ಕನ್ನಡದ ನಟಿ ಶ್ರೀಲೀಲಾ (Sreeleela) ಹೊಸ ವರ್ಷದಲ್ಲಿ ಹೊಸ ಶಫಥ ಮಾಡಿದ್ದಾರೆ. ಇನ್ನೇನು ನನ್ನನ್ನು ಹಿಡಿಯೋರು ಯಾರೂ ಇಲ್ಲ ಎಂದು ಶ್ರೀಲೀಲಾ ಮೆರೆಯುತ್ತಿದ್ದರು. ಆದರೆ ಕಳೆದ ವರ್ಷ ಮೂರು ಸಿನಿಮಾ ಮಕಾಡೆ ಮಲಗಿತ್ತು. ಇದೇ ಕಂಟಿನ್ಯೂ ಆದರೆ ಬಣ್ಣದ ಲೋಕವೂ ದೂರ ಸರಿಸುವುದು ನಿಶ್ಚಿತ. ಅದು ಶ್ರೀಲೀಲಾ ಅರಿವಿಗೂ ಬಂದಿದೆ. ಹಾಗಾಗಿ ಹೊಸ ವರ್ಷದ ಆರಂಭದಲ್ಲೇ ಹೊಸ ಶಪಥ ಮಾಡಿದ್ದಾರೆ.
ಶ್ರೀಲೀಲಾ ಟಾಲಿವುಡ್ನ (Tollywood) ಹಾಟ್ ಬ್ಯೂಟಿ. ಒಂದೇ ಒಂದು ಸಿನಿಮಾದಿಂದ ಹತ್ತತ್ತು ಸಿನಿಮಾ ಹೊಸಿಲಿಗೆ ಬಂದು ಬಿದ್ದವು. ಬಂದಾಗಲೇ ಬಾಚಿಕೊಳ್ಳಬೇಕೆನ್ನುವ ಹಪಹಪಿಗೆ ಬಿದ್ದ ಶ್ರೀಲೀಲಾ ಈಗ 3 ಚಿತ್ರದ ಸೋಲಿನ ನಂತರ ಹೊಸ ಸಿನಿಮಾ ಒಪ್ಪಿಕೊಳ್ಳೋಕೆ ಯೋಚನೆ ಮಾಡುತ್ತಿದ್ದಾರೆ
ಅದಕ್ಕಾಗಿ ಹೊಸ ವರ್ಷದಲ್ಲಿ ಈ ಹಿಂದೆ ಒಪ್ಪಿಕೊಂಡ ಸಿನಿಮಾ ಬಿಟ್ಟು ಹೊಸ ಸಿನಿಮಾ ಒಪ್ಪಿಲ್ಲ. ಪ್ರಿನ್ಸ್ ಜೊತೆ ‘ಗುಂಟೂರು ಖಾರಂ’ ಚಿತ್ರ, ಪವನ್ಕಲ್ಯಾಣ್ ಜೊತೆ ‘ಉಸ್ತಾದ್ ಭಗತ್ ಸಿಂಗ್’ ಹಾಗೂ ವಿಜಯ್ ದೇವರಕೊಂಡ ಸಿನಿಮಾ. ಇಷ್ಟನ್ನೇ ನೆಚ್ಚಿಕೊಂಡಿದ್ದಾರೆ. ಮಹೇಶ್ ಬಾಬು (Mahesh Babu) ಜೊತೆಗಿನ ಚಿತ್ರ ಸಂಕ್ರಾಂತಿಗೆ ಬರಲಿದೆ. ಇನ್ನು ಎರಡು ಚಿತ್ರ ಅಲ್ಲಲ್ಲೇ ಮರಗಟ್ಟಿವೆ. ಮುಂದೇನು ಶ್ರೀಲೀಲಾ ಮಾಸ್ಟರ್ ಪ್ಲಾನ್ ಎಂದು ಕಾದುನೋಡಬೇಕಿದೆ.