ಇದು ಟ್ರೇಲರ್ ಅಷ್ಟೇ.. ಫಿಕ್ಚರ್ ಅಬಿ ಬಾಕೀ ಹೈ ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿದರು. ಬೆಳಗಾವಿಯಲ್ಲಿ ವಕ್ಫ್ ವಿರೋಧಿ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ರಮೇಶ ಜಾರಕಿಹೊಳಿ ತಾಕತ್ತಿನ ಟ್ರೈಲರ್. ದಾವಣಗೆರೆಯಲ್ಲಿ ಪಿಚ್ಚರ್ ಅಭಿ ಬಾಕಿ ಹೈ. ನಾವೆಲ್ಲಾ ವೇದಿಕೆಯಲ್ಲಿ ಕುಳಿತವರು ಮೂರು, ನಾಲ್ಕು ಐದು ಸಲ ಶಾಸಕರಾದವರು. ನಮ್ಮಲ್ಲಿ ಹಾಲಿ ಶಾಸಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಯಾರನ್ನು ಸಿಎಂ, ರಾಜ್ಯಾಧ್ಯಕ್ಷ ಮಾಡಲು ನಾವು ಇಲ್ಲಿ ಸೇರಿಲ್ಲ. ರೈತರ ಭೂಮಿ ಉಳಿಸಲು ಹೋರಾಟ ಮಾಡಲು ಸೇರಿದ್ದೇವೆ.. ಕರ್ನಾಟಕವನ್ನು ರಾಮರಾಜ್ಯ ಮಾಡಲು ನಾವು ತೀರ್ಮಾನ ಮಾಡಿದ್ದೇವೆ. ಎಲ್ಲಾ ಸಮಾಜದ ಮುಖಂಡರು ಇಲ್ಲಿ ಸೇರಿದ್ದೇವೆ. ಅಪ್ಪಾಜಿ ಎಂದು ಯಾರನ್ನು ಕಾಲು ಬಿಳುವ ಮಕ್ಕಳು ನಾವಲ್ಲ. ಒಂದು ಲಕ್ಷ ಹೆಚ್ಚು ಎಕರೆ ಪ್ರದೇಶ ವಕ್ಪ್ ಗೆ ಸೇರಿದ್ದು ಅಂತ ಹೇಳಿತ್ತಾರೆ. ಇದು ಹಿಂದು ಸಮಾಜದ ಭೂಮಿ ಇದೆ. ನಮ್ಮಗೆ ಸೈತಾನ್ ಅಂತಾನೆ, ಜಮೀರ್ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಅಂಬೇಡ್ಕರ್ ಅವರು ನಿಧನರಾದಾಗ ಅಂತ್ಯಕ್ರಿಯೆಗೆ ಜಾಗ ಕೊಡಲಿಲ್ಲ. ಇಂದು ಅವರ ಫೋಟೊ ಹಿಡಿದುಕೊಂಡು ಕಾಂಗ್ರೆಸ್ ನವರು ಓಡಾಡ್ತಾರೆ. ನೆಹರು, ಇಂದಿರಾಗಾಂಧಿ ಎಲ್ಲರದ್ದೂ ಕೂಡಿದ್ರೇ ನಾಲ್ಕೈದು ನೂರು ಎಕರೆ ಜಮೀನು ಇದೆ. ಅಂಬೇಡ್ಕರ್ ಅವರ ಶವ ತೆಗೆದುಕೊಂಡು ಹೋಗಲು ಸಹಾಯ ಮಾಡಲಿಲ್ಲ. ಅವರ ಕಾರು ಮಾರಿ ವಿಮಾನದಲ್ಲಿ ಮುಂಬೈಗೆ ಶವ ತಂದು ಅಂತ್ಯಸಂಸ್ಕಾರ ಮಾಡ್ತಾರೆ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಟ್ಟಿದ್ದು ಮೋದಿಯವರು. ಕಾಂಗ್ರೆಸ್ ಒಂದು ಸುಡುವ ಮನೆ, ದಲಿತರು ಎಂದು ಕಾಂಗ್ರೆಸ್ ಗೆ ಹೋಗಬೇಡಿ. ದಲಿತರನ್ನ ಕಾಂಗ್ರೆಸ್ ಉದ್ದಾರ ಮಾಡಲ್ಲ ಅಂತಾ ಅಂಬೇಡ್ಕರ್ ಹೇಳಿದ್ದಾರೆ. ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ವಕ್ಫ್ ಇಲ್ಲ ಅದನ್ನ ಕಿತ್ತು ಹಾಕುವ ಕೆಲಸ ಮಾಡುತ್ತೆ. ಜಾತಿ ಜಾತಿ ಅಂತಾ ಸುಮ್ಮನೆ ಕುಳತ್ರೇ ಒಂದಾಗದಿದ್ರೇ ಹಿಂದೂಗಳಿಗೆ ಉಳಿಗಾಲವಿಲ್ಲ. ಮಮತಾ ಬ್ಯಾನರ್ಜಿ ಅದೊಂದು ರಾಕ್ಷಸಿ ಎಂದು ಕಿಡಿಕಾರಿದರು.
