ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರ ದೊಡ್ಡ ಮಟ್ಟದಲ್ಲೇ ಸದ್ದುಮಾಡ್ತಿದೆ.ಡಿಸೆಂಬರ್ ಇಲ್ಲವೇ ಜನವರಿಯಲ್ಲಿ ಸಂಪುಟ ಪುನಾರಚನೆ ಮಾಡೋಕೆ ವರಿಷ್ಠರು ಆಸಕ್ತಿವಹಿಸಿದ್ದಾರೆ. ನಾಳೆ ಸಿಎಂ ಸಿದ್ದರಾಮಯ್ಯ ಎಐಸಿಸಿ ಕಾರ್ಯಕಾರಿಣಿ ಸಭೆಯ ಹಿನ್ನೆಲೆ ದೆಹಲಿಗೆ ತೆರಳುತ್ತಿದ್ದು,ವರಿಷ್ಠರನ್ನ ಭೇಟಿ ಮಾಡಲಿದ್ದಾರೆ..ಈವೇಳೆ ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದು ವರಿಷ್ಠರ ಗ್ರೀನ್ ಸಿಗ್ನಲ್ ಪಡೆಯಲಿದ್ದಾರೆ.ಸಿಎಂ ದೆಹಲಿ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಯೆಸ್..ಕಳೆದ ಹಲವು ದಿನಗಳಿಂದ ರಾಜ್ಯ ಸಚಿವ ಸಂಪುಟ ಪುನಾರಚನೆಯ ವಿಚಾರ ದೊಡ್ಡಮಟ್ಟದಲ್ಲೇ ಚರ್ಚೆಯಾಗ್ತಿದೆ..ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೆಲವು ಸಚಿವರನ್ನ ಕೈಬಿಡುವ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ..ಸಂಪುಟ ಪುನಾರಚನೆಯ ಮಾಡಿ ಹೊಸಬರಿಗೆ ಅವಕಾಶ ಮಾಡಿಕೊಡುವ ಪ್ರಯತ್ನಕ್ಕೆ ಮುಂದಾಗಿದೆ..ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುನಾರಚನೆಯ ಸುಳಿವನ್ನ ಬಿಟ್ಟುಕೊಟ್ಟಿದ್ದಾರೆ..
Pregnancy Age: ಮಗು ಪಡೆಯಲು ಸೂಕ್ತವಾದ ವಯಸ್ಸು ಯಾವುದು.? ಮಹಿಳೆಯರು-ಪುರುಷರಿಗೆ ವೈದ್ಯರು ನೀಡೋ ಸಲಹೆ ಏನು.?
ಸಿಎಂ ಸಿದ್ದರಾಮಯ್ಯ ಕೂಡ ಪುನಾರಚನೆಗೆ ಮನಸ್ಸು ಮಾಡಿದ್ದು ವರಿಷ್ಠರ ಅನುಮತಿ ಪಡೆಯೋಕೆ ನಿರ್ಧರಿಸಿದ್ದಾರೆ..ಎಐಸಿಸಿ ಕಾರ್ಯಕಾರಿಣಿ ಸಭೆಗಾಗಿ ನಾಳೆ ಸಂಜೆ ದೆಹಲಿಗೆ ಪ್ರಯಾಣಿಸ್ತಿದ್ದಾರೆ..ಸಭೆಯ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಸೋನಿಯಾ ಹಾಗೂ ರಾಹುಲ್ ಗಾಂಧಿಯವರನ್ನ ಭೇಟಿ ಮಾಡಲಿದ್ದಾರೆ..ಈಗಾಗಲೇ ಡಿಸಿಎಂ ಡಿಕೆಶಿ ಕೂಡ ದೆಹಲಿಯಲ್ಲೇ ಬೀಡುಬಿಟ್ಟಿದ್ದು,ಇಬ್ಬರು ನಾಯಕರು ಈ ಬಗ್ಗೆ ವರಿಷ್ಠರ ಗ್ರೀನ್ ಸಿಗ್ನಲ್ ಪಡೆಯಲಿದ್ದಾರೆ..