ಬೆಂಗಳೂರು:- ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಈಗಾಗಲೇ ಚರ್ಚೆ ಜೋರಾಗಿದ್ದು, ಹೀಗಿರುವಾಗಲೇ ಮಹಿಳಾ ಸಿಎಂ ಕೂಗು ಜೋರಾಗಿದೆ.
ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್: ಕೇಂದ್ರದಿಂದ ಇನ್ಮುಂದೆ 5 ಲಕ್ಷದವರೆಗೆ ಚಿಕಿತ್ಸೆ ಫ್ರೀ!
ಕೋಡಿಮಠ ಅವರು ನುಡಿದಿರುವ ಸ್ಫೋಟಕ ಭವಿಷ್ಯ ರಾಜ್ಯದ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ, ಕಳೆದ ತಿಂಗಳು ಕೋಡಿಮಠ ಶ್ರೀಗಳು ನುಡಿದಿರುವ ಭವಿಷ್ಯವೊಂದು ತೀವ್ರ ವೈರಲ್ ಆಗ್ತಾ ಇದೆ.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಬದಲಾವಣೆಗೆ ವಿರೋಧ ಪಕ್ಷಗಳು ಆಗ್ರಹಿಸುತ್ತಾ ಬಂದಿವೆ. ಇದರ ಬೆನ್ನಲ್ಲೆ ಆಗಸ್ಟ್ ತಿಂಗಳಲ್ಲಿ ಮಾತನಾಡಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿಗಳು ಒಂದು ಭವಿಷ್ಯವನ್ನು ನುಡಿದಿದ್ದರು. ರಾಜ್ಯದಲ್ಲಿ ಮುಂದಿನ ಸಿಎಂ ಮಹಿಳೆ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು ಸದ್ಯ ಈ ಭವಿಷ್ಯ ತೀವ್ರ ಸಂಚಲನ ಮೂಡಿಸಿದೆ.
ಸದ್ಯ ಈ ಭವಿಷ್ಯವನ್ನೇ ಮುಂದಿಟ್ಟುಕೊಂಡು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ಸಿಎಂ ಲಕ್ಷ್ಮೀ ಹೆಬ್ಬಾಳಕರ್ ಎಂದು ಪೋಸ್ಟರ್ ಅನ್ನು ಹರಿ ಬಿಟ್ಟಿದ್ದಾರೆ.