ಟೀಮ್ ಇಂಡಿಯಾದ ಸ್ಪಿನ್ನರ್ ಅಶ್ವಿನ್ ಸ್ಥಾನಕ್ಕೆ ಗಂಡಾಂತರ ಬಂದಿದ್ದು, BCCI ಹೊಸ ಉತ್ತರಾಧಿಕಾರಿ ಹುಡುಕಿಕೊಂಡಿದೆ.
ರವಿಚಂದ್ರನ್ ಅಶ್ವಿನ್ ಅವರು 2010 ರಲ್ಲಿ ಪಾದಾರ್ಪಣೆ ಮಾಡಿದ ಸಮಯದಿಂದ ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಹೆಚ್ಚಿನ ಅಂತರರಾಷ್ಟ್ರೀಯ ವಿಕೆಟ್ಗಳಲ್ಲಿ ಅನಿಲ್ ಕುಂಬ್ಳೆ ನಂತರ ಎರಡನೇ ಸ್ಥಾನದಲ್ಲಿದ್ದಾರೆ.
BBK11: ಗೆಳೆಯ, ಗೆಳೆತನ ಇಲ್ಲಿಗೆ ಕಟ್: ಮಂಜುಗೆ ಮುಖಕ್ಕೆ ಹೊಡೆದ ಹಾಗೆ ಹೇಳಿದ ಗೌತಮಿ!
ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಅದ್ಭುತ ಸಾಧನೆ ಮಾಡಿದ ಆಟಗಾರ ರವಿಚಂದ್ರನ್ ಅಶ್ವಿನ್. ಟೀಮ್ ಇಂಡಿಯಾ ಪರ ಗರಿಷ್ಟ ವಿಕೆಟ್ ಪಡೆದಿರುವ 2ನೇ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಪ್ರಸಕ್ತ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಬೆಂಚ್ ಕಾಯ್ತಿರುವ 38 ವರ್ಷದ ಅಶ್ವಿನ್ಗೆ ಇವತ್ತಿನ ಪಂದ್ಯದಲ್ಲೂ ಚಾನ್ಸ್ ಸಿಗದಿದ್ರೆ, ಇದೇ ಕೊನೆ ಸಿರೀಸಾದ್ರೂ ಅಚ್ಚರಿ ಇಲ್ಲ. ಆಫ್ ಸ್ಪಿನ್ನರ್ ಆಗಿ ತಂಡಕ್ಕೆ ಮರು ಎಂಟ್ರಿ ನೀಡಿರುವ ವಾಷಿಗ್ಟಂನ್ ಸುಂದರ್, ತವರಿನ ನ್ಯೂಜಿಲೆಂಡ್ ಟೆಸ್ಟ್ ಸರಣಿಯಲ್ಲಿ ಮ್ಯಾಜಿಕ್ ಮಾಡಿದ್ರು.
ಎಸ್, ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಕಾವು ದಿನೇ ದಿನೆ ಹೆಚ್ಚಾಗ್ತಿದೆ. ಒಂದೆಡೆ ಸರಣಿಯ ಕಾವು ಹೆಚ್ಚಾಗ್ತಿದ್ರೆ ಇನ್ನೊಂದೆಡೆ ಟೀಮ್ ಇಂಡಿಯಾದಲ್ಲಿ ಆರ್.ಅಶ್ವಿನ್ರ ಭವಿಷ್ಯದ ಪ್ರಶ್ನೆ ಮುನ್ನಲೆಗೆ ಬಂದಿದೆ. ಆಸ್ಟ್ರೇಲಿಯಾ ಸರಣಿ ಬಳಿಕ ಇವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ದಟ್ಟವಾಗಿದೆ.
ಈ ಹಿಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಕಮಾಲ್ ಮಾಡಿದ್ದ ಸುಂದರ್, ಪ್ರಸಕ್ತ ಬಾರ್ಡರ್ ಗವಾಸ್ಕರ್ ಸರಣಿಯ ಪರ್ತ್ ಟೆಸ್ಟ್ನಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಲ್ಲ ಸುಂದರ್, ಆರ್.ಅಶ್ವಿನ್ಗೆ ಸೂಕ್ತ ಉತ್ತರಾಧಿಕಾರಿ ಅಂತಾನೇ ಬಿಂಬಿಸಲಾಗ್ತಿದೆ