ತುಮಕೂರು : ಗೃಹ ಸಚಿವರ ತವರು ಜಿಲ್ಲೆಯಲ್ಲಿಯೇ ಶಾಲೆಯ ಆವರಣದಲ್ಲೇ ಪುಂಡರು ದುರ್ವರ್ತನೆ ತೋರಿದ್ದಾರೆ. ಸರ್ಕಾರಿ ಶಾಲಾ ಬಾಲಕಿಯರ ಶೌಚಾಲಯದ ಮೇಲೆ ಪುಂಡರಿಂದ ಕಲ್ಲು ತೂರಾಟ ನಡೆಸಿದ್ದು, ಇದನ್ನು ಪ್ರಶ್ನಿಸಿದ ವಿದ್ಯಾರ್ಥಿಗೆ ಪುಂಡರ ಗುಂಪು ಹಿಗ್ಗಾಮುಗ್ಗ ಥಳಿಸಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ಘಟನೆ ನಡೆದಿದೆ.
ಹುಳಿಯಾರು KPS ಶಾಲೆಯ ಆವರಣಕ್ಕೆ ನುಗ್ಗಿ ಪುಂಡರು, 10ನೇ ತರಗತಿ ವಿದ್ಯಾರ್ಥಿ ಯಶ್ವಂತ್ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಮಧ್ಯಾಹ್ನ ಯಶ್ವಂತ್ ಮೂತ್ರ ವಿಸರ್ಜನೆಗೆ ತೆರಳಿದ್ದರು. ಈ ವೇಳೆ ಬಾಲಕಿಯರ ಶೌಚಾಲಯದ ಮೇಲೆ ಕಲ್ಲು ಎಸೆಯುತ್ತಿದ್ದ ಪುಂಡರನ್ನ ಪ್ರಶ್ನಿಸಿದ ಯಶ್ವಂತ್ ಅಟ್ಟಾಡಿಸಿಕೊಂಡು ಶಾಲೆ ಆವರಣಕ್ಕೆ ನುಗ್ಗಿ ಹಲ್ಲೆ ನಡೆಸಿದ್ದಾರೆ.
ಹುಳಿಯರು ನಿವಾಸಿ ಮಹಬೂಬ್ ಷರಿಫ್ ಹಾಗೂ ಆತನ ಸಹಚರರಿಂದ ಪುಂಡಾಟಿಕೆ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿ ಯಶ್ವಂತ್ ಗೆ ಬೆನ್ನು ಹಾಗೂ ತಲೆಗೆ ತೀವ್ರಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲಾ ಆಡಳಿತ ಮಂಡಳಿ ವತಿಯಿಂದ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮಹಬೂಬ್ ಷರೀಫ್ ಹಾಗೂ ಆತನ ಸಹಚರರು ಸೇರಿದಂತೆ ಒಟ್ಟು 7 ಜನರ ವಿರುದ್ದ ದೂರು ದಾಖಲಾಗಿದೆ. ದೂರು ದಾಖಲಾದ ಬೆನ್ನಲ್ಲೆ ಐವರು ಪುಂಡರ ಬಂಧಿಸಲಾಗಿದ್ದು, ಬಾಕಿ ಇಬ್ಬರ ಬಂಧನಕ್ಕೆ ಹುಡುಕಾಟ ನಡೆಸಲಾಗುತ್ತಿದೆ.