ಚಳಿಗಾಲದಲ್ಲಿ ಏನನ್ನು ಸೇವಿಸಬಾರದು ಎಂಬುದರ ಮೇಲೆ ನಮಗೆ ಮಾಹಿತಿ ಇರಬೇಕು. ಆದಾಗ್ಯೂ ಚಳಿಗಾಲವು ಕುರುಕಲು ತಿಂಡಿಯ ಬೇಡಿಕೆಯನ್ನು ಹೆಚ್ಚಿಸುತ್ತದೆ. ಖಾರ ಖಾರದ, ಸಿಹಿಯಾದ, ಕರಿದ ಪದಾರ್ಥಗಳ ಸೇವನೆಯ ಬಯಕೆಯನ್ನು ಹೆಚ್ಚು ಮಾಡುತ್ತದೆ. ಇದರಿಂದಲೇ ಚಳಿಗಾಲದಲ್ಲಿ ನಮಗೆ ಗೊತ್ತಿಲ್ಲದಂತೆಯೇ ನಮ್ಮ ತೂಕ ಹೆಚ್ಚಾಗುತ್ತದೆ.
ಹೌದು, ಕೆಲವೊಮ್ಮೆ ನಮಗೆ ಗೊತ್ತಿಲ್ಲದೆಯೇ ಚಳಿಗಾಲದ ತಿಂಗಳುಗಳಲ್ಲಿ ನಮ್ಮ ತೂಕ ಹೆಚ್ಚಾಗುತ್ತದೆ. ಏಕೆಂದರೆ ಚಳಿಗಾಲದ ಆಹಾರವು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವ ಮತ್ತು ಅನಿರೀಕ್ಷಿತ ತೂಕವನ್ನು ಉಂಟುಮಾಡುವ ಕೆಲವು ಆಹಾರಗಳನ್ನು ಒಳಗೊಂಡಿರುತ್ತದೆ.
ಚಳಿಗಾಲದಲ್ಲಿ ನಾವು ಚಹಾ ಕಾಫಿ ಮತ್ತು ಸಕ್ಕರೆಯ ಆಹಾರಗಳಂತಹ ಆಹಾರಗಳಿಗಾಗಿ ಹಂಬಲಿಸುತ್ತೇವೆ. ಇವು ತೂಕ ಹೆಚ್ಚು ಮಾಡುವುದರೊಂದಿಗೆ ಆರೋಗ್ಯಕ್ಕೆ ಅಡ್ಡಿ ಉಂಟುಮಾಡಬಹುದು.
1. ಕೆನೆಭರಿತ ಸೂಪ್ಗಳು
2. ಚಳಿಗಾಲದ ಸಿಹಿತಿಂಡಿಗಳು
ಕ್ಯಾರೆಟ್ ಹಲ್ವಾ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಲಡ್ಡು, ಚಿಕ್ಕಿಗಳು ಮತ್ತು ಇತರ ಸಿಹಿ ತಿನಿಸುಗಳಿಲ್ಲದೆ ಚಳಿಗಾಲವು ಅಪೂರ್ಣ ಎಂದೇ ಅನೇಕರು ಭಾವಿಸುತ್ತಾರೆ.
ಆದರೆ, ಈ ಭಕ್ಷ್ಯಗಳು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುವುದರಿಂದ ಅವುಗಳ ಸೇವನೆಯ ಬಗ್ಗೆ ನೀವು ಜಾಗರೂಕರಾಗಿರಬೇಕು. ಸಕ್ಕರೆಯ ಆಹಾರಗಳು ಕಡಿಮೆ ಪೌಷ್ಟಿಕಾಂಶವನ್ನು ಹೊಂದಿರುತ್ತವೆ. ಅವು ನಿಮ್ಮ ದೇಹವನ್ನು ಯಾವುದೇ ಪೋಷಕಾಂಶಗಳನ್ನು ನೀಡದೆಯೇ ತೂಕವನ್ನು ಹೆಚ್ಚಿಸುತ್ತದೆ.
3. ಪರಾಟಾ
ಚಳಿಗಾಲದಲ್ಲಿ ಪರಾಟಾಗಳನ್ನು ತಿನ್ನಲು ಯಾರು ಇಷ್ಟಪಡುವುದಿಲ್ಲ ಹೇಳಿ? ನಾವು ಸಾಮಾನ್ಯವಾಗಿ ಉತ್ತಮ ಪ್ರಮಾಣದ ಬೆಣ್ಣೆ/ ತುಪ್ಪ ಮತ್ತು ಉಪ್ಪಿನಕಾಯಿಯೊಂದಿಗೆ ಸ್ಟಫ್ಡ್ ಪರಾಟಗಳು ತಿನ್ನಲು ಸಖತ್ ಟೇಸ್ಟಿಯಾಗಿರುತ್ತವೆ.
ಆದರೆ ತುಂಬಾ ಬೆಣ್ಣೆ, ತುಪ್ಪ ಮತ್ತು ಉಪ್ಪಿನಕಾಯಿ ತಿನ್ನುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇವು ನಿಮ್ಮ ಕ್ಯಾಲೋರಿ ಸೇವನೆಯನ್ನು ಹೆಚ್ಚಿಸಬಹುದು ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು.
4. ಚಹಾ ಮತ್ತು ಕಾಫಿ
ಪ್ರಪಂಚದಾದ್ಯಂತದ ಜನರ ಅತ್ಯಂತ ನೆಚ್ಚಿನ ಪಾನೀಯವೆಂದರೆ ಚಹಾ ಮತ್ತು ಕಾಫಿ. ಅದರಲ್ಲೂ ಚಳಿಗಾಲದಲ್ಲಿ ಬಿಸಿ ಬಿಸಿ ಚಹಾ ಅಥವಾ ಕಾಫಿ ಕುಡಿಯುವುದು ಬೇರೆಯದೇ ಆನಂದ ನೀಡುತ್ತದೆ.
ಇವು ನಿಮ್ಮನ್ನು ಬೆಚ್ಚಗಾಗಲು ಮತ್ತು ಆರಾಮವಾಗಿರಲು ಸಹಾಯ ಮಾಡುತ್ತದೆ. ಆದರೆ ನಿಮ್ಮ ಚಹಾ ಅಥವಾ ಕಾಫಿಯಲ್ಲಿ ಹೆಚ್ಚು ಸಕ್ಕರೆ ಇದ್ದರೆ, ಅದು ನಿಮ್ಮ ತೂಕ ಹೆಚ್ಚಾಗಲು ಕಾರಣವಾಗಬಹುದು.
5. ಬೇಯಿಸಿ ಮಾಡಿದ ತಿಂಡಿ
ಪೇಸ್ಟ್ರಿ, ಕೇಕ್ಗಳಂತಹ ಕೆಲವು ಬೇಯಿಸಿದ ಪದಾರ್ಥಗಳು ನಿಮ್ಮ ತೂಕವನ್ನು ಅನಿರೀಕ್ಷಿತವಾಗಿ ಹೆಚ್ಚಿಸಬಹುದು. ಬೇಯಿಸಿದ ಆಹಾರಗಳು ವಿಶೇಷವಾಗಿ ಸಂಸ್ಕರಿಸಿದ ಸಕ್ಕರೆಯಲ್ಲಿ ಅಧಿಕವಾಗಿರುವ ಆಹಾರಗಳು ಅತಿಯಾದ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು