ಬೆಂಗಳೂರು: ರಾಜ್ಯ ಕಾಂಗ್ರೆಸ್ ನ ಬಣ ಬಡಿದಾಟದ ಕಾವು ದಿನದಿಂದ ದಿನಕ್ಕೆ ಜೋರಾಗ್ತಿದೆ, ಕಳೆದ ವಾರ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಪಾಲಿಟಿಕ್ಸ್ ನಡೆದ್ರೆ, ಗೃಹ ಸಚಿವ ಪರಮೇಶ್ವರ್ ಕರೆದ ಡಿನ್ನರ್ ಮೀಟಿಂಗ್ ಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಸಭೆ ರದ್ದಾಗಿಲ್ಲ, ಮುಂದೂಡಿಕೆಯಾಗಿದೆ ಅನ್ನೋ ಮೂಲಕ ಪರಂ ವಿರೋಧಿಗಳಿಗೆ ಟಾಂಗ್ ಕೊಡೋ ಕೆಲಸ ಮಾಡಿದ್ರೆ, ಸಂಕ್ರಾಂತಿಗೂ ಮೊದಲೇ ದಿಢೀರ್ ಅಂತ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಕೈ ಬಣ ಬಡಿದಾಟಕ್ಕೆ ಕಮಲ ನಾಯಕರು ವ್ಯಂಗ್ಯವಾಡ್ತಿದ್ದಾರೆ…
ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಖುರ್ಚಿಗಾಗಿ ಬಣ ಬಡಿದಾಟ ದಿನದಿಂದ ದಿನಕ್ಕೆ ಜೋರಾಗ್ತಿದೆ, ಇದಕ್ಕೆ ಅಸ್ತ್ರವಾಗಿರೋದೇ ಡಿನ್ನರ್ ಪಾಲಿಟಿಕ್ಸ್. ಕಳೆದ ವಾರ ಸಚಿವ ಸತೀಶ್ ಜಾರಕಿಹೊಳಿ ಡಿನ್ನರ್ ಪಾಲಿಟಿಕ್ಸ್ ನಡೆಸಿದ್ರು. ಡಿಸಿಎಂ ಡಿಕೆಶಿ ಫಾರಿನ್ ಟೂರ್ ಹೋಗಿರೋವಾಗ ಈ ಮೀಟಿಂಗ್ ನಡೆದಿದ್ದು ಒಂತರಾ ಡಿಕೆ ಬಣಕ್ಕೆ ಟಾಂಗ್ ಕೊಡುವಂತಿತ್ತು. ಇದಾದ್ಮೇಲೆ ಗೃಹ ಸಚಿವ ಪರಮೇಶ್ವರ್ ತಮ್ಮ ಶಕ್ತಿ ಪ್ರದರ್ಶನಕ್ಕೆ SC- ST ಸಚಿವರು, ಶಾಸಕರು, ಮಾಜಿ ಶಾಸಕರ ಡಿನ್ನರ್ ಮೀಟಿಂಗ್ ಫಿಕ್ಸ್ ಮಾಡಿದ್ರು ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಇವತ್ತೆ ಡಿನ್ನರ್ ಮೀಟಿಂಗ್ ನಡಿಬೇಕಿತ್ತು ಆದ್ರೆ ಕೈ ಹೈಕಮಾಂಡ್ ತಾರಾತುರಿಯಲ್ಲಿ ಇದಕ್ಕೆ ಬ್ರೇಕ್ ಹಾಕ್ತು…
ಅನ್ನದಾತರ ಮೊಗದಲ್ಲೂ ನಗು ತರಿಸಿದ ಗುಲಾಬಿ..! 1 ಲಕ್ಷ ರೂ. ಖರ್ಚು ಮಾಡಿದ್ರೆ 7 ಲಕ್ಷ ಲಾಭ ಸಿಗೋದು ಪಕ್ಕಾ!
ವಿದೇಶ ಪ್ರವಾಸದಿಂದ ವಾಪಸ್ಸಾದ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲೇ ಉಳಿದ್ರು. ಹೈಕಮಾಂಡ್ ನಾಯಕರನ್ನ ಭೇಟಿಯಾದ ಡಿಸಿಎಂ ಈ ಡಿನ್ನರ್ ಮೀಟಿಂಗ್ ಗಳ ಬಗ್ಗೆ ದೂರು ಕೊಟ್ರು. ಇದೀಗ ಪರಂ ಕರೆದಿರೋ ಡಿನ್ನರ್ ಕ್ಯಾನ್ಸಲ್ ಮಾಡಿಸುವಂತೆ ದೂರಿದ್ರು. ತಕ್ಷಣ ರಾಜ್ಯ ಉಸ್ತುವಾರಿ ಸುರ್ಜೆವಾಲ ಪರಮೇಶ್ವರ್ ಗೆ ದೂರವಾಣಿ ಕರೆ ಮಾಡಿ ಮೀಟಿಂಗ್ ನಿಲ್ಲಿಸುವಂತೆ ತಾಕೀತು ಮಾಡಿದ್ರು. ಈ ಬಗ್ಗೆ ಮಾತನಾಡಿದ ಪರಮೇಶ್ವರ್ ನಮ್ಮ ಉಸ್ತಿವಾರಿಗಳು ಅವರು ಹೇಳೋದನ್ನ ಕೇಳಲೇಬೇಕು. ಈ ಸಭೆ ರದ್ದಾಗಿಲ್ಲ, ಮುಂದೂಡಿಕೆ ಆಗಿದೆ ಅಷ್ಟೇ ಸುರ್ಜೇವಾಲ ಅವರು ಯಾವಾಗ ಸಮಯ ಕೊಡ್ತಾರೋ ಆಗ ಸಭೆ ಮಾಡ್ತೇವೆ.
ರಾಜಕಾರಣ ಮಾಡೋದಾದ್ರೆ ಓಪನ್ ಆಗಿಯೇ ಮಾಡ್ತೇವೆ ಮುಚ್ಚಿಟ್ಟು ಮಾಡುವಂಥದ್ದೇನೂ ಇಲ್ಲ, ನಮ್ಮ ಸಭೆ ಸಹಿಸಲ್ಲ ಅಂತ ಆದ್ರೆ ಅದಕ್ಕೆ ತಕ್ಕ ಉತ್ತರ ಕೊಡ್ತೇವೆ, ಆ ಶಕ್ತಿ ಇದೆ ನಮಗೆ ಅಂತ ಡಿಸಿಎಂ ಡಿಕೆಶಿ ಗೆ ಟಾಂಗ್ ಕೊಟ್ಟಿದ್ದಾರೆ ಪರಮೇಶ್ವರ್. ಇನ್ನು ಪರಮೇಶ್ವರ್ ಕರೆದ ಸಭೆ ರದ್ದಾದ ವಿಚಾರದ ಬಗ್ಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿಡಿನ್ನರ್ ಹೊಸದೇನು ಅಲ್ಲ. ಮುಸುಕಿನ ಗುದ್ದಾಟ ಏನೂ ಇಲ್ಲಸಮಸ್ಯೆ ಉದ್ಬವವಾದಾಗ ಹೈಕಮಾಂಡ್ ಮಾತು ಕೇಳಬೇಕು, ರಾಜಕೀಯದಲ್ಲಿ ಹಿನ್ನಡೆ ಮನ್ನಡೆ ಇರುತ್ತೆ ನಮ್ಮ ಊಟ ನಮ್ಮದು ಬೇರೆಯವರಿಗೇನು ಸಂಬಂದ. ಅವರಿಗೇನು ಅತಂಕ ಪರ್ಮಿಷನ್ ತೆಗೆದುಕೊಂಡು ಮತ್ತೆ ಸಭೆ ಮಾಡಬಹುದು ಅಂತ ಡಿಕೆಶಿ ಬಣ ಕ್ಕೆ ಟಾಂಗ್ ಕೊಟ್ಟಿದ್ದಾರೆ ಸತೀಶ್.
ಇಷ್ಟೆಲ್ಲಾ ಬೆಳವಣಿಗೆಗಳಾಗ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ಅಲರ್ಟ್ ಆಗಿದೆ ದಿಢೀರ್ ಅಂತ ಸೋಮವಾರ ಕೈ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. CLP ಸಭೆಗೆ ಸುರ್ಜೆವಾಲಾ, ವೇಣುಗೋಪಾಲ್ ಭಾಗಿಯಾಗೊ ಸಾಧ್ಯತೆ ಇದೆ. ರಾಜ್ಯ ಕಾಂಗ್ರೆಸ್ ನಲ್ಲಿ ಸಂಕ್ರಾತಿಗೂ ಸಂಚಲನ ಸೃಷ್ಟಿಯಾಗಿದ್ದು ಸಂಕ್ರಾತಿಗೂ ಮುನ್ನ ದಿಡೀರ್ ಶಾಸಕಾಂಗ ಸಭೆ ಕರೆದಿರೋದೇಕೆ ಅನ್ನೋ ಕುತೂಹಲ ಮೂಡಿದೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಾಯಕತ್ವ ಬದಲಾವಣೆ ಚರ್ಚೆಗೆ ಬ್ರೇಕ್ ಹಾಕುತ್ತಾ ಹೈಕಮಾಂಡ್, ಎಲ್ಲಾ ಶಾಸಕರಿಗೂ ಸಂದೇಶ ರವಾನಿಸುತ್ತಾ ಹೈಕಮಾಂಡ್. ಅತ್ವಾ ಡಿಕೆಶಿ ರಣತಂತ್ರಕ್ಕೆ ಚೆಕ್ ಮೇಟ್ ಇಡ್ತಾರಾ ಸಿಎಂ ಸಿದ್ದು ಅನ್ನೋ ಕುತೂಹಲ ಹೆಚ್ಚಾಗಿದೆ.