ಬೆಂಗಳೂರು: ಬಿಜೆಪಿ ಹೈಕಮಾಂಡ್ ಒಂದು ಬಾರಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ರೆ ಅದಕ್ಕೆ ಎಲ್ಲರೂ ಒಪ್ಪಬೇಕು ಅಂತ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅಸಾಮಾಧಾನಕ್ಕೆ ಮಾಜಿ ಸಚಿವ ಶ್ರೀರಾಮುಲು(Sriramulu) ತಿರುಗೇಟು ನೀಡಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನ ಮತ್ತು ವಿಪಕ್ಷ ಸ್ಥಾನ ಸಿಗದ ಹಿನ್ನೆಲೆ ಯತ್ನಾಳ್ ಬಹಿರಂಗ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಒಂದು ಬಾರಿ ರಾಜ್ಯಾಧ್ಯಕ್ಷರಾಗಿ ಘೋಷಣೆ ಮಾಡಿದ ನಂತರ ಮುಗೀತು. ಯತ್ನಾಳ್ ಅವರು ಹಿರಿಯ ನಾಯಕ. ಒಂದು ಬಾರಿ ಪಾರ್ಟಿ ನಿರ್ಧಾರ ಮಾಡಿದ ಮೇಲೆ ಎಲ್ಲವನ್ನು ಸರಿ ಮಾಡಿಕೊಂಡು ಹೋಗ್ತೀವಿ. ಪಕ್ಷ ಮುನ್ನಡೆಸಬೇಕು ಹೀಗಾಗಿ ಎಲ್ಲ ಸರಿ ಮಾಡಿಕೊಂಡು ಹೋಗ್ತೀವಿ ಎಂದರು.

ಅಶೋಕ್ ವಿಪಕ್ಷ ನಾಯಕ ಆಗಿ ನೇಮಕ ಆದ್ರು. ವಿಜಯೇಂದ್ರ ಕಿರಿಯರು ಒಪ್ತೀನಿ. ಆದರೆ ಹೈಕಮಾಂಡ್ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಎಲ್ಲರು ಸಹಕಾರ ಸಪೋರ್ಟ್ ಮಾಡಿದ್ರೆ ಪಕ್ಷ ಕಟ್ಟಲು ಅನುಕೂಲ ಆಗುತ್ತೆ. ಪಾರ್ಟಿ ತೀರ್ಮಾನವೇ ಅಂತಿಮ ತೀರ್ಮಾನ. ಏನೇ ಅಸಮಾಧಾನ ಇದ್ದರೂ ಸರಿ ಮಾಡಿಕೊಂಡು ಹೋಗೋ ಕೆಲಸ ಮಾಡ್ತೀವಿ ಎಂದು ಹೇಳಿದರು.

Share.