ಲೈಂಗಿಕ ಕ್ರಿಯೆ ಎನ್ನುವುದು ಕೇವಲ ಒಂದು ಜೀವದ ಕೆಲಸವಲ್ಲ. ಎರಡು ಜೀವಗಳು ಪ್ರೀತಿಯಿಂದ ಬೆಸೆತುಕೊಂಡು ಆಗುವಂತಹ ಕ್ರಿಯೆಯೇ ಲೈಂಗಿಕ ಕ್ರಿಯೆ. ಇದರಿಂದ ಇಬ್ಬರೂ ಸುಖದ ಉತ್ತುಂಗಕ್ಕೇರುವರು. ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದವರು ಅದನ್ನು ನಿಲ್ಲಿಸಿದರೆ ಏನಾಗುತ್ತದೆ? ಎಂಬುದು ಅಷ್ಟೆ ಪ್ರಮುಖ ವಿಚಾರ. ಹೇಗೆ ಲಾಭಗಳನ್ನು ತಂದುಕೊಡುತ್ತದೆಯೋ ಅದೇ ರೀತಿ ನಿಲ್ಲಿಸಿದಾಗಲೂ ಕೆಲ ಬದಲಾವಣೆ ಆಗುತ್ತದೆ. ಅವು ಏನು ಎಂಬುದನ್ನು ನೋಡಿಕೊಂಡು ಬರೋಣ..
ಲೈಂಗಿಕ ಜೀವನ:ಸೆಕ್ಸ್ ಮಾಡುವುದನ್ನು ನಿಲ್ಲಿಸಿದರೆ ಅದು ನಿಮ್ಮ ಸೆಕ್ಸ್ ಜೀವನದ ಮೇಲೆ ಪರಿಣಾಮ ಬೀರದೆ ಇರದು. ಹಸ್ತಮೈಥುನದಂತಹ ಕ್ರಿಯೆಯಿಂದ ಲೈಂಗಿಕ ವಿಚಾರದ ಜೀವಂತಿಕೆ ಕಾಪಾಡಿಕೊಳ್ಳಬಹುದು. ಪುರುಷನಿಗೆ ಆಗುವಷ್ಟು ಪರಿಣಾಮ ಮಹಿಳೆಯರಿಗೆ ಆಗದೆ ಇರಬಹುದು. ಬಹಳ ದೀರ್ಘ ಕಾಲ ಪುರುಷನ ಶಿಶ್ನ ನಿಮಿರುವಿಕೆಯನ್ನು ಒಳಗೊಳ್ಳದಿದ್ದರೆ ಉದ್ರೇಕದ ಸಮಸ್ಯೆ ಎದುರಾಗಬಹುದು.
ಯೋನಿಯ ಹೊರತುಟಿ ಸಡಿಲ: ಇದು ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಕಾಣಿಸಿಕೊಳ್ಳಬಹುದು. ರಕ್ತ ಪರಿಚಲನೆಯಲ್ಲಿನ ಸಮಸ್ಯೆ ಸಹ ಕಾರಣವಾಗುತ್ತದೆ. ದೀರ್ಘ ಕಾಲದ ನಂತರ ಸಂಭೋಗಕ್ಕೆ ನಿಂತರೆ ಹಳೆಯ ಅನುಭವ ಸಿಗದೆ ಇರಬಹುದು.
ರೋಗ ನಿರೋಧಕ ಶಕ್ತಿ: ನಿಯಮಿತ ಸೆಕ್ಸ್ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ. ಇದು ನಿಂತಾಗ ಮಹಿಳೆಯರು ತಮ್ಮ ರೋಗ ನಿರೋಧಕ ಶಕ್ತಿಯನ್ನು ಸ್ವಲ್ಪ ಪ್ರಮಾಣದಲ್ಲಿ ಕಳೆದುಕೊಳ್ಳಬಹುದು. ಖಿನ್ನತೆಗೆ ಒಳಗಾಗುವ ಸಂಭವವೂ ಇದೆ.
