ಹುಬ್ಬಳ್ಳಿ: ಮಾಜಿ ಸಚಿವ ಎಸ್.ಟಿ.ಸೋಮಶೇಖರ ಅವರು ಅತಂತ್ರ ಆಗಿದ್ದಾರೆ. ಕಾಂಗ್ರೆಸ್ ನಲ್ಲೂ ಇಲ್ಲಾ, ಬಿಜೆಪಿಯಲ್ಲಿ ಇದ್ದು ಇಲ್ಲದಂತಾಗಿದ್ದಾರೆ. ಯಾರಾದರೂ ಮುಳುಗುವ ಹಡಗಿನಲ್ಲಿ ಕೂಡಲು ಬಯಸುತ್ತಾರೆಯೇ ಎಂದು ಸಂಸದ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದರು.
ಕೋಲಾರ: ಶ್ರೀನಿವಾಸಪುರದಲ್ಲಿ ಹುಚ್ಚು ನಾಯಿ ದಾಳಿ- 10 ಕ್ಕೂ ಹೆಚ್ಚು ಜನರಿಗೆ ಗಾಯ!
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಶೇಖರ ಅತಂತ್ರರಾಗಿರುವ ಕಾರಕ್ಕಾಗಿಯೇ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಇಂತಹವರ ಹೇಳಿಕೆಗಳಿಂದ ಬಿಜೆಪಿ ಪಕ್ಷಕ್ಕೆ ಯಾವ ಹಾನಿ ಆಗುವುದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತಹ ಮುಂದಾಳತ್ವದಲ್ಲಿ ದೇಶ ಮುನ್ನಡೆಯುತ್ತಿದೆ. ದೇಶದಲ್ಲಿ ಸುಮಾರು 20 ರಾಜ್ಯಗಳಲ್ಲಿ ಬಿಜೆಪಿ ಪಕ್ಷವಿದೆ ಎಂದರು.
ಕಾಂಗ್ರೆಸ್ ಉಳಿಯುವುದಿಲ್ಲ: ರಾಜ್ಯದ ಉಪ ಚುನಾವಣೆ ನಂತರ ಮಹಾರಾಷ್ಟ್ರ ಚುನಾವಣೆ ನಡೆಯಲಿದೆ. ಈ ಚುನಾವಣೆ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ. ರಾಜ್ಯದಲ್ಲಿ ಅಭಿವೃದ್ಧಿಗೆ ಹಣವಿಲ್ಲದೆ ಕಾಂಗ್ರೆಸ್ ಶಾಸಕರು ಅಳುತ್ತಿದ್ದಾರೆ ಎಂದರು.