ರಾಗಿಯಲ್ಲಿರುವ ಆರೋಗ್ಯದ ಉಪಯೋಗಗಳು ಹಲವಾರು . ಇದರ ಬಗ್ಗೆ ತಿಳಿಯದವರಿಲ್ಲ ಎಂದೇ ಹೇಳಬಹುದು. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುವುದು, ದೇಹದ ತೂಕ ಕಡಿಮೆ ಮಾಡಲು , ಹೃದಯದ ಆರೋಗ್ಯವನ್ನು ವೃದ್ದಿಸುವುದು ಸೇರಿದಂತೆ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ರಾಗಿಯು ನೀಡುತ್ತದೆ.
Norway Chess Tournament: ವಿಶ್ವದ ನಂ.1 ಚೆಸ್ ಮಾಸ್ಟರ್ ವಿರುದ್ಧ ಗೆದ್ದು ಬೀಗಿದ ಆರ್. ಪ್ರಜ್ಞಾನಂದ..!
ರಾಗಿಯನ್ನು ಮೊಳಕೆ ಕಟ್ಟಿ ಸೇವಿಸುವುದರಿಂದ ಅದು ಮತ್ತಷ್ಟು ಆರೋಗ್ಯಕ್ಕೆ ಪ್ರಯೋಜನವನ್ನುಂಟು ಮಾಡುತ್ತದೆ. ಮೂಳೆ ಮತ್ತು ಮೆದುಳಿನ ಬೆಳವಣಿಗೆಯಲ್ಲಿಯೂ ರಾಗಿಯು ಪಾತ್ರವಹಿಸುವುದಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾರೇ ಆಗಲಿ ರಾಗಿಯನ್ನು ತಮ್ಮ ಡಯೆಟ್ ನಲ್ಲಿ ಸೇರಿಸಿಕೊಂಡಿದ್ದಾರೆ ಎಂದಾದಲ್ಲಿ ಅವರು ಉತ್ತಮ ಪೋಷಕಾಂಶಗಳನ್ನು ಪಡೆಯುತ್ತಿದ್ದಾರೆ ಎಂದು ಅರ್ಥ.
ರಾಗಿಯು ಸಾಕಷ್ಟು ಪೌಷ್ಟಿಕಾಂ ಶತೆಯನ್ನು ಹೊಂದಿದ್ದು, ಫಿಟ್ನೆಸ್ ಪ್ರಿಯರಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ. ಇದರಲ್ಲಿ ಫೈಬರ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್ಗಳು ಮತ್ತು ವಿಟಮಿನ್ಗಳಂತಹ ಅಗತ್ಯ ಪೋಷಕಾಂಶಗಳು ಹೇರಳವಾಗಿ ತುಂಬಿರುವುದರಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ನೀಡುತ್ತದೆ.
ಅದರಲ್ಲೂ ಬೇಸಿಗೆಯಲ್ಲಂತೂ ರಾಗಿ ಸೇವನೆಯು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿಸುತ್ತದೆ. ಇದರ ತಂಪಾಗಿಸುವ ಗುಣವು ಬೇಸಿಗೆಯ ತಾಪದಿಂದ ದೇಹವನ್ನು ತಂಪಾಗಿಸುತ್ತದೆ. ಅಲ್ಲದೆ ,ಇದರ ಸೇವನೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುವುದರಿಂದ ಮಧುಮೇಹಿಗಳಿಗೂ ಇದು ಪ್ರಯೋಜನಕಾರಿ ಆಹಾರವೆನ್ನಬಹುದಾಗಿದೆ.
ಬೇಸಿಗೆಯಲ್ಲಿ ಜೀರ್ಣಾಂಗ ವ್ಯವಸ್ಥೆಯು ನಿಧಾನವಾಗಬಹುದು ಇದರಿಂದಾಗಿ ಗ್ಯಾಸ್, ಅಸಿಡಿಟಿ ಮತ್ತು ಹೊಟ್ಟೆ ನೋವುಗಳಂಗಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕರಿದ ಆಹಾರ ಪದಾರ್ಥಗಳನ್ನು ಅಥವಾ ಭಾರಿ ಆಹಾರಗಳನ್ನು ಸೇವಿಸುವುದರಿಂದಲೂ ಕೂಡ ಈ ಗ್ಯಾಸ್ ,ಅಸಿಡಿಟಿ ಮತ್ತು ಹೊಟ್ಟೆನೋವುಗಳು ಕಾಣಿಸಿಕೊಳ್ಳಬಹುದು.
ಅದಕ್ಕಾಗಿ ನಿಮ್ಮ ಬೆಳಗಿನ ಉಪಹಾರದಲ್ಲಿ ಮೊಳಕೆಯೊಡೆದ ರಾಗಿಯನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ ಅಜೀರ್ಣದಂತ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಮೊಳಕೆ ಬರಿಸಿದ ರಾಗಿಯಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು, ಜೀರ್ಣಕ್ರಿಯೆಯನ್ನು ಉತ್ತೇಜಿಸುವಲ್ಲಿ ಮತ್ತು ಸಾಮಾನ್ಯವಾದ ಜೀರ್ಣಾಂಗವ್ಯೂಹದ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಸಹಾಯಮಾಡುತ್ತದೆ.
