ಆರ್ಸಿಬಿಯಿಂದ ಸ್ಟಾರ್ ಆಟಗಾರನಿಗೆ ಕೊಕ್ ನೀಡಲಾಗಿದ್ದು, ತನ್ನನ್ನು ಕೈ ಬಿಟ್ಟ ಬಗ್ಗೆ ಮ್ಯಾಕ್ಸ್ ವೆಲ್ ಕೊನೆಗೂ ಮೌನಮುರಿದಿದ್ದಾರೆ.
ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ರೀಟೈನ್ ಲಿಸ್ಟ್ ರಿಲೀಸ್ ಮಾಡಿದೆ. ಆರ್ಸಿಬಿ ಟೀಮ್ ಮೊದಲು ರೀಟೈನ್ ಮಾಡಿಕೊಂಡಿದ್ದು ವಿರಾಟ್ ಕೊಹ್ಲಿ. 2ನೇ ಆಯ್ಕೆ ರಜತ್ ಪಾಟಿದಾರ್ ಮತ್ತು 3ನೇ ಆಯ್ಕೆಯಾಗಿ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ.
ಆರ್ಸಿಬಿ ತಂಡ ವಿರಾಟ್ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್ ಪಾಟಿದಾರ್ ಅವರಿಗೆ 11 ಕೋಟಿ ಮತ್ತು ಯಶ್ ದಯಾಳ್ ಅವರಿಗೆ 5 ಕೋಟಿ ನೀಡಿ ರೀಟೈನ್ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ. ಆರ್ಸಿಬಿ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಗೇಟ್ಪಾಸ್ ನೀಡಿದೆ. ಈ ಬಗ್ಗೆ ಮ್ಯಾಕ್ಸಿ ಮಾತಾಡಿದ್ದಾರೆ.
ಆರ್ಸಿಬಿಯಿಂದ ನನ್ನ ಕೈ ಬಿಡುವ ಬಗ್ಗೆ ಹೆಡ್ ಕೋಚ್ ಆ್ಯಂಡಿ ಫ್ಲವರ್ ಮತ್ತು ಡೈರೆಕ್ಟರ್ ಬೊಂಬಾಟ್ ಮಾಹಿತಿ ನೀಡಿದ್ರು. ಏನಕ್ಕೆ ರೀಟೈನ್ ಮಾಡಿಕೊಳ್ಳುತ್ತಿಲ್ಲ ಅನ್ನೋದು ಬಿಡಿಸಿ ಹೇಳಿದ್ರು. ಆರ್ಸಿಬಿ ಜತೆಗೆ ನನ್ನ ಜರ್ನಿ ಅದ್ಭುತವಾಗಿತ್ತು. ನನ್ನ ಮತ್ತು ಆರ್ಸಿಬಿ ಜರ್ನಿ ಮುಗಿದಿದೆ ಎಂದು ನಾನು ಹೇಳಲ್ಲ ಎಂದು ಮ್ಯಾಕ್ಸ್ವೆಲ್ ಹೇಳಿದ್ದಾರೆ.