ಬೆಳಗಾವಿ: ವಕ್ಫ್ ಭೂ ಕಬಳಿಕೆ ವಿರೋಧಿಸಿ ನಡೆದ ಸಮಾವೇಶದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಹೋರಾಟ ರಾಜಕೀಯ ಹೋರಾಟ ಅಲ್ಲಾ. ಬಸನಗೌಡ ಪಾಟೀಲ್ ಅವರನ್ನ ಲೀಡರ್ ಮಾಡಲು ಹೊರಟ್ಟಿಲ್ಲ.ಕರ್ನಾಟಕದಲ್ಲಿ ಅತ್ಯಂತ ಪವರ್ ಫುಲ್ ನಾಯಕರಾಗಿ ಯತ್ನಾಳ್ ಆಗಿದ್ದಾರೆ. ಯಡಿಯೂರಪ್ಪ ಅವರನ್ನ ಮುಖ್ಯಮಂತ್ರಿ ಮಾಡಿದ ರಮೇಶ್ ಅವರನ್ನ ಲೀಡರ್ ಮಾಡಬೇಕಿಲ್ಲ ಆಲ್ರಡಿ ಅವರು ಲೀಡರ್ ಆಗಿದ್ದಾರೆ. ಜನರ ಭೂಮಿ ಉಳಿಸಲು ಈ ಹೋರಾಟ ಶುರು ಮಾಡಿದ್ದೇವೆ.ಇವರ ವಿರುದ್ಧ ಹೇಳಿಕೆ ಕೊಡುತ್ತಿರುವವರಿಗೆ ಎನೂ ಹೇಳಬೇಕು. ಯತ್ನಾಳ್ ಅವರನ್ನ ಉಚ್ಚಾಟನೆ ಮಾಡಿ ಅನ್ನೋರಿಗೆ ನಾವು ಉತ್ತರ ಕೊಡಬೇಕು. ಅವರ ವಿರುದ್ಧ ನೀವು ಪ್ರತಿಭಟನೆ ಮಾಡಬೇಕು, ನಿಮ್ಮ ಪರ ಯತ್ನಾಳ್ ಧ್ವನಿ ಎತ್ತಿದ್ದಾರೆ. ಉಚ್ಚಾಟನೆ ಮಾಡುತ್ತೇನೆ ಅಂದವರ ವಿರುದ್ಧ ಹೋರಾಟ ಮಾಡುವಂತೆ ಪ್ರತಾಪ್ ಸಿಂಹ ಕರೆ ನೀಡಿದರು. ಯತ್ನಾಳ್ ಅವರ ಹೋರಾಟಕ್ಕೆ ಬೆಂಗಾವಲಾಗಿ ನಿಂತಿದ್ದು ಪ್ರಹ್ಲಾದ್ ಜೋಶಿ, ಸೋಮಣ್ಣ ಅವರು.
ವಕ್ಫ್ ವಿರುದ್ಧ ಹೋರಾಟ ; ದಾವಣಗೆರೆಯಲ್ಲಿ ಬೃಹತ್ ಸಮಾವೇಶವೆಂದ ಯತ್ನಾಳ್
2013-18 ರ ವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಎಸ್ಡಿಪಿಐ, ಪಿಎಫ್ಐ ವಿರುದ್ಧ ದೂರು ದಾಖಲಾಗಿತ್ತು. 2015 ರಲಿ ಇವರ ಮೇಲಿನ ಕ್ರಿಮಿನಲ್ ಪ್ರಕರಣ ವಾಪಾಸ್ ತೆಗೆದುಕೊಂಡರು. ಹಿಂದೂಗಳ ಮಾರಣಹೋಮಕ್ಕೆ ಕಾರಣವಾದರೂ,ಆಗಿಂದ ಟಿಪ್ಪು ಜಯಂತಿ ಶುರು ಮಾಡಿದರು. 2023 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ವೋಟ್ ಹಾಕಿದ್ರೇ ತಾಲಿಬಾನ್ ಸರ್ಕಾರ ರಚನೆ ಆಗುತ್ತೆ ಅಂದ್ವಿ. ಈಗ ಒಂದೂವರೆ ವರ್ಷದ ಅವಧಿಯಲ್ಲಿ ತಾಲಿಬಾನ್ ಸರ್ಕಾರದಂತೆ ನಡೆದುಕೊಳ್ತಿದೆ. ಹಿಂದೂಗಳ ಮಾರಣಹೋಮದ ಜೊತೆಗೆ ನಿಮ್ಮ ಭೂಮಿ ಕಬಳಿಕೆ ಶುರುವಾಗಿದೆ. ಜಮೀರ್ ಅಹ್ಮದ್ ನಾಲ್ಕೂವರೆ ಅಡಿ ಇದ್ದಾನೆ. ಅಲ್ಲಾನ ಆಸ್ತಿ ಅಂತಾ ಜಮೀರ್ ಅಹ್ಮದ್ ಹೇಳ್ತಾನೆ. ಜಮೀರ್ ಅಹ್ಮದ್ ನಿಮ್ಮ ಅಲ್ಲಾಗೂ ಭಾರತಕ್ಕೂ ಎನೂ ಸಂಬಂಧ ಇದೆ. ಅರಬ್ ನಲ್ಲಿ ಹುಟ್ಟಿರುವ ಅಲ್ಲಾಗೆ ಎನೂ ಸಂಬಂಧ. ನಿಮ್ಮ ಧರ್ಮಕ್ಕೂ ಭಾರತಕ್ಕೂ ಎನೂ ಸಂಬಂಧ. ಇಲ್ಲಿ ಇರುವುದು ರಾಮ, ಕೃಷ್ಣ, ಚನ್ನಮ್ಮ ಉಳಿಸಿದ ಭೂಮಿ, ಶಿವಾಜಿ ಮಹಾರಾಜರು ಉಳಿಸಿದ ಭೂಮಿ ಎಂದು ಜಮೀರ್ ವಿರುದ್ಧ ಏಕವಚನದಲ್ಲಿ ಕಿಡಿಕಾರಿದರು.
ಜಮೀರ್ ಅಹ್ಮದ್, ಸಿದ್ದರಾಮಯ್ಯ ನವರಿಗೆ ಬುದ್ದಿ ಕಲಿಸಬೇಕು. ವಕ್ಫ್ ಕಾಯ್ದೆ ಬರ್ಕಾಸ್ತ್ ಮಾಡಲು ನಾವಿಂದು ಹೋರಾಟಕ್ಕೆ ಬಂದಿದ್ದೇವೆ. ಮುಸ್ಲಿಮರ ಅಜ್ಜ ತಾತ ಎಲ್ಲಿಂದ ಬಂದಿದ್ದಾರೆ. ಅರಬ್, ಮೆಕ್ಕಾದಲ್ಲಿರುವವರು ಬಿಟ್ಟು ಹೋದ ಭೂಮಿನಾ ಇದು. ಎಲ್ಲಿಂದ ನಿಮಗೆ ಭೂಮಿ ಸಿಕ್ಕಿದೆ ಹೇಳಿ, ನಿಮ್ಮ ಧರ್ಮಕ್ಕೆ ದಾಖಲೆ ಇಲ್ಲ. ಮುಸ್ಲಿಮರು ಮೂವತ್ತು ಪರ್ಸಂಟ್ ಆದ್ರೇ ಮುಂದೆ ಒಕ್ಕಲಿಗ, ಲಿಂಗಾಯತ ಅಂದ್ರೇ ನಿಮ್ಮನ್ನ ಹೊಡೆದು ಹಾಕ್ತಾರೆ. ನೀವು ಲಿಂಗಾಯತ, ಮರಾಠ, ಕುರುಬ ಆಗಬೇಡಿ ಹಿಂದೂ ಆಗಿ. ಮುಸ್ಲಿಂರಿಗೆ ತೊಂದ್ರೆ ಆದ್ರೇ 56 ದೇಶ ಇವೆ. ಹಿಂದೂಗಳಿಗೆ ಅನ್ಯಾಯ ಆದ್ರೆ ನಮಗೆ ಇರೋದು ಭಾರತ ಒಂದೇ ದೇಶ ಎಂದು ಕರೆ ನೀಡಿದರು.