ಮೊಳಕೆಯೊಡೆದ ರಾಗಿಯು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದ್ದು, ಕೊಲೆಸ್ಟ್ರಾಲ್ ಮಟ್ಟ ಹೆಚ್ಚು ಇದ್ದವರಿಗೆ ಇದೊಂದು ಉತ್ತಮವಾದ ಆಹಾರದ ಆಯ್ಕೆ ಎಂದೇ ಹೇಳಬಹುದು. , ಯಕೃತ್ತಿನ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುವಂತಹ ಅಮೈನೋ ಆಮ್ಲವು ಮೊಳಕೆಯೊಡೆದ ರಾಗಿಯಲ್ಲಿ ಸಮೃದ್ದವಾಗಿರುವುದರಿಂದ ಇದರ ನಿಯಮಿತ ಸೇವನೆಯು ಈ ಸಮಸ್ಯೆಳನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಬಹುದು.
ಮೊಳಕೆಯೊಡೆದ ರಾಗಿಯನ್ನು ಬೇಸಿಗೆಯಲ್ಲಿ ಸೇವಿಸುವುದರ ಅತ್ಯಂತ ಮಹತ್ತರವಾದ ಪ್ರಯೋಜನವೇನೇಂದರೆ, ಇದು ರಕ್ತಹೀನತೆಯನ್ನು ನಿವಾರಿಸುವಲ್ಲಿ ಅತ್ಯಂತ ಹೆಚ್ಚಿನ ಪಾತ್ರವಹಿಸುತ್ತದೆ. ರಾಗಿಯಲ್ಲಿ ಕಬ್ಬಿಣಾಂಶ ಸಮೃದ್ದವಾಗಿದ್ದು, ಇದು ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಮೊಳಕೆಯೊಡೆದ ರಾಗಿಯನ್ನು ಆಹಾರದಲ್ಲಿ ಸೇರಿಸುವುದರಿಂದ ಇದು ರಕ್ತ ಹೆಚ್ಚಾಗುವಲ್ಲಿ ಸಹಾಯ ಮಾಡುತ್ತದೆ.
ಮೊಳಕೆಯೊಡೆದ ರಾಗಿಯು ಮಧುಮೇಹವಿರುವ ರೋಗಿಗಳಿಗೆ ಒಂದು ವರದಾನವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಲಿಫಿನಾಲ್ ಗಳು ಮತ್ತು ಆಹಾರಕ್ಕೆ ಉತ್ತಮವಾದ ಫೈಬರ್ ಅಂಶವನ್ನು ಹೊಂದಿದೆ . ಆದ್ದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ರಾಗಿಯಲ್ಲಿರುವ ಫೈಬರ್ ಅಥವಾ ನಾರಿನಾಂಶವು ರಕ್ತವು ಸಕ್ಕರೆಯನ್ನು ಹೀರಿಕೊಳ್ಳುವುದನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತದಲ್ಲಿನ ಹೆಚ್ಚಿನ ಸಕ್ಕರೆಯ ಮಟ್ಟವನ್ನು ತಡೆಯುತ್ತದೆ.
ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಸ್ಥಿರತೆಯನ್ನು ಕಾಪಾಡುವಲ್ಲಿ ಸಹಾಯಮಾಡುತ್ತದೆ. ಈ ಎಲ್ಲಾ ಕಾರಣಗಳಿಂದ ರಾಗಿಯನ್ನು ಮಧುಮೇಹಿಗಳು ತಮ್ಮ ಆಹಾರದಲ್ಲಿ ಸೇರಿಸಿಕೊಂಡಲ್ಲಿ ತಮ್ಮ ಮಧುಮೇಹದ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಹೆಚ್ಚು ಫಲಕಾರಿಯಾಗಬಲ್ಲದು.
ಮೊಳಕೆಯೊಡೆದ ರಾಗಿಯ ಆಹಾರದಲ್ಲಿ ಫೈಬರ್ ಅಂಶವು ಹೇರಳವಾಗಿರುತ್ತದೆ. ಇದು ತೂಕವನ್ನು ನಿರ್ವಹಣೆ ಮಾಡಲು ಅತ್ಯಂತ ಸಹಾಯಕವಾದ ಆಹಾರವಾಗಿದೆ. ಈ ಆಹಾರವನ್ನು ಸೇವಿಸುವುದರಿಂದ ಇದರಲ್ಲಿರುವ ಫೈಬರ್ ಅಂಶದಿಂದಾಗಿ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಹಾಗೂ ಅದರಿಂದ ಅತಿಯಾಗಿ ತಿನ್ನುವ ಸಾಧ್ಯತೆಯನ್ನು ಇದು ಕಡಿಮೆ ಮಾಡುತ್ತಾ ಹೆಚ್ಚಿನ ಕ್ಯಾಲೊರಿ ಸೇವನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಮೊಳಕೆಯೊಡೆದ ರಾಗಿಯನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಸರಳವಾಗಿದೆ. ನೀವು ಇದನ್ನು ಸಲಾಡ್ಗಳು, ನಯವಾಗಿ ರುಬ್ಬಿ ಪಾನೀಯವನ್ನಾಗಿ ಮಾಡಬಹುದು ಅಥವಾ ವಿವಿಧ ಉಪಹಾರ ಭಕ್ಷ್ಯಗಳಿಗೆ ಆಧಾರವಾಗಿ ಬಳಸಬಹುದು.