ಆಂಧ್ರ:- ಆಂಧ್ರದಲ್ಲಿ ವಿಚಿತ್ರ ಘಟನೆ ಒಂದು ನಡೆದಿದ್ದು, ವ್ಯಕ್ತಿಯೋರ್ವ ನಿದ್ರೆಯಲ್ಲಿ ಹಲ್ಲಿನ ಸೆಟ್ ನುಂಗಿದ ಘಟನೆ ಜರುಗಿದೆ.
ವಿಶಾಖಪಟ್ಟಣಂನ ಖಾಸಗಿ ಆಸ್ಪತ್ರೆಯ ವೈದ್ಯರು ಇದೀಗ ಡೆಂಟಲ್ ಸೆಟ್ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. 52 ವರ್ಷದ ವ್ಯಕ್ತಿ ಹಲವು ವರ್ಷಗಳಿಂದ ಸ್ಥಿರ ದಂತಗಳನ್ನು ಬಳಸುತ್ತಿದ್ದರು, ಆದರೆ ಕಾಲಾ ನಂತರದಲ್ಲಿ ಅದು ಸಡಿಲವಾಗಿತ್ತು.
ಮಲಗಿದ್ದಾಗ ಅಜಾಗರೂಕತೆಯಿಂದ ನುಂಗಿ ಹೋಗಿದೆ. ಹಲ್ಲಿನ ಸೆಟ್ ವಾಯುಮಾರ್ಗದ ಕೆಳಗೆ ಹೋಗಿತ್ತು ಶ್ವಾಸಕೋಶದ ಬಲಭಾಗದಲ್ಲಿ ಸಿಲುಕಿತ್ತು. ಕಿಮ್ಸ್ ಐಕಾನ್ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಪಲ್ಮನಾಲಜಿಸ್ಟ್ ಡಾ ಸಿಎಚ್ ಭರತ್ ಮಾತನಾಡಿ, ಮನುಷ್ಯನ ಎಡ ಶ್ವಾಸಕೋಶ ಮತ್ತು ಬಲ ಶ್ವಾಸಕೋಶದ ಭಾಗಗಳು ಸಾಮಾನ್ಯವಾಗಿ
ಕಾರ್ಯನಿರ್ವಹಿಸುತ್ತಿದ್ದರಿಂದ ತೀವ್ರ ಉಸಿರಾಟದ ತೊಂದರೆಗಳನ್ನು ಅನುಭವಿಸಲಿಲ್ಲ ಎಂದು ಹೇಳಿದರು. ಆದರೆ ಅದು ನಿರಂತರ ಕೆಮ್ಮು ಉಂಟು ಮಾಡಿತ್ತು, ಅದಕ್ಕಾಗಿ ವೈದ್ಯರ ಬಳಿಕ ಹೋಗುವಂತಾಯಿತು. ಎಕ್ಸ್-ರೇ ಮತ್ತು ಸಿಟಿ ಸ್ಕ್ಯಾನ್ಗಳನ್ನು ನಡೆಸಿದ ನಂತರ, ಶ್ವಾಸಕೋಶದಲ್ಲಿ ದಂತ ಸೆಟ್ ಇರುವಿಕೆಯನ್ನು ವೈದ್ಯರು ದೃಢಪಡಿಸಿದರು.