ಗದಗ: ಇಂದು 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ರಾಜ್ಯಾದ್ಯಂತ 8 ಲಕ್ಷ 69 ಸಾವಿರದ 968 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸದ್ಯ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಣೆ ಮಾಡಿದೆ.
ಎಂದಿನಂತೆ ಈ ಬಾರಿಯೂ ಕೂಡ ಹೆಣ್ಣುಮಕ್ಕಳೇ ರಿಸಲ್ಟ್ನಲ್ಲಿ ಮೇಲುಗೈ ಸಾಧಿಸಿದ್ದಾರೆ. ಕಳೆದ ವರ್ಷ 25 ನೇ ಸ್ಥಾನ ಪಡೆದಿದ್ದ ಗದಗ ಜಿಲ್ಲೆ ಈ ಬಾರಿ 17 ನೇ ಸ್ಥಾನ ಪಡೆದಿದೆ. ಒಟ್ಟು 15545 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ರು. ಅದರಲ್ಲಿ 11621 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 74.76 ರಷ್ಟು ಫಲಿತಾಂಶ ಬಂದಿದೆ.