ರೈತರ, ಸನಾತನ ಹಿಂದು ಧರ್ಮಕ್ಕಾಗಿ ಪ್ರಾಣ ಹೋದ್ರು ಪರವಾಗಿಲ್ಲ. ನಾನು ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಅತ್ಯಂತ ಹಿಂದುಳಿದ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಮಾಡಿದೆ. ಇನ್ನಿಲ್ಲದ ಚಿತ್ರ ಹಿಂಸೆಯನ್ನು ನನಗೆ ನೀಡುತ್ತಿದ್ದಾರೆ. ದಲಿತರು, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೇಳಿದ್ದೇನೆ. ಮಂತ್ರಿಗಿರಿಯಾಗಿ ನಾನು ಯಾರು ಬಳಿ ಹೋಗಿಲ್ಲ. ನನ್ನ, ರಮೇಶ್ ಜಾರಕಿಹೊಳಿ ಬ್ಲ್ಯಾಕ್ ಮೆಲ್ ಮಾಡಿದ್ರು ಬಗಿಲ್ಲ. ನಾನು, ರಮೇಶ್ ಜಾರಕಿಹೊಳಿ ಯಾರಿಗೂ ಬಗ್ಗಲ್ಲ. ರಮೇಶ್ ಜಾರಕಿಹೊಳಿ ಬಂದ್ರು ಅಂತ ಸರ್ಕಾರ ಆಯಿತು.ನೀ ಎಲ್ಲಿದ್ದಿ ಅಪ್ಪ ಅಣ್ಣ. ನಮ್ಮನ್ನು ಆಪರೇಷನ್ ಮಾಡ್ತಾರೆ ಅಂತ. ನಮ್ಮಗೂ ಎಲ್ಲಾ ಗೊತ್ತಿದೆ. ನಮ್ಮಗೂ ಎಲೆಲ್ಲಿ, ಏನ್ ಎನು ಎಂಬುದು ಗೊತ್ತಿದೆ ಬಿಎಸ್ ವೈ ವಿರುದ್ಧ ಕುಟುಕಿದರು.
ದಾವಣಗೆರೆಯಲ್ಲಿ ಹಿಂದೂಗಳ ತಾಕತ್ತು ಪ್ರದರ್ಶನ ಮಾಡೋ ಸಮಾವೇಶ ಮಾಡ್ತೇವಿ. ನಾವು ವಕ್ಪ್ ವಿರುದ್ಧ ಹೋರಾಟ ಮಾಡ್ತೀವಿ. ಮುಂದಿನ ಬಜೆಟ್ ನಲ್ಲಿ ವಕ್ಪ್ ಕಾನೂನಿಗೆ ತಿದ್ದುಪಡಿ ಬರಲಿದೆ. ಸಮಸ್ತ ಹಿಂದೂಗಳ ಶಕ್ತಿ ಪ್ರದರ್ಶನವನ್ನು ದಾವಣಗೆರೆಯಲ್ಲಿ ಮಾಡುತ್ತೇವೆ. ರಮೇಶ್, ಲಿಂಬಾವಳಿ ಒಂದು ಕೋಟಿ ಘೋಷಣೆ ಮಾಡಿದ್ದಾರೆ. ನಾನು ವಿಜಯಪುರದಿಂದ ಒಂದು ಕೋಟಿ ರೂಪಾಯಿ ಘೋಷಣೆ ಮಾಡ್ತಿವಿ. ರೈತರಿಗಾಗಿ ನಾವೆಲ್ಲರೂ ಹೋರಾಟ ಮಾಡೋಣ. ವಕ್ಪ್ ಕಾನೂನು ರದ್ದು ಆದರೆ ಪ್ರಧಾನಿ ಆದಷ್ಟೆ ಸಂತೋಷ ಆಗಲಿದೆ. ಜನರ ಹಣ ಲೂಟಿ ಮಾಡಿ ದುಬೈ, ಮಾರಿಷಸ್ ನಲ್ಲಿ ಆಸ್ತಿ ಮಾಡಿದ್ರೆ ಏನ್ ಉಪಯೋಗ. ದಾವಣಗೆರೆಯಲ್ಲಿ ಸಮಾವೇಶದಲ್ಲಿ 25 ಲಕ್ಷ ಜನರನ್ನ ಸೇರಿಸುತ್ತೇವೆ. ದಾವಣಗೆರೆ ಸಮಾವೇಶಕ್ಕೆ ಪ್ರಧಾನಿ ಮೋದಿಯವರನ್ನ ಕರೆಯಿಸುವ ಚಿಂತನೆ ಇದೆ ಎಂದರು.