ಬೆಂಗಳೂರು: ರಾಮಜನ್ಮಭೂಮಿ ಹೋರಾಟದ ಕರಸೇವಕರ 31 ವರ್ಷದ ಹಿಂದಿನ ಕೇಸ್ ರೀ ಓಫನ್ ಮಾಡಿರೋ ವಿಚಾರ ಕಾಂಗ್ರೆಸ್- ಬಿಜೆಪಿ ಮಧ್ಯೆ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ. ಕೇಸರಿಪಡೆ ಕೈ ಸರ್ಕಾರವನ್ನ ಹಿಂದೂ ವಿರೋಧಿ ಕಾಂಗ್ರೆಸ್ ಅನ್ನೋ ಹಣೆಪಟ್ಟಿ ಕಟ್ಟಿ ಮುಸ್ಲಿಂ ತುಷ್ಠೀಕರಣ ಅಂತ ವ್ಯಂಗ್ಯವಾಡ್ತಿದೆ. ಇತ್ತ ಗೃಹ ಸಚಿವ ಪರಮೇಶ್ವರ್ ಕೇಸ್ ರೀ ಒಪನ್ ಗೆ ಸ್ಪಷ್ಟನೆ ಕೊಟ್ಟಿದ್ದು ಬಿಜೆಪಿಗೆ ಟಾಂಗ್ ಕೊಡ್ತಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ದೊಡ್ಡಮಟ್ಟದ ಹೋರಾಟಕ್ಕೆ ವಿಜಯೇಂದ್ರ ಕರೆ ಕೊಟ್ಟಿದ್ದು ಇಂದು ಫ್ರೀಡಂ ಪಾರ್ಕ್ ನಲ್ಲಿ ಸರ್ಕಾರದ ವಿರುದ್ಧ ಕೇಸರಿ ರಣಕಹಳೆ ಮೊಳಗಲಿದೆ.
ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ ಬಿಜೆಪಿ, ಸಂಘಪರಿವಾರ ಸೇರಿದಂತೆ ಕೋಟ್ಯಾಂತರ ಹಿಂದೂಗಳು ಸೇರಿದಂತೆ ಇಡೀ ವಿಶ್ವವೇ ಈ ಅಮೃತ ಘಳಿಗೆಗೆ ಕಾತರರಾಗಿದ್ದಾರೆ. ಈ ಮಧ್ಯೆ 31 ವರ್ಷಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿಯ ಕರಸೇವಕರ ಕೇಸ್ ಅನ್ನ ಸರ್ಕಾರ ಮತ್ತೆ ರೀ ಓಫನ್ ಮಾಡಿ ಕರಸೇವಕರನ್ನ ಬಂಧನ ಮಾಡಿರೋದು ಇದೀಗ ರಾಜಕೀಯ ಸ್ವರೂಪ ಪಡೆಯುತ್ತಿದೆ. ಕಾಂಗ್ರೆಸ್- ಬಿಜೆಪಿ ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದ್ದು ಹಿಂದು- ಮುಸ್ಲಿಂ ತುಷ್ಠೀಕರಣ ಅನ್ನೋ ಜಟಾಪಟಿ ಶುರುವಾಗಿದೆ…
ಇನ್ನು ಈ ಕೇಸ್ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಗೃಹ ಸಚಿವ ಜಿ ಪರಮೇಶ್ವರ್ ಬಿಜೆಪಿ ಆರೋಪಗಳಿಗೆ ಟಾಂಗ್ ಕೊಟ್ಟಿದ್ದಾರೆ. ಹಳೆಯ ಕೇಸ್ ಗಳನ್ನ ಕ್ಲಿಯರ್ ಮಾಡಿ ಅಂತ ಸೂಚನೆ ನೀಡಿದ್ದೆವು, ಅದರಂತೆ ಕ್ಲಿಯರ್ ಮಾಡಲು ಕೇಸ್ ಓಪನ್ ಮಾಡಿದ್ದಾರೆ. ಅದೊಂದೆ ಕೇಸ್ ಪ್ರತ್ಯೇಕವಾಗಿ ಏನೂ ಓಫನ್ ಮಾಡಿಲ್ಲ ಇದನ್ನ ರಾಜಕೀಯ ಉದ್ದೇಶದಿಂದ ಹೀಗೆ ಮಾಡೋದು ಸರಿಯಲ್ಲ. ಎಲ್ಲರಿಗೂ ಒಂದೇ ನ್ಯಾಯ, ಅದರಲ್ಲಿ ಹಿಂದೂಗಳು ಬಿಟ್ಟು ಬೇರೆ ಧರ್ಮದವರು ಇಲ್ವಾ
SP ಗಳ ಜ್ಯೂರಿಸ್ಟ್ರಿಕ್ಷನ್ ನಲ್ಲಿ ಕೇಸ್ ಗಳು ಆಗ್ತಿವೆ ಈ ಕೇಸ್ ಗಳಲ್ಲಿ ನಮ್ಮ ಇಂಟರ್ ಫಿಯರೆನ್ಸ್ ಇಲ್ಲ, ಪೋಲೀಸ್ ಅವರಿಗೆ ಕಾನೂನು ಪುಸ್ತಕ ಕೊಟ್ಟಿಲ್ಲವಾ ಅದರಂತೆ ಕೆಲಸ ಮಾಡ್ತಾರೆ ಅಂತ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ…
ಹುಬ್ಬಳ್ಳಿಯ ಹಿಂದೂ ಪರ ಸಂಘಟನೆ ಕಾರ್ಯಕರ್ತರನ್ನ ಬಂಧಿಸಿರುವ ಸರ್ಕಾರದ ಕ್ರಮದ ವಿರುದ್ಧ ಸಮರ ಸಾರಲು ಬಿಜೆಪಿ ಮುಂದಾಗಿದೆ. ಹಿಂದೂ ವಿರೋಧಿ ಸರ್ಕಾರ ಅಂತ ನಾಳೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟಕ್ಕೆ ರಾಜ್ಯಾಧ್ಯಕ್ಷ ವಿಜಯೇಂದ್ರ ಕರೆ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮರಿಹುಲಿ ಕರ್ನಾಟಕದಲ್ಲಿರೋದು ಹಿಂದೂ ವಿರೋಧಿ ಸರ್ಕಾರ. ತಾವು ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂ ವಿರೋಧಿ ಎಂಬುದನ್ನು ಈ ಸರ್ಕಾರ ಜನತೆಗೆ ಪದೇಪದೇ ನೆನಪು ಮಾಡುತ್ತಿದೆ. ರಾಮಮಂದಿರದ ಉದ್ಘಾಟನೆ ಸಮಾರಂಭ ಸನ್ನಿಹಿತವಾಗುವ ಹೊತ್ತಿನಲ್ಲೇ ಹುಬ್ಬಳ್ಳಿಯ 31 ವರ್ಷದ ಹಳೆಯ ಕೇಸನ್ನು ರೀ ಓಪನ್ ಮಾಡಿ ಹಿಂದೂ ಕಾರ್ಯಕರ್ತ ಬಂಧಿಸಿದ್ದಾರೆ. ಇದು ದ್ವೇಷದ ರಾಜಕಾರಣವಲ್ಲದೆ ಮತ್ತಿನ್ನೇನು ಇದನ್ನು ನಾವು ಖಂಡಿಸುತ್ತೇವೆ. ಜೊತೆಗೆ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದ್ದು ಫ್ರೀಡಂ ಪಾರ್ಕ್ ನಲ್ಲಿ ನಾವು ಸರ್ಕಾರದ ವಿರುದ್ಧ ಹೋರಾಟ ಮಾಡ್ತೀವಿ ಎಂದ್ರು….