ಒತ್ತಡಕ್ಕೆ ಗುರಿಯಾಗುವ ಸಾಧ್ಯತೆ:ಸ್ಟ್ರೇಸ್ ಎನ್ನುವ ಆಧುನಿಕ ಮಾಯೆ ನಿಮ್ಮನ್ನು ಅಪ್ಪಿಕೊಳ್ಳಬಹುದು. ಸೆಕ್ಸ್ ನಲ್ಲಿ ಬರ್ನ್ ಆಗುವ ಕ್ಯಾಲೋರಿಗಳು ಹಾಗೂ ಮೆದುಳಿನಲ್ಲಿ ಆಗುವ ಬದಲಾವಣೆಗಳಿಂದ ನೀವು ವಂಚಿತರಾಗುತ್ತೀರಿ.
ಯೋನಿ ಬಿಗಿಯಾಗುತ್ತದೆಯೇ? ಸೆಕ್ಸ್ ನಿಲ್ಲಿಸಿದರೆ ಯೋನಿ ಬಿಗಿಯಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಒಂದು ಹಂತದ ಸೆಕ್ಸ್ ಗೆ ಸಪೋರ್ಟ್ ಮಾಡುತ್ತಿದ್ದ ಯೋನಿಯ ಕೋಶಗಳು ತಮ್ಮ ಕ್ರಿಯಾಶೀಲತೆ ಕಳೆದುಕೊಳ್ಳಬಹುದು.
ಹೃದಯದ ಆರೋಗ್ಯ:ಉತ್ತಮ ಸೆಕ್ಸ್ ಹೃದಯದ ಆರೋಗ್ಯ ಕಾಪಾಡುವಲ್ಲಿಯೂ ನೆರವು ನೀಡುತ್ತದೆ ಎಂಬುದು ಸಾಬೀತಾಗಿದೆ. ಸೆಕ್ಸ್ ಸಂದರ್ಭದಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಗಳ ಲಾಭ ನಷ್ಟವಾಗುತ್ತದೆ.
ಮರೆಗುಳಿತನಕ್ಕೆ ಕಾರಣ: ಉತ್ತಮ ಜೀವನ ನಡೆಸಲು ಸೆಕ್ಸ್ ತುಂಬಾ ಸಹಕಾರಿ. ಸಕ್ರಿಯ ಲೈಂಗಿಕತೆಯು ಸಾಮಾನ್ಯ ಜೀವನ ನಡೆಸಲು ಸಹಕಾರಿ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಈ ಹೇಳಿಕೆ ಮೇಲೆ ಇನ್ನೂ ಹಲವು ಸಂಶೋಧನೆಗಳು ನಡೆಯುತ್ತಿವೆ. ಸೆಕ್ಸ್ ಮಾಡದಿದ್ದರೆ (ಅಥವಾ ಕಡಿಮೆ ಲೈಂಗಿಕ ಆಸಕ್ತಿ) ಮರೆಗುಳಿತನಕ್ಕೆ ಕಾರಣವಾಗಬಹುದು.
ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್ (ಶಿಶ್ನದ ಕ್ಯಾನ್ಸರ್): ಲೈಂಗಿಕತೆಯಲ್ಲಿ ಹೆಚ್ಚು ಸಕ್ರಿಯವಾಗಿರುವ ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಅಪಾಯ ಕಡಿಮೆ. ಈ ಬಗ್ಗೆ 30 ಸಾವಿರ ಪುರುಷರ ಮೇಲೆ ಅಧ್ಯಯನ ನಡೆಸಿದ್ದು, ತಿಂಗಳಿಗೆ ಒಬ್ಬ ವ್ಯಕ್ತಿ ಸರಾಸರಿ 21 ಕ್ಕಿಂತ ಹೆಚ್ಚು ಬಾರಿ ಸೆಕ್ಸ್ ಮಾಡಿದ್ರೆ ಈ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ. ಅಸುರಕ್ಷಿತ ಲೈಂಗಿಕ ಅಭ್ಯಾಸಗಳು ಕ್ಯಾನ್ಸರ್ಗೆ ಕಾರಣವಾಗಬಹುದು