ನಮಗೆ ದಿನವೀಡಿ ಕೆಲಸ ಮಾಡಲು ಉತ್ಸಾಹ ಇರಬೇಕು ಎಂದು ಅದಕ್ಕೆ ಸೇವಿಸುವ ಆಹಾರ ಆಗಿರುತ್ತದೆ. ಆದರೆ ಕೆಲವೊಮ್ಮೆ ಮಲಬದ್ಧತೆ, ಅಜೀರ್ಣತೆ, ಎದೆಯುರಿ, ಗ್ಯಾಸ್ಟ್ರಿಕ್, ವಿಪರೀತ ಉಷ್ಣ ಹೀಗೆ ಹತ್ತು ಹಲವು ಕಾರಣದಿಂದಾಗಿ ಹೊಟ್ಟೆ ನೋವು ಬರುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಅಡ್ಡ ಪರಿಣಾಮ ಬಿರದೇ ಕೆಲವು ಮನೆಮದ್ದುಗಳನ್ನು ಅನುಸರಿಸಿ.
ನಿಂಬೆ ಚಹಾ: ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಇರುತ್ತದೆ. ಇದರಿಂದಾಗಿ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುವಲ್ಲಿ ನಿಂಬೆ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಾಗಿ ಊಟ ಮಾಡಿ ಜೀರ್ಣ ಆಗದೆ ಹೊಟ್ಟೆ ನೋವಿನಿಂದ ಬಳಲುತ್ತಿರುವವರು ನಿಂಬೆ ಚಹಾ ಮಾಡಿಕೊಂಡು ಕುಡಿಯಬೇಕು. ಆ ಸಂದರ್ಭದಲ್ಲಿ ನಿಂಬೆ ಹಣ್ಣಿನ ರಸ ನಮ್ಮ ಹೊಟ್ಟೆ ಸೇರಿದಾಗ ಬಹುಬೇಗನೆ ಜೀರ್ಣವಾಗುವಂತೆ ಮಾಡುತ್ತದೆ. ಇದರ ಜೊತೆಗೆ ಯಾವುದೇ ರೀತಿಯ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುತ್ತದೆ.
ಪುದೀನ ಎಲೆ: ತಾಜಾ ಪುದೀನ ಎಲೆಗಳು ಸಹ ಅಜೀರ್ಣತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಒಳ್ಳೆಯ ಮನೆಮದ್ದು ಆಗಿದೆ. ಕೆಲವೊಮ್ಮೆ ನಮ್ಮ ಜೀಣಾರ್ಂಗದಲ್ಲಿ ಮಾಂಸ ಖಂಡಗಳ ಭಾಗದಲ್ಲಿ ಗ್ಯಾಸ್ಟ್ರಿಕ್ನ ಸಮಸ್ಯೆಯಿಂದ ವಿಪರೀತ ನೋವು ಉಂಟಾಗುತ್ತದೆ. ಜೊತೆಗೆ ಎದೆಯುರಿತದ ತರಹ ಭಾಸವಾಗುತ್ತದೆ. ಇಂತಹ ಸಮಯದಲ್ಲಿ ಪುದೀನ ಎಲೆಗಳನ್ನು ಸೇವಿಸಬೇಕು. ಈ ಪುದಿನ ಎಲೆಗಳಲ್ಲಿ ಆಂಟಿ- ಸ್ಪಸ್ಮೊಡಿಕ್ ಲಕ್ಷಣಗಳು ಹೆಚ್ಚಾಗಿದ್ದು, ಈ ರೀತಿಯ ಸಮಸ್ಯೆಗಳಿಗೆ ಬಹು ಬೇಗನೆ ಮುಕ್ತಿ ಕೊಡುತ್ತೇವೆ. ಪುದೀನ ಎಲೆಗಳಲ್ಲಿರುವ ಗಿಡಮೂಲಿಕೆಗಳು ಮನುಷ್ಯನ ಕರುಳಿನ ಮತ್ತು ಹೊಟ್ಟೆಯ ಏರಿಳಿತಗಳನ್ನು ನಿಯಂತ್ರಣ ಮಾಡುವ ಶಕ್ತಿಯನ್ನು ಹೊಂದಿವೆ.
ಶುಂಠಿ ತಿನ್ನಿ: ಶುಂಠಿಯ ಬೇರುಗಳನ್ನು ಹಾಗೆ ಹಲ್ಲಿನಿಂದ ಬೇಕಾದರೂ ಜಗಿದು ತಿನ್ನಬಹುದು ಅಥವಾ ಶುಂಠಿಯನ್ನು ಸಣ್ಣಗೆ ಚೂರುಗಳನ್ನಾಗಿ ಮಾಡಿಕೊಂಡು ಅದರಿಂದ ಚಹ ತಯಾರಿಸಿಕೊಂಡು ಕುಡಿಯಬಹುದು. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಕೆಲವು ರೋಗಗಳಿಂದ ಮುಕ್ತಿ ಪಡೆಯಿರಿ. ಜೊತೆಗೆ ಶುಂಠಿ ಹೃದ್ರೋಗವನ್ನು ತಡೆಯುತ್ತದೆ, ಮುಟ್ಟಿನ ನೋವನ್ನು ನಿವಾರಿಸುತ್ತದೆ.
ಜೀರಿಗೆ ಕಷಾಯ: ಜೀರಿಗೆ ಕಷಾಯವು ಜಠರಕ್ಕೆ ಒಳ್ಳೆಯದು. ಇದರ ಜೊತೆಗೆ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬುವಿಕೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ, ಜೀರಿಗೆ ಕಷಾಯವನ್ನು ಮಾಡಿ ಕುಡಿಯುವುದು ಉತ್ತಮ ಪರಿಹಾರವಾಗಿದೆ. ಜೀರಿಗೆಯಲ್ಲಿ ಅಧಿಕ ಪ್ರಮಾಣದ ನಾರಿನಾಂಶ ಇರುವುದರಿಂದ, ಜೀರ್ಣಶಕ್ತಿ ಹೆಚ್ಚಿಸಿ, ನಮ್ಮ ಆರೋಗ್ಯ ಮತ್ತು ದೇಹದ ತೂಕ ಎರಡನ್ನೂ ಸಹ ಇದು ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತದೆ.
ಇಂಗು: ಅಸ್ತಮಾ ಇದ್ದವರಿಗೆ ಇದು ಒಳ್ಳೆಯ ಮನೆಮದ್ದಾಗಿದೆ. ಅಷ್ಟೇ ಅಲ್ಲದೇ ಹೊಟ್ಟೆ ಉಬ್ಬರ ಸೇರಿದಂತೆ ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂಗಿನಿಂದ ಮಾಡಿದಂತಹ ಆಯುರ್ವೇದಿಕ್ ಕಷಾಯವು ಹೊಟ್ಟೆಯ ಅಸಿಡಿಟಿ, ಹೊಟ್ಟೆಯ ಗ್ಯಾಸ್ ಮತ್ತು ಸೆಳೆತದಿಂದ ಪರಿಹಾರ ನೀಡುವುದು.