ಇನ್ನು ಇದೇ ವಿಚಾರವಾಗಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಬಿ ಶ್ರೀರಾಮುಲು ರಾಜ್ಯದ ಕಾಂಗ್ರೆಸ್ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಶ್ರೀರಾಮಚಂದ್ರನೇ ಕಾಲ್ಪನಿಕ ಎನ್ನುವ ಕಾಂಗ್ರೆಸ್ಸಿಗರು ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ದೇವಾಲಯದ ಮಾತನಾಡುತ್ತಾರೆ. ಶ್ರೀರಾಮಚಂದ್ರನೇ ಕಾಲ್ಪನಿಕ ಎಂದಾದರೆ ಮಹರ್ಷಿ ವಾಲ್ಮೀಕಿ ಕುರಿತು ಮಾತನಾಡಲು ನಿಮಗೇನು ಹಕ್ಕಿದೆ ಎಂದು ಪ್ರಶ್ನಿಸಿದರು. ಸೇಡಿನ ರಾಜಕಾರಣದ ಮೊರೆ ಹೋಗಿರುವ ಕಾಂಗ್ರೆಸ್ ಅಂತ್ಯಕಾಲ ಆರಂಭವಾಗಿದೆ ಎಂದು ಶ್ರೀರಾಮುಲು ಹೇಳಿದ್ರು.
ಸರ್ಕಾರದ ಕ್ರಮ ಖಂಡಿಸಿದ ಮಾಜಿ ಸಚಿವ ಸುನೀಲ್ ಕುಮಾರ್ ಸರ್ಕಾರಕ್ಕೆ ನೇರ ಸವಾಲೆಸೆದಿದ್ದಾರೆ. ರಾಮಮಂದಿರ ಪ್ರಾಣ ಪ್ರತಿಷ್ಟಾಪನೆ ವೇಳೆ ಮಂಗಳಕರ ವಾತಾವರಣ ಸೃಷ್ಟಿ ಇರುವಾಗ ಅಮಂಗಳಕರ ವಾತಾವರಣ ಸೃಷ್ಟಿಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ರಾವಣ ಮಾತ್ರ ರಾಮ ವಿರೋಧಿ ಅಲ್ಲ, ಸಿದ್ದರಾಮಯ್ಯ ಕೂಡ ರಾಮ ವಿರೋಧಿ ಅನ್ನೋದನ್ನ ತೋರಿಸಿದ್ದಾರೆ. ಹಿಂದೂ ಕಾರ್ಯಕರ್ತರ ಬಂಧನ ಮಾಡೋ ಮೂಲಕ ತಮ್ಮ ನಿಲುವನ್ನ ಅವರು ತೋರಿಸಿದ್ದಾರೆ. ಬಂಧನ ಮಾಡಿದಾಕ್ಷಣ ಹಿಂದುತ್ವಕ್ಕೆ ಧಕ್ಕೆ ಮಾಡಲು ಸಾಧ್ಯವಿಲ್ಲ. ನಿಮಗೆ ಧಮ್ಮು ತಾಕತ್ತು ಇದ್ರೆ ನಾನು ಕರಸೇವಕ ನನ್ನ ಬಂಧನ ಮಾಡಿ ಅಂತ ಅವಾಲು ಹಾಕಿದ್ದಾರೆ ಸುನೀಲ್ ಕುಮಾರ್…
ಒಟ್ನಲ್ಲಿ ಕರಸೇವಕರ ಕೇಸ್ ಬಂಧನ ವಿಚಾರ ರಾಜಕೀಯವಾಗಿ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ಹಿಂದೂ ವಿರೋಧಿ ಮುಸ್ಲಿಂ ತುಷ್ಠೀಕರಣ ಅಂತ ಕಾಂಗ್ರೆಸ್ ವಿರುದ್ಧ ಬಿಜೆಪಿ ಕೆಂಡ ಕಾರ್ತಿದೆ. ಇತ್ತ ಗೃಹ ಸಚಿವರು ಹಳೆಯ ಕೇಸ್ ಗಳನ್ನ ಕ್ಲಿಯರ್ ಮಾಡ್ತಿದ್ದೇವೆ ಅಂತಿದ್ರೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕೇಸರಿ ಪಡೆ ನಾಳೆ ಮರಿಹುಲಿ ನೇತೃತ್ವದಲ್ಲಿ ದೊಡ್ಡಮಟ್ಟದ ಹೋರಾಟ ನಡೆಸ್ತಿದೆ ಈ ವಿಚಾರ ಎಲ್ಲಿಗೆ ಹೋಗಿ ನಿಲ್ಲುತ್ತೆ ಎಂಬುದನ್ನ ಕಾದುನೋಡಬೇಕಿದೆ..