ಅಂಕೋಲಾ: ಮುಂದಿನ ದಿನಗಳಲ್ಲಿ ಯಾವ ಶಾಲೆ ಮಕ್ಕಳು ನೆಲದ ಮೇಲೆ ಕುಳಿತು ವಿದ್ಯಾರ್ಜನೆ ಮಾಡಬಾರದು. ಸುಸಜ್ಜಿತ ಆಸನಗಳ ವ್ಯವಸ್ಥೆ ಸರ್ಕಾರದಿಂದಲೇ ಜಾರಿಯಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಯಾವ ಶಾಲೆ ಮಕ್ಕಳು ನೆಲದ ಮೇಲೆ ಕುಳಿತು ವಿದ್ಯಾರ್ಜನೆ ಮಾಡಬಾರದು. ಸುಸಜ್ಜಿತ ಆಸನಗಳ ವ್ಯವಸ್ಥೆ ಸರ್ಕಾರದಿಂದಲೇ ಜಾರಿಯಾಗಲಿದೆ.
ಇಂತಹ ಸೌಕರ್ಯಗಳಿಂದ ಮುಂದೆ ಸರ್ಕಾರಿ ಶಾಲೆಗಳಿಗೆ ಮಕ್ಕಳು ಓಡೋಡಿ ಬರುತ್ತಾರೆ ಎಂದರು. ನಾನು ಈ ಸ್ಥಾನದಲ್ಲಿ ಇದ್ದೇನೆ ಎಂದರೆ ಅದು ದೇವದತ್ತ ಕಾಮತ ಅವರ ಕೊಡುಗೆ. ನಾನು ಯಾವ ಪಕ್ಷ ಅನ್ನುವುದಕ್ಕಿಂತ ಬಂಗಾರಪ್ಪನವರ ಪಕ್ಷವಾಗಿದೆ. ಅವರು ಎಲ್ಲಿದ್ದಾರೋ ಅಲ್ಲಿ ನಾನಿದ್ದೆ.
Mukesh Ambani: ಅಯೋಧ್ಯೆ ರಾಮಮಂದಿರಕ್ಕೆ ಅಂಬಾನಿ ಫ್ಯಾಮಿಲಿ ಕೊಟ್ಟ ದೇಣಿಗೆ ಎಷ್ಟು ಗೊತ್ತಾ..?
ಇಂತಹ ಸ್ಥಾನದಲ್ಲಿ ಇದ್ದೇನೆ ಎಂದರೆ ಅದು ಹಲವರ ಮಾರ್ಗದರ್ಶನ ಮತ್ತು ಕೊಡುಗೆಯಾಗಿದೆ ಎಂದು ಹೇಳಿದರು. ಡಾ. ದಿನಕರ ದೇಸಾಯಿ ಅವರಂತಹ ಅನೇಕ ಮಹಾನುಭಾವರ ಉದಾತ್ತ ಯೋಚನೆ, ಶೈಕ್ಷಣಿಕ ಪ್ರೀತಿಯಿಂದ ಕೋಟ್ಯಂತರ ವಿದ್ಯಾರ್ಥಿಗಳು ಈ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದ ಅವರು, ಕಲಿತ ಶಾಲೆಯ ಅಭಿವೃದ್ಧಿಯ ಜವಾಬ್ದಾರಿ ಹೊರಬೇಕು ಎಂದು ಹೇಳಿದರು.