ಗಾಲೆ: ಶ್ರೀಲಂಕಾದ ಅದ್ಭುತ ಪ್ರತಿಭೆ ಕಮಿಂಡು ಮೆಂಡಿಸ್, ಟೆಸ್ಟ್ ಕ್ರಿಕೆಟ್ನಲ್ಲಿ ದಂತಕಥೆ ಸರ್ ಡಾನ್ ಬ್ರಾಡ್ಮನ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟುವ ಮೂಲಕ ಹೊಸ ರನ್ ಮಷೀನ್ ಎನಿಸಿಕೊಂಡಿದ್ದಾರೆ.ಇದರ ನಡುವೆ ಶ್ರೀಲಂಕಾ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮತ್ತು 154 ರನ್ಗಳ ಬೃಹತ್ ಗೆಲುವು ದಾಖಲಿಸಿದೆ. ಈ ಮೂಲಕ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ 3ನೇ ಆವೃತ್ತಿಯ ಭಾಗವಾಗಿ ನಡೆದ 2 ಪಂದ್ಯಗಳ ಸರಣಿಯಲ್ಲಿ ಕ್ರೀನ್ ಸ್ವೀಪ್ ಗೆಲುವು ದಾಖಲಿಸಿದೆ.
ಇದು ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾ ತಂಡಕ್ಕೆ ನ್ಯೂಜಿಲೆಂಡ್ ಎದುರು ಸಿಕ್ಕಿರುವ ಅತಿ ದೊಡ್ಡ ಗೆಲುವಾಗಿದೆ. ಅಷ್ಟೇ ಅಲ್ಲದೆ ಕಳೆದ 15 ವರ್ಷಗಳಲ್ಲಿ ಲಭ್ಯವಾದ ಮೊದಲ ಇನಿಂಗ್ಸ್ ಜಯ ಇದಾಗಿದೆ. ಪಂದ್ಯದಲ್ಲಿ ಶ್ರೀಲಂಕಾ ಪರ ಮೊದಲ ಇನಿಂಗ್ಸ್ನಲ್ಲಿ ಅಜೇಯ 182 ರನ್ ಬಾರಿಸಿ ಮಿಂಚಿದ ಸ್ಟಾರ್ ಬ್ಯಾಟರ್ 25 ವರ್ಷದ ಕಮಿಂದು ಮೆಂಡಿಸ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಎರಡು ಪಂದ್ಯಗಳಿಂದ ಒಟ್ಟಾರೆ 18 ವಿಕೆಟ್ಗಳನ್ನು ಪಡೆದು ಮಿಂಚಿದ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.
Post Office Scheme: ಅಂಚೆ ಕಚೇರಿಯ ಈ ಯೋಜನೆಯಡಿ ಹೂಡಿಕೆ ಮಾಡಿದ್ರೆ 10 ವರ್ಷದಲ್ಲಿ ನಿಮ್ಮ ಹಣ ಡಬಲ್!
ಗಾಲೆ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡ 602/5 ರನ್ಗಳ ಬೃಹತ್ ಮೊತ್ತ ದಾಖಲಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಆತಿಥೇಯರ ಪರ ಮೊದಲ ಇನಿಂಗ್ಸ್ನಲ್ಲಿ ದಿನೇಶ್ ಚಾಂದಿಮಾಲ್ (116), ಕಮಿಂದು ಮೆಂಡಿಸ್ (182*) ಮತ್ತು ಕುಶಲ್ ಮೆಂಡಿಸ್ (106*) ಮನಮೋಹಕ ಶತಕ ಬಾರಿಸಿ ತಂಡಕ್ಕೆ ಬೃಹತ್ ಮೊತ್ತ ತಂದುಕೊಟ್ಟರು. ಹಲವು ದಾಖಲೆಗಳನ್ನು ಬರೆದ ಎಡಗೈ ಬ್ಯಾಟರ್ 25 ವರ್ಷದ ಕಮಿಂದು ಮೆಂಡಿಸ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗವಾಗಿ 1000 ರನ್ ಪೂರೈಸಿದ ಬ್ಯಾಟರ್ಗಳ ಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿದರು.