IPL ನಲ್ಲಿ 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರ್ಮಿಸಿದ್ದ ದಾಖಲೆಯನ್ನುಹೈದರಾಬಾದ್ ದೂಳಿಪಟ ಮಾಡಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸರ್ರೈಸರ್ಸ್ ಹೈದರಾಬಾದ್ ಬ್ಯಾಟರ್ಗಳು ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎಲ್ಲಾ ಮುಂಬೈ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಬೌಂಡರಿ-ಸಿಕ್ಸರ್ಗಳ ಸುರಿ ಮಳೆಯನ್ನೇ ಸುರಿಸಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಎಚ್ ನಿಗದಿತ 20 ಓವರ್ಗೆ 3 ವಿಕೆಟ್ ನಷ್ಟಕ್ಕೆ 3 ನಷ್ಟಕ್ಕೆ 277 ರನ್ ಸಿಡಿಸಿದರು
KS Eshwarappa: ನೀತಿ ಸಂಹಿತೆ ಉಲ್ಲಂಘನೆ – ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಕೇಸ್ ದಾಖಲು!
ಈ ಬೃಹತ್ ಸ್ಕೋರ್ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡ ಎಂಬ ದಾಖಲೆಯನ್ನು ನಿರ್ಮಿಸಿದೆ. ಈ ಮೂಲಕ 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರ್ಮಿಸಿದ್ದ ದಾಖಲೆಯನ್ನುಹೈದರಾಬಾದ್ ದೂಳಿಪಟ ಮಾಡಿದೆ.
ಆರ್ಸಿಬಿ ತಂಡವು ಪುಣೆ ವಾರಿಯರ್ಸ್ ವಿರುದ್ಧ 2013ರಲ್ಲಿ 263 ರನ್ ಸಿಡಿಸಿದ್ದು ಐಪಿಎಲ್ ಇತಿಹಾಸದಲ್ಲಿಯೇ ಅತಿ ದೊಡ್ಡ ಸ್ಕೋರ್ ಆಗಿತ್ತು. ಅಂದು ಆರ್ಸಿಬಿ ಪರ ಕ್ರಿಸ್ ಗೇಲ್ ಬರೋಬ್ಬರಿ 175 ರನ್ ಸಿಡಿಸಿದ್ದರು. ಇದು ಇತಿಹಾಸ ನಿರ್ಮಿಸಿದ ಪಂದ್ಯವಾಗಿತ್ತು. ಆದರೆ ಇಂದು ಮುಂಬೈ ವಿರುದ್ಧ ಹೈದರಾಬಾದ್ ದಾಖಲೆ ಮುರಿದಿದೆ.
ಮುಂಬೈ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ಬ್ಯಾಟರ್ಗಳು ಅಬ್ಬರಿಸುವ ಮೂಲಕ 20 ಓವರ್ಗೆ ಕೇವಲ 3 ವಿಕೆಟ್ ನಷ್ಟಕ್ಕೆ 277 ರನ್ ಸಿಡಿಸುವ ಮೂಲಕ ಆರ್ಸಿಬಿ ತಂಡದ 263 ರನ್ ದಾಖಲೆಯನ್ನು ದೂಳಿಪಟ ಮಾಡಿದೆ.