ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಮನವಿಗೆ ಮಣಿದ ಕರ್ನಾಟಕ ಸರ್ಕಾರ ಅಂಗನವಾಡಿ ಕೇಂದ್ರಗಳಲ್ಲೇ ಎಲ್ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭಿಸಿದೆ. ಬೆಂಗಳೂರಿನ ಪಟ್ಟೇಗಾರಪಾಳ್ಯದ ಅಂಗನವಾಡಿ ಕೇಂದ್ರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಕೆಜಿ ಮತ್ತು ಯುಕೆಜಿ ತರಗತಿ ಆರಂಭಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ರಾಜ್ಯದಲ್ಲಿ ಇನ್ನೂ 6 ದಿನ ಮಳೆಯ ಆರ್ಭಟ: ಎಲ್ಲಾ ಜಿಲ್ಲೆಗಳಿಗೂ ಇಂದಿನಿಂದ 4 ದಿನ ಯೆಲ್ಲೋ ಅಲರ್ಟ್
ಆ ನಂತರ ಸುದ್ದಿಗೋ಼ಟಿ ನಡೆಸಿದ ಅವರು, ಇಡೀ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲೇ ಅಂಗನವಾಡಿ ಪ್ರಾರಂಭ ಆಗಿದ್ದು ಇದು ನನ್ನ ಭಾಗ್ಯ ಅಂತ ಭಾವಿಸ್ತೀನಿ ಮೊದಲನೇ ಬಾರಿಗೆ ಅಂಗನವಾಡಿಯಲ್ಲಿ ಸರ್ಕಾರಿ ಮಾಂಟೆನ್ಸರಿ, LKG & UKG ಎಂದು ಸಂಕೇತಿಕವಾಗಿ ಉದ್ಘಾಟನೆ ಮಾಡ್ತಾ ಮಾಡಿದೀವಿ ಸರ್ಕಾರದವತಿಯಿಂದ ಬಹಳ ಮಹತ್ತರ ಹೆಜ್ಜೆ ಕ್ರಾಂತಿಕಾರಿ ನಿರ್ಣಯ ಎಂದು ಹೇಳಿದರು.
ಸರ್ಕಾರಕ್ಕೆ ಈ ಹಿಂದೆ ಹಲವು ಬಾರಿ ಅಂಗನವಾಡಿ ಕೇಂದ್ರಗಳಲ್ಲೇ ಎಲ್ಕೆಜಿ-ಯುಕೆಜಿ ತರಗತಿ ಆರಂಭಿಸುವುದಕ್ಕೆ ಮನವಿ ಮಾಡಲಾಗಿತ್ತು. ಆದರೆ ಈ ಮನವಿಗೆ ಸರ್ಕಾರಗಳು ಪುರಸ್ಕರಿಸಿರಲಿಲ್ಲ. ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ-ಯುಕೆಜಿ ತರಗತಿಗೆ ತೆಗೆದರೆ ಅಂಗನವಾಡಿ ಕೇಂದ್ರಗಳು ಖಾಲಿ ಆಗುತ್ತವೆ. ಕಾರ್ಯಕರ್ತೆಯರು, ಸಹಾಯಕರಿಯರು, ಅಡುಗೆ ಸಹಾಯಕಿರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲೇ ಅಂಗನವಾಡಿ ಕೇಂದ್ರದಲ್ಲಿ ಎಲ್ಕೆಜಿ ಮತ್ತು ಯುಕೆಜಿ ಆರಂಭಿಸಬೇಕೆಂದು ಒತ್ತಾಯಿದ್ದರು.ಇದೀಗ, ಸರ್ಕಾರ ಅಂಗನವಾಡಿಯಲ್ಲೇ ಎಲ್ಕೆಜಿ ಮತ್ತು ಯುಕೆಜಿ ಆರಂಭಿಸಿದೆ ಎಂದು ಹೇಳಿದರು.