ಬೆಂಗಳೂರು: ವಿದ್ಯಾರ್ಥಿಗಳ ಜೀವನದ ಬಹು ಮುಖ್ಯ ಘಟ್ಟ SSLC ಪರೀಕ್ಷೆ – 1 ಇಂದಿನಿಂದ ರಾಜ್ಯದಾದ್ಯಂತ ಆರಂಭಗೊಂಡಿದ್ದು ವಿದ್ಯಾರ್ಥಿಗಳೆಲ್ಲರೂ ಮೊದಲ ದಿನದ ಪರೀಕ್ಷೆ ಹೇಗೆ ಬರೆದ್ರು, ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಫೀವರ್ ಹೇಗಿತ್ತು ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ..
ವಿದ್ಯಾರ್ಥಿ ಜೀವನದ ಬಹು ಮುಖ್ಯ ಘಟ್ಟವಾದ ಎಸ್ಎಸ್ಎಲ್ಸಿ ಪರೀಕ್ಷೆ ಇಂದಿನಿಂದ ಆರಂಭವಾಗಿದೆ. ಒಂದೆಡೆ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸ್ವಲ್ಪ ಆತಂಕವಾಗಿ ಪರೀಕ್ಷೆ ಕೇಂದ್ರ ಬಳಿ ನಿಂತಿದ್ರೆ, ಇನ್ನೊಂದೆಡೆ ಪರೀಕ್ಷೆ ಬರೆಯಲು ಕೊನೆ ಹಂತದ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿಗಳು, ಮತ್ತೊಂದೆಡೆ ವಿದ್ಯಾರ್ಥಿಗಳಿಗೆ ಡೌಟ್ ಕ್ಲಿಯರ್ ಮಾಡುತ್ತಿದ್ದ ಟೀಚರ್ಸ್ ಇವೆಲ್ಲಾ ಕಂಡುಬಂದಿದ್ದು, ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರದ ಮುಂದೆ.
Ration Card News Update: ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ
ಹೌದು… ರಾಜಾದ್ಯಂತ ಇಂದು ಪರೀಕ್ಷೆ ಫೀವರ್ ಜೋರಾಗಿತ್ತು. ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದ್ದು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಆಗಮಿಸಿ ಪರೀಕ್ಷೆ ಬರೆಯಲು ಕೊನೆಯ ಹಂತದ ಸಿದ್ದತೆ ನಡೆಸಿದ್ರು. ಪರೀಕ್ಷಾ ಕೇಂದ್ರಗಳ ಬಳಿ ಕಟ್ಟೆಚ್ಚರವಹಿಸಲಾಗಿತ್ತು. ರಾಜ್ಯದಾದ್ಯಂತ 8,69,968 ವಿದ್ಯಾರ್ಥಿಗಳಿಂದ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, 2750 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು.
ಇನ್ನೂ… ಮೊದಲ ದಿನ ಮಾತೃ ಭಾಷೆ ಪರೀಕ್ಷೆ ಆಗಿದ್ದರಿಂದ ವಿದ್ಯಾರ್ಥಿಗಳು ಕೊಂಚ ನಿರಾಳವಾಗಿದ್ರು. ಯಶಸ್ವಿಯಾಗಿ ಪರೀಕ್ಷೆ ಮುಗಿಸಿ ಬಂದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬರೆದು ಉತ್ತರ ಸರಿಯಿದೆಯಾ ಎಂದು ಪುಸ್ತಕ ಕೆದುಕುವುದರಲ್ಲಿ ಬ್ಯೂಸಿ ಆಗಿದ್ರೆ..ಮತ್ತೊಂದು ಕಡೆ ಸರಿ ಉತ್ತರ ಬರೆದ ಮಕ್ಕಳ ಖುಷಿಗೆ ಪಾರಾವೇ ಇಲ್ಲದಂತಾಗಿತ್ತು.
ಇನ್ನೂ… ಪರೀಕ್ಷೆ 10:30ಕ್ಕೆ ಶುರುವಾಗಿ 1:30ಕ್ಕೆ ಮುಗಿಯಿತು. ಪರೀಕ್ಷೆ ಮಧ್ಯಾಹ್ನದ ಅವಧಿಯಲ್ಲಿ ಮುಗಿದ ಕಾರಣ ಮಕ್ಕಳು ಹಸಿವಿನಿಂದ ಮನೆಗೆ ಹೋಗುತ್ತಾರೆ ಎಂಬ ಕಾರಣದಿಂದ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಮಾಡಲಾಗಿತ್ತು. ಇನ್ನೂ… ಪರೀಕ್ಷೆ ಬರೆದು ಸುಸ್ತಾಗಿದ್ದ ವಿದ್ಯಾರ್ಥಿಗಳು ಅನ್ನ ಸಾಂಬರ್ ಹಾಗೂ ಪಲಾವ್ ತಿಂದು ಖುಷಿ ಪಟ್ಟರು.
ಒಟ್ನಲ್ಲಿ ಇಂದು ಎಸ್ಎಸ್ಎಲ್ಸಿ ಪರೀಕ್ಷೆ ಯಾವುದೇ ಆತಂಕವಿಲ್ಲದೇ ಯಶಸ್ವಿಯಾಗಿ ನಡೆದಿದ್ದು, ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿಸಿದಂತೂ ನಿಜ.