ಬೆಳಗಾವಿ:- ಪಂಚಮಸಾಲಿಗರ ಮೇಲೆ ಕಲ್ಲು ತೂರಿದ್ದು ಬಿಜೆಪಿಗರು ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.
ರೋಹಿತ್ ಆರ್ಭಟ ಅವರ ತವರಲ್ಲಿ ಮಾತ್ರ: ವ್ಯಂಗ್ಯದ ಮಾತಾಡಿದ ಮಾಜಿ ಆಫ್ರಿಕನ್ ಕ್ರಿಕೆಟಿಗ!
ಈ ಸಂಬಂಧ ಮಾತನಾಡಿದ ಅವರು, ಕಲ್ಲು ತೂರಿದವರು ನಮ್ಮ ಸಮಾಜದವರಲ್ಲ. ಅವರು ಬಿಜೆಪಿ ಕಾರ್ಯಕರ್ತರು, ಆರ್ಎಸ್ಎಸ್ನವರು ಎಂದು ಹೊಸ ಬಾಂಬ್ ಹಾಕಿದ್ದಾರೆ.
ನಮ್ಮ ಸಮಾಜದ ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡುವ ಹಾಗಾಯಿತು. ಕಲ್ಲು ತೂರಿದವರು ನಮ್ಮ ಸಮಾಜದವರಲ್ಲ. ಅವರು ಬಿಜೆಪಿ ಕಾರ್ಯಕರ್ತರು, ಆರ್ಎಸ್ಎಸ್ನವರು. ಪೊಲೀಸರ ಮೇಲೆ ಕಲ್ಲು ತೂರಲು ಪ್ರವೋಕ್ ಮಾಡಿದ್ದು ಸ್ವಾಮೀಜಿ. ಸಮಾಜವನ್ನ ಕಟ್ಟುವ ಕೆಲಸ ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಸ್ವಾಮೀಜಿಗೆ ಗೌರವ ಕೊಡುತ್ತೇನೆ. 712 ಕಿ.ಮೀ ಹೋರಾಟ ಮಾಡಿದ್ದೇವೆ. ಪ್ರತಿಭಟನೆ ವೇಳೆ ಒಂದಾದರೂ ಗಲಾಟೆ ಆಯ್ತಾ? ಉದ್ದೇಶ ಪೂರ್ವಕವಾಗಿ ಈಗ ಗಲಾಟೆ ಮಾಡಿಸಿದ್ದಾರೆ. ಗಾಯಾಳುಗಳನ್ನ ಯಾರು ನೋಡಿಕೊಳ್ಳುತ್ತಾರೆ. ಸ್ವಾಮೀಜಿ ನೋಡ್ಕೋತಾರಾ? ಅಥವಾ ಮುಖಂಡರು ನೋಡಿಕೊಳ್ಳುತ್ತಾರಾ? ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ ಅದನ್ನ ತೆಗೆಯಬೇಕು. ಸ್ವಾಮೀಜಿ ತೀರ್ಮಾನ ಒಂದೇ ಅಲ್ಲಾ ಸಮಾಜ ಇದೆ. ನಾವು 12 ಜನ ಶಾಸಕರು ಇದ್ದೇವೆ. ಬಿಜೆಪಿ ಪಾರ್ಟಿಯ ವೇದಿಕೆಗೆ ಹೋಗಿ ಭಾಷಣ ಮಾಡುತ್ತಾರೆ. ನಾವು ಮೀಸಲಾತಿ ಕೊಡಿಸುತ್ತೇವೆ ಎಂದಿದ್ದಾರೆ.
ಸಂವಿಧಾನ ವಿರೋಧಿ ಆಗುತ್ತೆ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ಇದೆ. ಹೇಗೆ ಸಿಎಂ ಕೊಡುವುದಕ್ಕೆ ಆಗುತ್ತೆ. ಸಿಎಂ ಸುಗ್ರಿವಾಜ್ಞೆ ಹೋರಡಿಸಲು ಆಗುವುದಿಲ್ಲ. ನಾನು ಸದನದಲ್ಲಿ ಮಾತಾಡಿದರೆ, ಸಭಾಪತಿಗಳ ಮೇಲೆ ಹಲ್ಲೆ ಮಾಡಲು ಬಿಜೆಪಿಯವರು ಹೋಗಿದ್ದಾರೆ ಎಂದು ಹೇಳಿದ್ದಾರೆ