ವಿಜಯನಗರ: ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಬರೋದಿಲ್ಲಾ, ಅದು ಅದು ಊಹಾ ಪೋಹದ ಸುದ್ದಿ ಅಂತಾ ಸಚಿವ ಜಮೀರ್ ಅಹಮ್ಮದ್ ಪ್ರತಿಕ್ರಿಯಿಸಿದ್ದಾರೆ. ವಿಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ, ಶ್ರೀರಾಮುಲುದು ಒಳಜಗಳ ಅದು . ಅವರು ಕಾಂಗ್ರೆಸ್ ಗೆ ಬರೋದೇ ಇಲ್ಲಾರಿ, ಯಾಕೆ ಬರ್ತಾರೆ ಹೇಳಿ ನೋಡೋಣ . ಅವರ ಬೇಳೆ ಬೇಯಿಸಿಕೊಳ್ಳಲು ಅವರು ಏನು ಬೇಕಾದ್ರೂ ಮಾತನಾಡ್ತಾರೆ ಎಂದರು.
ಇಬ್ಬರು ಸಚಿವರ ವಿರುದ್ಧ ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅಸಮಾಧಾನ
ಇನ್ನು ಡಿಕೆಶಿಯವರು, ಜಾರಕಿಹೊಳಿ ತುಳಿಯೋಕೆ ಶ್ರೀರಾಮುಲುನ ಕರ್ಕೊಂಡು ಬರ್ತಾರೆ ಅನ್ನೋ ವಿಚಾರ ವಾಗಿ ಪ್ರತಿಕ್ರಿಯಿಸಿ, ಸತೀಶ್ ಜಾರಕಿಹೊಳಿ ನಮ್ಮ ಪಕ್ಷದ ನಾಯಕರು , ಆಥರ ಏನೇನೂ ಇಲ್ಲಾ. ನಮ್ಮದು ಹೈಕಮಾಂಡ್ ಪಕ್ಷ, ಸದ್ಯ ಸಿಎಂ ಖುರ್ಚಿನೂ ಖಾಲಿ ಇಲ್ಲಾ, ಅಧ್ಯಕ್ಷ ಸ್ಥಾನನೂ ಖಾಲಿ ಇಲ್ಲ ಎಂದು ಪುನರುಚ್ಛರಿಸಿದರು. ಸಿಎಂ ಸಿದ್ದರಾಮಯ್ಯ ಇದ್ದಾರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಡಿಕೆ. ಶಿವಕುಮಾರ್ ಇದ್ದಾರೆ . ಅದನ್ನೇನಾದ್ರೂ ಬದಲಾವಣೆ ಮಾಡಬೇಕಾದ್ರೆ, ನಮ್ಮ ಹೈ ಕಮಾಂಡ್ ಮಾಡಬೇಕು . ನಾವು ನಮ್ಮ ಅಭಿಪ್ರಾಯ ಹೇಳಬಹುದು ಅಷ್ಟೇ ಎಂದರು.