ಮಹಿಳೆಯರು, ಪುರುಷರು ಎಷ್ಟೇ ದಪ್ಪ ಅದ್ರೂ ಅಷ್ಟೊಂದು ತಲೆ ಕೆಡಿಸಿಕೊಳ್ಳಲ್ಲ, ಅದೇ ಹೊಟ್ಟೆಯ ಬೊಜ್ಜು ಬರಲು ಶುರುವಾದರೆ, ಅಯ್ಯೋ ಹೊಟ್ಟೆ ಬಂದ್ಬಿಟ್ಟಿದೆ ಇದನ್ನು ಕರಗಿಸಲೇ ಬೇಕು ಅಂತಾ ಶತಪ್ರಯತ್ನ ಮಾಡುತ್ತಾರೆ. ದೇಹದ ಯಾವುದೇ ಭಾಗದ ಬೊಜ್ಜನ್ನು ಸ್ವಲ್ಪ ಪ್ರಯತ್ನ ಮಾಡುವ ಮೂಲಕ ಕರಗಿಸಬಹುದು, ಆದರೆ ಈ ಹೊಟ್ಟೆ ಬೊಜ್ಜು ಇದೆಯಲ್ಲಾ ಅದು ಸುಲಭವಾಗಿ ನಮ್ಮ ಮಾತು ಕೇಳೋಲ್ಲ. ಅದಕ್ಕೆ ಸರಿಯಾದ ಆಹಾರ, ಕ್ರಮಬದ್ಧ ವ್ಯಾಯಾಮ ಎಲ್ಲವೂ ಬೇಕಾಗುತ್ತದೆ.
ಇಂದು ಭಾರತ-ನ್ಯೂಜಿಲ್ಯಾಂಡ್ ಫೈನಲ್ ಕದನ ; ಭಾರತದ ಗೆಲುವಿಗೆ ಶುಭ ಹಾರೈಕೆ
ತೂಕ ಇಳಿಕೆಗೆ ಆರೋಗ್ಯಕರ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ. ಅದರಲ್ಲೂ ಕೆಲ ಸೂಪರ್ ಫುಡ್ಗಳು ನಮಗೆ ಪೌಷ್ಟಿಕಾಂಶ ಒದಗಿಸುವುದರ ಜೊತೆಗೆ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ವಿಶೇಷವಾಗಿ ತೂಕ ಇಳಿಕೆಯಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಇವು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ.
ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಚಿಯಾ ಬೀಜಗಳು ಒಂದಾಗಿದ್ದು, ಇದು ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಇದರಿಂದ ಅನಗತ್ಯ ಆಹಾರ ಸೇವನೆ ಕಡಿಮೆ ಮಾಡುತ್ತದೆ. ಇವುಗಳ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ಗಳು ಒಟ್ಟಾರೆ ಆರೋಗ್ಯವನ್ನು ಬೆಂಬಲಿಸುತ್ತವೆ, ತೂಕ ಇಳಿಕೆಯನ್ನು ಹೆಚ್ಚು ಸಮರ್ಥನೀಯ ಮತ್ತು ಪರಿಣಾಮಕಾರಿಯಾಗಿ ಮಾಡುತ್ತದೆ.
ಸಾಮಾನ್ಯವಾಗಿ ತುಳಸಿ ಬೀಜಗಳನ್ನು ಸಬ್ಜಾ ಬೀಜಗಳೆಂದು ಕರೆಯಲಾಗುತ್ತದೆ. ಇದು ಕೂಡ ಚಿಯಾ ಬೀಜಗಳ ರೀತಿ ಪೋಷಕಾಂಶಗಳಿಂದ ಕೂಡಿದೆ. ಆದರೆ ಸ್ವಲ್ಪ ವಿಭಿನ್ನವಾದ ಪ್ರೊಫೈಲ್ ಅನ್ನು ಹೊಂದಿರುತ್ತವೆ. ಇವು ಫೈಬರ್, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ವಿವಿಧ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ.
ನೀರು ಮತ್ತು ಸಬ್ಜಾ ಬೀಜಗಳು: ಜೀ ನ್ಯೂಸ್ ವರದಿ ಪ್ರಕಾರ, ಸಬ್ಜಾ ಬೀಜಗಳನ್ನು 15-20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ಕುಡಿದರೆ ಹೊಟ್ಟೆ ಸದಾ ಕಾಲ ತುಂಬಿರುತ್ತದೆ. ಇದಲ್ಲದೇ, ಸಬ್ಜಾ ಬೀಜಗಳಿರುವ ಆಹಾರವನ್ನು ಸೇವಿಸುವುದರಿಂದ ಅನಗತ್ಯ ಆಹಾರ ಸೇವನೆಯ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನಿಂಬೆ ರಸ: ಒಂದು ಗ್ಲಾಸ್ ನೀರಿಗೆ ನಿಂಬೆ ಹಣ್ಣಿನ ರಸ ಹಿಂಡಿ, ಇದರೊಳಗೆ ಒಂದಷ್ಟು ಸಬ್ಜಾ ಬೀಜಗಳನ್ನು ಹಾಕಿ, ನೆನೆಸಿ ಪ್ರತಿದಿನ ಕುಡಿಯುವುದರಿಂದ ದೇಹದ ನಿರ್ವಿಶೀಕರಣ ಸುಧಾರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಬರ್ನ್ ಮಾಡಲು ಸಹಾಯ ಮಾಡುತ್ತದೆ.
ಜೇನುತುಪ್ಪ: ಸಬ್ಜಾ ಬೀಜಗಳನ್ನು ಬಿಸಿ ನೀರಿನಲ್ಲಿ ನೆನೆಸಿ, ಇದಕ್ಕೆ ಒಂದು ಸ್ಪೂನ್ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ ಮತ್ತು ತೂಕ ವೇಗವಾಗಿ ಇಳಿಯುತ್ತದೆ.
ಪುದೀನ: ಸಬ್ಜಾ ಬೀಜಗಳೊಂದಿಗೆ ಪುದೀನ ಎಲೆಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಅಲ್ಲದೇ ದೇಹದಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದು ಕಡಿಮೆ ಆಗುತ್ತದೆ.
ಹಣ್ಣುಗಳು: ಪಪ್ಪಾಯಿ, ಕಿವಿ ಮತ್ತು ಸ್ಟ್ರಾಬೆರಿಗಳಂತಹ ಹಣ್ಣುಗಳೊಂದಿಗೆ ಸಬ್ಜಾ ಬೀಜಗಳನ್ನು ಬೆರೆಸಿ ತಿನ್ನುವುದು ತೂಕ ಇಳಿಸಿಕೊಳ್ಳಲು ತುಂಬಾ ಸಹಾಯಕವಾಗಿದೆ. ಅಲ್ಲದೇ ಈ ರೀತಿ ಸೇವಿಸುವುದು ಆರೋಗ್ಯಕ್ಕೆ ಸಹ ಪ್ರಯೋಜನಕಾರಿ ಆಗಿದೆ.
ಸಬ್ಜಾ ಬೀಜಗಳು ಮತ್ತು ಶುಂಠಿ: ಸಬ್ಜಾ ಬೀಜಗಳ ಜೊತೆಗೆ ಚಿಕ್ಕ ಪೀಸ್ ಶುಂಠಿ ಬೆರೆಸಿ ತಿನ್ನಿ. ಇದು ನಿಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಬರ್ನ್ ಮಾಡಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ದಾಲ್ಚಿನ್ನಿ: ದಾಲ್ಚಿನ್ನಿ ಒಂದು ಶಕ್ತಿಶಾಲಿ ಮಸಾಲೆ ಆಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.