ಕನ್ನಡದ ನಟಿ ಶ್ರೀಲೀಲಾಗೆ ಟಾಲಿವುಡ್ನಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿಯಾಗುತ್ತಿದೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಜೊತೆ ಶ್ರೀಲೀಲಾ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಪುಷ್ಪ 2’ ಚಿತ್ರದ ಸ್ಪೆಷಲ್ ಹಾಡಿನಲ್ಲಿ ಸೊಂಟ ಬಳುಕಿಸಿದ ಬಳಿಕ ನಟಿಗೆ ಅವಕಾಶಗಳು ಮತ್ತಷ್ಟು ಹೆಚ್ಚಾಗಿದೆ. ಇದೀಗ ಬಂಪರ್ ಅವಕಾಶವೊಂದು ನಟಿಯ ಪಾಲಾಗಿದೆ. ತೆಲುಗಿನ ಸ್ಟಾರ್ ನಟನ ಪುತ್ರನಿಗೆ ಶ್ರೀಲೀಲಾ ಜೋಡಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ನಾಗ ಚೈತನ್ಯಗೆ ನಾಯಕಿಯಾಗುವ ಅವಕಾಶ ಶ್ರೀಲೀಲಾಗೆ ಸಿಕ್ಕಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ಅಖಿಲ್ ಅಕ್ಕಿನೇನಿ ನಟನೆಯ ಹೊಸ ಚಿತ್ರಕ್ಕೆ ಶ್ರೀಲೀಲಾ ಹೀರೋಯಿನ್ ಆಗಿದ್ದಾರೆ ಎನ್ನಲಾಗಿದೆ. ನಟನೆಗೆ ಸ್ಕೋಪ್ ಇರುವ ಪಾತ್ರ ಇದಾಗಿದ್ದು, ಕಥೆ ವಿಭಿನ್ನವಾಗಿದೆಯಂತೆ.
ಸದ್ಯ ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ಅಕ್ಕಿನೇನಿ ಸಹೋದರರಿಗೆ ನಾಯಕಿಯಾಗ್ತಿದ್ದಾರೆ ಎಂಬ ಸುದ್ದಿ ಕೇಳಿಯೇ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.