ಬೆಂಗಳೂರು: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇದೆ. ಅದು ಯಾವಗ ನಿಲ್ಲುತ್ತದೆ. ಅನ್ನೂವುದೆ ಈಗಿನ ಪ್ರಶ್ನೆಯಾಗಿದೆ. ಹೌದು ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಮಲ ತಂದೆಗೆ 20 ವರ್ಷ ಜೈಲು, ಹತ್ತು ಸಾವಿರ ರೂ. ದಂಡ ವಿಧಿಸಿ ನಗರದ 2ನೇ ತ್ವರಿತ ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶಿಸಿದೆ. ವೆಂಕಟೇಶ್ (48) ಶಿಕ್ಷೆಗೆ ಗುರಿಯಾದವನು.
ಸಿಡೇದಹಳ್ಳಿ ನಿವಾಸಿ ವೆಂಕಟೇಶ್ ತನ್ನ 2ನೇ ಪತ್ನಿಯ 14 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತು ಸಂತ್ರಸ್ತೆ 2013ರ ಫೆಬ್ರವರಿ 22ರಂದು ಪೀಣ್ಯ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ವೆಂಕಟೇಶ್ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಪೋಕ್ಸೋ ಕಾಯಿದೆಯನ್ವಯ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ನ್ಯೂ ಇಯರ್ ದಿನ ಮಧ್ಯರಾತ್ರಿ 2.15ರ ವರೆಗೆ ರೈಲು ಸಂಚಾರ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎ.ಜಿ ಗಂಗಾಧರ್, ಅಪರಾಧಿ ವೆಂಕಟೇಶ್ಗೆ 20 ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಜತೆಗೆ, ಸಂತ್ರಸ್ತೆಗೆ 4 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕಿ ಎ.ವಿ. ಮಧು ವಾದಿಸಿದ್ದರು.