ಬಿಗ್ ಬಾಸ್ ಕನ್ನಡ 11 ಸೀಸನ್ ಗ್ರ್ಯಾಂಡ್ ಫಿನಾಲಗೆ ಇನ್ನೂ ಕೇವಲ ಒಂದೇ ದಿನವಷ್ಟೇ ಬಾಕಿಯಿದೆ. ಇದೀಗ ದೊಡ್ಮನೆಯಲ್ಲಿ 6 ಮಂದಿ ಸ್ಪರ್ಧಿಗಳು ಇದ್ದು, ಈ ಪೈಕಿ ವಿನ್ನರ್ ಯಾರಾಗಲಿದ್ದಾರೆ ಎಂದು ಇದೀಗ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಮತ್ತೊಂದೆಡೆ ಸ್ಪರ್ಧಿಗಳಿಗೂ ಕೂಡ ಢವಢವ ಶುರುವಾಗಿದೆ. ಈ ನಡುವೆಯೇ ಫೈನಲಿಸ್ಟ್ ಯಾರಾಗಲಿದ್ದಾರೆ ಎನ್ನುವ ಚರ್ಚೆಯೂ ಕೂಡ ಜೋರಾಗಿ ನಡೆಯುತ್ತಿದೆ.
ಬಿಗ್ ಬಾಸ್ ಕನ್ನಡ 11ರ ವಿನ್ನರ್ ಯಾರು ಎಂಬ ಕೌತುಕಕ್ಕೆ ಇಡೀ ಕರುನಾಡು ಕಾಯುತ್ತಿದೆ. ಸದ್ಯ ಟಾಪ್ ಆರರಲ್ಲಿ ಘಟಾನುಘಟಿ ಸ್ಪರ್ಧಿಗಳೇ ನಿಂತಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ, ಭವ್ಯಾ ಗೌಡ, ಮೋಕ್ಷಿತಾ ಪೈ, ರಜತ್ ಪೈಕಿ ಯಾರು ಕಪ್ ಎತ್ತಿ ಹಿಡಿಯುವವರು ಎಂಬ ಚರ್ಚೆಗಳೂ ನಡೆಯುತ್ತಿವೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳ ಫ್ಯಾನ್ಸ್, ವೋಟ್ಗಾಗಿ ದೊಡ್ಡ ಅಭಿಯಾನವನ್ನೇ ಆರಂಭಿಸಿದ್ದಾರೆ. ಇನ್ನು ಕೆಲವರು ಇವರೇ ಗೆಲ್ತಾರೆ ಎಂದೂ ಭವಿಷ್ಯ ನುಡಿಯುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರ ಗ್ರ್ಯಾಂಡ್ ಫಿನಾಲೆ ಇನ್ನೇನು ಕೆಲವೇ ಹೊತ್ತಿನಲ್ಲಿ ಶುರುವಾಗಲಿದೆ. ಇಂದು ಸಂಜೆ 6 ಗಂಟೆಗೆ ಶುರುವಾಗಲಿರುವ ಫಿನಾಲೆ ನೋಡಲು ಬಿಗ್ ಬಾಸ್ ಫ್ಯಾನ್ಸ್ ಕಾತುರರಾಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರ ಗ್ರ್ಯಾಂಡ್ ಫಿನಾಲೆಯ ಆರಂಭಕ್ಕೂ ಮುನ್ನವೇ ಓರ್ವ ಸ್ಪರ್ಧಿ ಮನೆಯಿಂದ ಔಟ್ ಆಗಬಹುದು ಎನ್ನಲಾಗುತ್ತಿದೆ. ಫಿನಾಲೆಗೆ 5 ಜನರು ಮಾತ್ರ ಹೋಗಬೇಕಿದ್ದು ಒಬ್ಬರು ಎಲಿಮಿನೇಟ್ ಆಗಬಹುದು ಎನ್ನಲಾಗುತ್ತಿದೆ.
ಫಿನಾಲೆಯ ಆರಂಭವಾಗುತ್ತಿದ್ದಂತೆ ಒಬ್ಬ ಸ್ಪರ್ಧಿಯನ್ನು ಸುದೀಪ್ ಹೊರಗೆ ಕರೆಯಬಹುದು ಎಂದು ಹೇಳಲಾಗುತ್ತಿದೆ. studybizz.com ನಲ್ಲಿ ಬಂದ ವೋಟ್ ಪ್ರಕಾರ, ಹನುಮಂತ ಅತಿ ಹೆಚ್ಚು ಮತಗಳನ್ನು ಪಡೆದಿದ್ದಾನೆ. ಉಗ್ರಂ ಮಂಜು ಎರಡನೇ ಸ್ಥಾನದಲ್ಲಿದ್ದಾರೆ. ಮೋಕ್ಷಿತಾ ಮೂರನೇ ಸ್ಥಾನದಲ್ಲಿದ್ದಾರೆ. ತ್ರಿವಿಕ್ರಮ್, ಭವ್ಯಾ ಹಾಗೂ ರಜತ್ ಬಾಟಮ್ 3 ನಲ್ಲಿದ್ದಾರೆ. ಹೀಗಾಗಿ ಇಂದು ಬಿಗ್ ಬಾಸ್ ಮನೆಯಿಂದ ಮೊದಲು ರಜತ್ ಅಥವಾ ಭವ್ಯಾ ಎಲಿಮಿನೇಟ್ ಆಗಿ ಹೊರಬರಬಹುದು ಎನ್ನಲಾಗುತ್ತಿದೆ.