ಗದಗ: ಮುಡಾ ಸೈಟು ಹಂಚಿಕೆ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿದರೆ ಸತ್ಯ ಹೊರಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ.
Ladyfinger Benefits: ಮಧುಮೇಹಿಗಳಿಗೆ ಬೆಂಡೆಕಾಯಿ ಸೇವನೆ ಯಾವ ರೀತಿ ಸಹಾಯ ಮಾಡುತ್ತೆ ಗೊತ್ತಾ..?
ಹಾಗಿದ್ದರೆ ಇದರ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಬೇಕು. ಒಂದು ಸಿಬಿಐ ಅಥವಾ ನ್ಯಾಯಾಧೀಶರಿಂದ ತನಿಖೆಯಾಗಬೇಕು. ಬೇರೆ ಬೇರೆ ಸರ್ಕಾರದ ಸ್ಕೀಂನಲ್ಲಿ ಜಮೀನು ಹಂಚಿಕೆಯಾಗಿರುತ್ತದೆ. ಸ್ಕೀಮ್ನ ನ್ಯಾಯ ಸಮ್ಮತವಾಗಿ ಮಾಡಿಕೊಂಡಿದ್ದರೆ ತಕರಾರಿಲ್ಲ. ಆದರೆ ಸ್ಕೀಂ ಬದಲಾವಣೆ ಮಾಡಿಕೊಂಡರೆ ತನಿಖೆಯಿಂದ ಹೊರಬರುತ್ತದೆ ಎಂದು ಹೇಳಿದರು.
ಡೆಂಗ್ಯೂ ಎದುರಿಸುವಲ್ಲಿ ವಿಫಲ:
ಡೆಂಗ್ಯೂ ಜ್ವರ ಎದುರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರ್ಕಾರ ಬಡವರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ. ಡೆಂಗ್ಯೂ ಪ್ರಕರಣಗಳು ಒಂದೂವರೆ ತಿಂಗಳಿನಿಂದ ಪ್ರಾರಂಭವಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ, ಆರೋಗ್ಯ ಇಲಾಖೆ, ಡಿಹೆಚ್ಓಗಳು ತೆಗೆದುಕೊಳ್ಳಬೇಕಿತ್ತು. ಆದರೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿಲ್ಲ ಎಂದು ಆರೋಪಿಸಿದರು.