ಹುಬ್ಬಳ್ಳಿ:ಮುಂಬರುವ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಹುಬ್ಬಳ್ಳಿ-ಎಸ್ಎಂವಿಟಿ ಬೆಂಗಳೂರು ಮತ್ತು ವಾಸ್ಕೋ ಡ ಗಾಮಾ-ಎಸ್ಎಂವಿಟಿ ಬೆಂಗಳೂರು ನಿಲ್ದಾಣಗಳ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ನೈಋತ್ಯ ರೈಲ್ವೆ ಓಡಿಸಲಿದೆ ಎಂದು ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.
ಬಾಯಿ ಹುಣ್ಣಿನ ಸಮಸ್ಯೆಯೇ? ಹಾಗಿದ್ರೆ ಡೋಂಟ್ ವರಿ ಈ ಟಿಪ್ಸ್ ಫಾಲೋ ಮಾಡಿ!
1. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಒನ್-ವೇ ಎಕ್ಸ್ ಪ್ರೆಸ್ ವಿಶೇಷ ರೈಲು:
ಈ ರೈಲು (07305) ಡಿಸೆಂಬರ್ 20, 2024 ರಂದು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಬೆಳಿಗ್ಗೆ 8 ಗಂಟೆಗೆ ಹೊರಟು, ಅದೇ ದಿನ ಎಸ್ಎಂವಿಟಿ ಬೆಂಗಳೂರಿಗೆ ಸಂಜೆ 4:15 ಕ್ಕೆ ತಲುಪಲಿದೆ. ಈ ರೈಲು ದಾವಣಗೆರೆ, ಬೀರೂರು, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
2. ಎಸ್ಎಂವಿಟಿ ಬೆಂಗಳೂರು-ವಾಸ್ಕೋ-ಡ-ಗಾಮಾ ನಡುವೆ ಎರಡು ಟ್ರಿಪ್ ವಿಶೇಷ (07306/07307) ರೈಲು ಸಂಚಾರ.
ರೈಲು ಸಂಖ್ಯೆ 07306 ಎಸ್ಎಂವಿಟಿ ಬೆಂಗಳೂರು-ವಾಸ್ಕೋ ಡ ಗಾಮಾ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 20 ಮತ್ತು 22, 2024 ರಂದು ಎಸ್ಎಂವಿಟಿ ಬೆಂಗಳೂರಿನಿಂದ ಸಂಜೆ 6:15ಕ್ಕೆ ಹೊರಟು, ಮರುದಿನ ವಾಸ್ಕೋ ಡ ಗಾಮಾ ನಿಲ್ದಾಣವನ್ನು ಬೆಳಿಗ್ಗೆ 8:45ಕ್ಕೆ ತಲುಪಲಿದೆ.
ಮರಳಿ ಇದೆ ರೈಲು (07307) ಡಿಸೆಂಬರ್ 21 ಮತ್ತು 23, 2024 ರಂದು ವಾಸ್ಕೋ ಡ ಗಾಮಾ ನಿಲ್ದಾಣದಿಂದ ಬೆಳಿಗ್ಗೆ 10 ಗಂಟೆಗೆ ಹೊರಟು, ಅದೇ ದಿನ ರಾತ್ರಿ 11:55ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
3. ಎಸ್ಎಂವಿಟಿ ಬೆಂಗಳೂರು-ವಾಸ್ಕೋ-ಡ-ಗಾಮಾ ನಡುವೆ ಒಂದು ಟ್ರಿಪ್ ವಿಶೇಷ (07308/07309) ರೈಲು ಸಂಚಾರ.
ರೈಲು ಸಂಖ್ಯೆ 07308 ಎಸ್ಎಂವಿಟಿ ಬೆಂಗಳೂರು-ವಾಸ್ಕೋ ಡ ಗಾಮಾ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 24, 2024 ರಂದು ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 8:30ಕ್ಕೆ ಹೊರಟು, ಮರುದಿನ ಮಧ್ಯಾಹ್ನ 12:00 ಗಂಟೆಗೆ ವಾಸ್ಕೋ ಡ ಗಾಮಾ ನಿಲ್ದಾಣವನ್ನು ತಲುಪಲಿದೆ.
ವಾಪಸು, ರೈಲು ಸಂಖ್ಯೆ 07309 ವಾಸ್ಕೋ ಡ ಗಾಮಾ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 29, 2024 ರಂದು ವಾಸ್ಕೋ ಡ ಗಾಮಾದಿಂದ ಮಧ್ಯಾಹ್ನ 2:30 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5:15 ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
4. ಎಸ್ಎಂವಿಟಿ ಬೆಂಗಳೂರು-ವಾಸ್ಕೋ-ಡ-ಗಾಮಾ ನಡುವೆ ಒಂದು ಟ್ರಿಪ್ ವಿಶೇಷ (07310/07311) ರೈಲು ಸಂಚಾರ.
ರೈಲು ಸಂಖ್ಯೆ 07310 ಎಸ್ಎಂವಿಟಿ ಬೆಂಗಳೂರು-ವಾಸ್ಕೋ ಡ ಗಾಮಾ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 30, 2024 ರಂದು ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 8:30ಕ್ಕೆ ಹೊರಟು, ಮರುದಿನ ಮಧ್ಯಾಹ್ನ 12:00 ಗಂಟೆಗೆ ವಾಸ್ಕೋ ಡ ಗಾಮಾ ನಿಲ್ದಾಣವನ್ನು ತಲುಪಲಿದೆ.
ಪುನಃ ಇದೇ ರೈಲು (07311) ಜನವರಿ 1, 2025 ರಂದು ವಾಸ್ಕೋ ಡ ಗಾಮಾದಿಂದ ರಾತ್ರಿ 10:00 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 12:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ರೈಲುಗಳ ಸಂಖ್ಯೆ 07306/07307, 07308/07309 & 07310/07311 ಈ ರೈಲುಗಳು ಎರಡೂ ಮಾರ್ಗಗಳಲ್ಲಿ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್, ಸಾನ್ವೊರ್ಡೆಮ್ ಮತ್ತು ಮಡಗಾಂವ್ ನಿಲ್ದಾಣಗಳಲ್ಲಿ ನಿಲ್ಲಲಿವೆ.
ಈ ರೈಲುಗಳಲ್ಲಿ ಎರಡು ಎಸಿ ಟು ಟೈರ್ ಬೋಗಿಗಳು, ಹದಿನೈದು ಎಸಿ ತ್ರಿ ಟೈರ್ ಬೋಗಿಗಳು ಮತ್ತು ಎರಡು ಲಗೇಜ್ / ಜನರೇಟರ್ / ಬ್ರೇಕ್ ವ್ಯಾನ್ ಗಳು ಇರಲಿವೆ.
ಪ್ರಯಾಣಿಕರು ಅಧಿಕೃತ (www.enquiry.indianrail.gov.in) ವೆಬ್ಸೈಟ್ ಗೆ ಭೇಟಿ ನೀಡಿ, NTES ಅಪ್ಲಿಕೇಶನ್ ಬಳಸಿ ಅಥವಾ 139 ನಂಬರಗೆ ಡಯಲ್ ಮಾಡುವ ಮೂಲಕ ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ/ನಿರ್ಗಮನ ಸಮಯ ಮತ್ತು ಇತರ ಮಾಹಿತಿಯನ್ನು ಪಡೆದುಕೊಳ್ಳಬಹುದು.