ಮುಂಬೈ: ಟೀಂ ಇಂಡಿಯಾದ ಆಟಗಾರ, ಪ್ರಮುಖ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾಗೆ ಜನ್ಮದಿನದ ಸಂಭ್ರಮ. ಜಸ್ಪ್ರಿತ್ ಬುಮ್ರಾ ಅವರು 1993 ರ ಡಿಸೆಂಬರ್ 6 ರಂದು ಅಹಮದಾ ಬಾದ್ನಲ್ಲಿ ಜನಿಸಿದರು. ಬುಮ್ರಾ 2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ-20 ಹಾಗೂ ಏಕದಿನ ಪಾರ್ಮೆಟ್ಗೆ ಪಾದಾರ್ಪಣೆ ಮಾಡಿದರು.
ಬುಮ್ರಾ ಈವರೆಗೆ 72 ಏಕದಿನ ಪಂದ್ಯಗಳನ್ನು ಆಡಿದ್ದು 4.63 ಎಕಾನಮಿಯಲ್ಲಿ 121 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ನಲ್ಲಿ 60 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2.69 ಎಕಾನಮಿಯಲ್ಲಿ 128 ವಿಕೆಟ್ ಗಳನ್ನು ತಮ್ಮ ಖಾತೆಗೆ ಪಡೆದಿದ್ದಾರೆ. ಇನ್ನ ಟಿ20ಐ ನಲ್ಲಿ 60 ಪಂದ್ಯಗಳಿಂದ 70 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಐಪಿಎಲ್ ನಲ್ಲಿ ಮುಂಬೈ ಪರ ಆಡುತ್ತಿದ್ದಾರೆ.
ಅಪ್ಪಿತಪ್ಪಿಯೂ ಶುಕ್ರವಾರದಂದು ಈ ಕೆಲಸ ಮಾಡಬೇಡಿ..! ಶ್ರೀಮಂತನು ಕೂಡ ಬಡವನಾಗುತ್ತಾನೆ
ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಬುಮ್ರಾ ಕ್ರಿಕೆಟಿಗನಾಗುವ ಕನಸನ್ನು ನನಸಾಗಿಸುವುದು ಅಷ್ಟು ಸುಲಭವಾಗಿರಲಿಲ್ಲ. ಇದನ್ನು ಸಾಕಾರಗೊಳಿಸುವಲ್ಲಿ ಅವರ ತಾಯಿ ದಿಲ್ಜಿತ್ ಬುಮ್ರಾ ಅವರ ದೊಡ್ಡ ಕೈ ಇದೆ.. ಬುಮ್ರಾ ಮತ್ತು ಅವರ ಅಕ್ಕನನ್ನು ಬೆಳೆಸಿದ್ದು ತಾಯಿ. ಅಹಮದಾಬಾದ್ನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಕ್ರಿಕೆಟಿಗನಾಗುವ ಬುಮ್ರಾ ಕನಸನ್ನು ನನಸು ಮಾಡುವಷ್ಟು ಆದಾಯವಿರಲಿಲ್ಲ.
ಇಂದು ಕೋಟಿಗಟ್ಟಲೆ ಸಂಬಳ ಪಡೆಯುವ ಈ ಬೌಲರ್ ಆರಂಭದಲ್ಲಿ ಕೇವಲ ಜೊತೆ ಟಿ-ಶರ್ಟ್, ಬೂಟುಗಳಲ್ಲೇ ಜೀವನ ಸಾಗಿಸಿದ್ದಾರೆ. ಬುಮ್ರಾ 2013ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ನಂತರ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತದ ಪ್ರಮುಖ ಬೌಲರ್ ಆದರು. ಮಾಧ್ಯಮ ವರದಿಗಳ ಪ್ರಕಾರ, ಈ ವರ್ಷ ಅವರ ನಿವ್ವಳ ಮೌಲ್ಯ ಸುಮಾರು 70 ಕೋಟಿ. ಅವರ ಗಳಿಕೆಯ ಪ್ರಮುಖ ಭಾಗವು ಪಂದ್ಯ ಶುಲ್ಕ, BCCI ಕೇಂದ್ರ ಒಪ್ಪಂದಗಳು ಮತ್ತು IPL ಶುಲ್ಕಗಳಿಂದ ಬರುತ್ತದೆ. ಇದಲ್ಲದೇ ಬ್ರಾಂಡ್ ಎಂಡಾರ್ಸ್ಮೆಂಟ್ನಿಂದ ಆದಾಯವೂ ಇದೆ.