ಬೆಳಗಾವಿ:- ಜಿಲ್ಲೆಯ ಅಥಣಿ ತಾಲೂಕಿನ ಯಲಹಡಗಿ ಗ್ರಾಮದಿಂದ ಅಥಣಿ ಮತ್ತು ಯಕಂಚ್ಚಿಗೆ ಹೋಗುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ.
ಪ್ರತಿಭಟನೆ ವೇಳೆ ಸಿದ್ರು ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಲು ತುಂಬಾ ತೊಂದರೆ ಆಗ್ತಿದೆ ಬೆಳಗ್ಗೆ 7 ಘಂಟೆಗೆ ಬಸ್ ಗೋಸ್ಕರ ನಿಲ್ದಾಣದಲ್ಲಿ ಕಾದು ಕಾದು ಸುಸ್ತ ಆಗ್ತಾ ಇದ್ದಾರೆ ವಿದ್ಯಾರ್ಥಿಗಳು ಯಾವುದೇ ಬಸ್ಸು ನಿಲ್ಲಿಸೋದಿಲ್ಲ ಹೀಗಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಬಸ್ ಸಿಗದೆ ವಿದ್ಯಾರ್ಥಿಗಳು ವಾಪಸ್ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಆದಷ್ಟು ಬೇಗನೆ ಎಲ್ಲಾ ಬಸ್ ಗಳು ನಿಲ್ಲಿಸಿ ವಿದ್ಯಾರ್ಥಿಗಳನ್ನು ತೊಗೋಂದ ಹೋಗಬೇಕು ಎಂದರು.
ಈ ಹಿಂದೆ ಎರಡು ಬಾರಿ ಅಥಣಿ ಬಸ್ ಡಿಪೋ ಮ್ಯಾನೇಜರ್ ಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದರು ಕ್ಯಾರೇ ಎನ್ನದ ಡಿಪೋ ಮ್ಯಾನೇಜರ್ ನ ವಿದ್ಯಾರ್ಥಿಗಳು ಮತ್ತು ಪಾಲಕರು ತರಾಟೆಗೆ ತೆಗೆದುಕೊಂಡರು.
ಅದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರು ಊರಿನ ಯುವಕರು ಗ್ರಾಮಕ್ಕೆ ಕರೆಸಿ ಮಾತನಾಡಿ ದಿನಾಲೂ ಬೆಳಿಗ್ಗೆ ಬಸ್ ಬಿಡುವುದಾಗಿ ಹೇಳಿದ್ದಾರೆ.
ಡಿಪೋ ಮ್ಯಾನೇಜರ್ ನಾಳೆಯಿಂದಲೇ ಬಸ್ ಬಿಡುವುದಾಗಿ ಹೇಳಿದ ಮೇಲೆ ವಿದ್ಯಾರ್ಥಿಗಳು ಮತ್ತು ಪಾಲಕರು ಪ್ರತಿಭಟನೆ ಕೈ ಬಿಟ್ಟಿದ್ದಾರೆ.