ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿ ಘೋಡಕೆ ಪ್ಲಾಟ್ ನಲ್ಲಿ ಇಬ್ಬರಿಗೆ ಮಾರಕಾಸ್ತ್ರದಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವ ಇಂದು ಸಾವನ್ನಪ್ಪಿದ್ದಾನೆ. ಸಮೀರ್ ಶೇಖ್ (18) ಎಂಬಾತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಸೋಮವಾರ ರಾತ್ರಿ ಮುಜಾಮೀಲ್ ಎಂಬಾತ ಆನಂದನಗರದ ಘೋಡಕೆ ಪ್ಲಾಟ್ ನಲ್ಲಿ ಸಮೀರ್ ಶೇಖ್ (18) ಹಾಗೂ ಸಮೀರ್ ಚಿಕ್ಕಪ್ಪ ಜಾವೇದ್ ಶೇಖ್ (32) ಇವರಿಗೆ ಮಾರಕಾಸ್ತ್ರದಿಂದ ಇರಿಯಲಾಗಿತ್ತು.
SIM Card New Rules: ಹೊಸ ಸಿಮ್ ಖರೀದಿಸೋ ಪ್ಲಾನ್ʼನಲ್ಲಿದ್ದೀರಾ..? ಹಾಗಿದ್ರೆ ಈ ರೂಲ್ಸ್ ತಿಳಿಯಲೇಬೇಕು
ಗಂಭೀರವಾಗಿ ಗಾಯಗೊಂಡಿದ್ದ ಸಮೀರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಕುರಿತಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.