ಶಾಲಾ ಮಕ್ಕಳಿಗೆ ನೀಡುವ ಎಸ್ಬಿಐಎಫ್ ಆಶಾ ಸ್ಕಾಲರ್ʼಶಿಪ್ ಪ್ರೋಗ್ರಾಮ್ ಎಸ್ಬಿಐ ಫೌಂಡೇಷನ್ನ ಒಂದು ಶೈಕ್ಷಣಿಕ ಆಶಯದ – ಇಂಟಿಗ್ರೇಟೆಡ್ ಮಿಷನ್ನ ಉಪಕ್ರಮವಾಗಿದೆ. ಈ ಸ್ಕಾಲರ್ಶಿಪ್ ದೇಶದ ಬಡಕುಟುಂಬದ ವಿದ್ಯಾರ್ಥಿಗಳು / ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ನಿರಂತರವಾಗಿ ಮುಂದುವರೆಸಲು ಹಣಕಾಸು ಸಹಾಯ ಮಾಡುವ ಉದ್ದೇಶ ಹೊಂದಿದೆ.
Buddy4study ಈ ಸ್ಕಾಲರ್ಶಿಪ್ ಅನ್ನು ಅನುಷ್ಠಾನ ಮಾಡುವ ಪಾಲುದಾರ ಆಗಿದೆ. ಆದ್ದರಿಂದ ಈ ವೆಬ್ಸೈಟ್ನ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹತೆ, ಅರ್ಜಿ ವಿಧಾನ, ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಳನ್ನು ಕೆಳಗಿನಂತೆ ನೀಡಲಾಗಿದೆ.
SBIF ಆಶಾ ಸ್ಕಾಲರ್ಶಿಪ್ ಎಸ್ಬಿಐ ಫೌಂಡೇಶನ್ನ ಉಪಕ್ರಮವಾಗಿದ್ದು, ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಈ ವಿದ್ಯಾರ್ಥಿವೇತನವು ಭಾರತದಾದ್ಯಂತ ಕಡಿಮೆ ಆದಾಯದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದ್ದು, ಅವರ ಶಿಕ್ಷಣದ ಮುಂದುವರಿಕೆಯನ್ನು ಖಾತ್ರಿಪಡಿಸುತ್ತದೆ.
ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?:
- 6 ರಿಂದ 12 ನೇ ತರಗತಿಯವರೆಗಿನ ಶಾಲಾ ವಿದ್ಯಾರ್ಥಿಗಳು,
- ಅಗ್ರ 100 ಎಸ್.ಬಿ.ಐ.ಎಫ್ ವಿಶ್ವವಿದ್ಯಾಲಯಗಳು/ಕಾಲೇಜುಗಳ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಐಐಟಿಗಳ ಪದವಿಪೂರ್ವ ವಿದ್ಯಾರ್ಥಿಗಳು ಮತ್ತು ಐಐಎಂಗಳ ಎಂಬಿಎ/ಪಿಜಿಡಿಎಂ ಕೋರ್ಸ್ಗಳನ್ನು ಅನುಸರಿಸುವ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.
- ಅರ್ಜಿದಾರರು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 75% ಅಂಕಗಳನ್ನು ಗಳಿಸಿರಬೇಕು.
- ಕುಟುಂಬದ ವಾರ್ಷಿಕ ಆದಾಯವು ರೂ.6 ಲಕ್ಷದವರೆಗೆ ಇರಬೇಕು (6-12ನೇ ತರಗತಿಯ ವಿದ್ಯಾರ್ಥಿಗಳಾದರೆ ರೂ. 3 ಲಕ್ಷದವರೆಗೆ).
ಎಷ್ಟು ಸ್ಕಾಲರ್ ಶಿಪ್ ಲಭ್ಯ?:
- 6 ರಿಂದ 12ನೇ ತರಗತಿಯವರೆಗೆ: 15,000 ರೂ.
- ಯುಜಿ ವಿದ್ಯಾರ್ಥಿಗಳು: 50,000 ರೂ.
- ಪಿಜಿ ವಿದ್ಯಾರ್ಥಿಗಳು: 70,000 ರೂ.
- ಐಐಟಿಗಳ ಯುಜಿ ವಿದ್ಯಾರ್ಥಿಗಳು: 2,00,000 ರೂ.
- ಐಐಎಂಗಳ ಎಂಬಿಎ ವಿದ್ಯಾರ್ಥಿಗಳು: 7,50,000 ರೂ.
ಅರ್ಜಿ ಸಲ್ಲಿಕೆ ಹೇಗೆ?;
ಅರ್ಹ ವಿದ್ಯಾರ್ಥಿಗಳು www.b4s.in/nwmd/SBIFS7 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
01-10-2024
ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ. ಇತರೆ ಯಾವುದೇ ಮಾರ್ಗದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಆದ್ದರಿಂದ ಪೋಷಕರ, ಮಾರ್ಗದರ್ಶಕರ ಅಥವಾ ಶಿಕ್ಷಕರ ಸಹಾಯ ಪಡೆದು ಅರ್ಜಿ ಸಲ್ಲಿಸಬಹುದು.