ಉತ್ತರ ಪ್ರದೇಶ:- ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆ ನಡೆದಿದ್ದು, ಊಟದ ಬಾಕ್ಸ್ನಲ್ಲಿ ಮಾಂಸಾಹಾರ ತಂದಿದ್ದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ನರ್ಸರಿ ಶಾಲೆಯ ವಿದ್ಯಾರ್ಥಿಯನ್ನು ಅಮಾನತುಗೊಳಿಸಿರುವ ಘಟನೆ ಜರುಗಿದೆ.
ನಿಮ್ಮ ಕೈಯಡಿ ಇರುವ ಅಧಿಕಾರಿಗಳನ್ನು ಸರ್’ ಎಂದು ಕರೆಯಬೇಡಿ: ಸಚಿವರಿಗೆ ಸಿಎಂ ಖಡಕ್ ಸೂಚನೆ!
ವಿದ್ಯಾರ್ಥಿಯ ತಾಯಿ ಚಿತ್ರೀಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ ಪ್ರಾಂಶುಪಾಲರು ಮತ್ತು ಮಗುವಿನ ತಾಯಿ ನಡುವೆ ತೀವ್ರ ವಾಗ್ವಾದ ನಡೆದಿರುವುದನ್ನು ತೋರಿಸುತ್ತದೆ. ಎಲ್ಲರಿಗೂ ನಾನ್ ವೆಜ್ ತಿನ್ನಿಸಿ ಅವರನ್ನು ಇಸ್ಲಾಂಗೆ ಪರಿವರ್ತಿಸುವ ಬಗ್ಗೆ ಬಾಲಕ ಮಾತನಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಒಟ್ಟಾರೆ ನಾನ್ ವೆಜ್ ತಂದ ಅಂತ ಶಾಲೆಯಿಂದಲೆ ಅಮಾನತು ಮಾಡಿರುವ ಆದೇಶ ಎಷ್ಟು ಸರಿ ತಪ್ಪು ಎಂಬುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.