆ.