ಕಠ್ಮಂಡು: ಇಂದು ಬೆಳಗ್ಗೆ ಟಿಬೆಟ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 53 ಮಂದಿ ಮೃತಪಟ್ಟಿದ್ದು 62 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪವು ನೆರೆಯ ನೇಪಾಳದ ರಾಜಧಾನಿ ಕಠ್ಮಂಡು ಮತ್ತು ಭಾರತದ ಉತ್ತರ ಭಾಗಗಳಲ್ಲಿ ಸಂಭವಿಸಿದೆ ಪರಿಣಾಮ ಟಿಬೆಟ್ನಲ್ಲಿ ಅನೇಕ ಕಟ್ಟಡಗಳು ಕುಸಿತಗೊಂಡಿವೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಚೀನಾ ಭೂಕಂಪ ನೆಟ್ವರ್ಕ್ ಸೆಂಟರ್ (ಸಿಇಎನ್ಸಿ) ಪ್ರಕಾರ, ನೇಪಾಳದ ಗಡಿಯ ಸಮೀಪ 7.1 ರ ತೀವ್ರತೆಯೊಂದಿಗೆ ಡಿಂಗ್ರಿ ಕೌಂಟಿಯಲ್ಲಿ ಬೆಳಿಗ್ಗೆ 6:35 ಕ್ಕೆ ಭೂಕಂಪ ಸಂಭವಿಸಿದೆ. ಬಿಹಾರದಲ್ಲಿಯೂ ಭೂಮಿ ಕಂಪಿಸಿದ ಅನುಭವ ಜನತೆಗೆ ಆಗಿದೆ. ಜನರು ತಮ್ಮ ಮನೆಗಳು ಮತ್ತು ಅಪಾರ್ಟ್ಮೆಂಟ್ಗಳ ಹೊರಗೆ ಓಡುತ್ತಿರುವ ದೃಶ್ಯ ಕಂಡುಬಂದಿದ್ದು ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ಯಾವುದೇ ವರದಿಯಾಗಿಲ್ಲ.
ಈ ಪ್ರದೇಶದಲ್ಲಿ ಭೂಕಂಪಗಳು ಸಾಮಾನ್ಯವಾಗಿದ್ದರೂ, ಇಂದಿನ ಭೂಕಂಪವು ಕಳೆದ ಐದು ವರ್ಷಗಳಲ್ಲಿ 200-ಕಿಲೋಮೀಟರ್ ತ್ರಿಜ್ಯದಲ್ಲಿ ದಾಖಲಾದ ಅತ್ಯಂತ ಶಕ್ತಿಶಾಲಿ ಕಂಪನ ಎಂದು ಹೇಳಲಾಗುತ್ತಿದೆ. ಭೂಕಂಪದ ತೀವ್ರತೆಯಿಂದ ಹಲವು ಕಟ್ಟಡಗಳು ನೆಲಕ್ಕುರುಳಿದ್ದು ಹಲವರು ಗಾಯಗೊಂಡಿದ್ದಾರೆಚೀನಾದ ಕ್ಸಿನ್ಹುವಾ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಭೂಕಂಪದ ನಂತರದ ಅವಶೇಷಗಳ ನಡುವೆ ಟಿಬೆಟ್ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆ.
ಒಂದೂವರೆ ಗಂಟೆ ಅವಧಿಯೊಳಗೆ ಆರು ಬಾರಿ ಭೂಕಂಪ ಸಂಭವಿಸಿವೆ. ಬೆಳಗ್ಗೆ 6:35ಕ್ಕೆ ಸಂಭವಿಸಿದ 7.1 ತೀವ್ರತೆಯ ಭೂಕಂಪದ ನಂತರವೂ ಕಂಪನಗಳು ನಿಂತಿಲ್ಲ. ಒಂದರ ಹಿಂದೆ ಒಂದರಂತೆ ಭೂಕಂಪನದಿಂದ ಜನರು ಮನೆ ಹಾಗೂ ಕಚೇರಿಗಳಿಂದ ಹೊರಗೋಡಿ ಬಂದಿದ್ದಾರೆ.