ಹುಬ್ಬಳ್ಳಿ : ದೀಪಾವಳಿ ಹಬ್ಬದ ಅಂಗವಾಗಿ ನೈಋತ್ಯ ರೈಲ್ವೆ ವಲಯ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಉತ್ತರಾಖಂಡ ರಾಜ್ಯದ ಯೋಗ ನಗರಿ ಋಷಿಕೇಶಕ್ಕೆ ಹಾಗೂ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ರಾಜ್ಯಸ್ಥಾನದ ಭಗತ್ಕಿಕೋಠಿ ನಿಲ್ದಾಣಗಳ ಮಧ್ಯೆ ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದೆ ಎಂದು ನೈರುತ್ಯ ರೈಲ್ವೆ ವಲಯದಲ್ಲಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರ ಬಿಜೆಪಿಗೆ ಬಿಟ್ಟುಕೊಡುವ ಮಾತಾಗಿಲ್ಲ: HD ಕುಮಾರಸ್ವಾಮಿ!
ಈ ಕುರಿತು ಮಾಹಿತಿ ನೀಡಿರುವ ಅವರುಎಸ್ಎಸ್ಎಸ್ ಹುಬ್ಬಳ್ಳಿ- ಯೋಗ ನಗರಿ ಋಷಿಕೇಶ ನಿಲ್ದಾಣಗಳ ಮಧ್ಯೆ 4 ಟ್ರಿಪ್ ವಿಶೇಷ ರೈಲು ಸಂಚರಿಸಲಿದೆ. ಎಸ್ಎಸ್ಎಸ್ ಹುಬ್ಬಳ್ಳಿಯೋಗ ನಗರಿ ಋಷಿಕೇಶ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು ಅ. 14 ರಿಂದ ನ. 4ರವರೆಗೆ ಪ್ರತಿ ಸೋಮವಾರ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ರಾತ್ರಿ 8.30ಕ್ಕೆ ಹೊರಟು, ಬುಧವಾರ ರಾತ್ರಿ 11.30ಕ್ಕೆ ಯೋಗ ನಗರಿ ಋಷಿಕೇಶ ತಲುಪಲಿದೆ.
ಯೋಗ ನಗರಿ ಋಷಿಕೇಶ- ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು ಅ. 17 ರಿಂದ ನ. 7ರವರೆಗೆ ಪ್ರತಿ ಗುರುವಾರ ಬೆಳಗ್ಗೆ 6.15ಕ್ಕೆ ಯೋಗ ನಗರಿ ಋಷಿಕೇಶ ನಿಲ್ದಾಣದಿಂದ ಹೊರಟು, ಶನಿವಾರ ಬೆಳಗ್ಗೆ 6.30 ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿಗೆ ಆಗಮಿಸಲಿದೆ. ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಭಗತ್ ಕಿ ಕೋಠಿ ನಿಲ್ದಾಣಗಳ ಮಧ್ಯೆ 2 ಟ್ರಿಪ್ ವಿಶೇಷ ರೈಲು ಸಂಚರಿಸಲಿದೆ. ಎಸ್ಎಂವಿಟಿ ಬೆಂಗಳೂರು-ಭಗತ್ ಕಿ ಕೋಠಿ ವಿಶೇಷ ಎಕ್ಸ್ಪ್ರೆಸ್ ರೈಲು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಅ. 25 ಮತ್ತು 30 ರಂದು ಸಂಜೆ 5.45ಕ್ಕೆ ಹೊರಟು, ಮೂರನೇ ದಿನ ಮಧ್ಯಾಹ್ನ 12.45ಕ್ಕೆ ಭಗತ್ ಕಿ ಕೋಠಿ ನಿಲ್ದಾಣ ತಲುಪಲಿದೆ.
ಭಗತ್ಕಿಕೋಠಿ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ ರೈಲು ಅ. 28 ಮತ್ತು ನ. 2ರಂದು ಭಗತ್ಕಿಕೋಠಿ ನಿಲ್ದಾಣದಿಂದ ಬೆಳಗಿನಜಾವ 5 ಗಂಟೆಗೆ ಹೊರಟು, ಮರುದಿನ ರಾತ್ರಿ 11.30ಕ್ಕೆ ಎಸ್ ಎಂವಿಟಿ ಬೆಂಗಳೂರಿಗೆ ಆಗಮಿಸಲಿದೆ ಎಂದು ತಿಳಿಸಿದ್ದಾರೆ.