ದೇಶದ ಈ ರಾಜ್ಯ ಒಂದರಲ್ಲಿ ಗೋವುಗಳಿಗೆ ವಿಶೇಷ ಗೌರವ ಸೂಚಿಸಲಾಗಿದೆ. ಅಂದ್ರೆ ಬಿಡಾಡಿ ದನಗಳನ್ನು ಬೀದಿ ಹಸು ಅನ್ನಬಾರದಂತೆ. ಒಂದು ವೇಳೆ ಆ ರೀತಿ ಕರೆದರೆ ಕಠಿಣ ಶಿಕ್ಷೆ ಗ್ಯಾರಂಟಿ ಅಂತೆ.
ಸರ್ಕಾರಿ JOB ಸರ್ಚ್ ಮಾಡ್ತಿದ್ರೆ ಇಲ್ಲಿ ಗಮನಿಸಿ: ಕೈ ತುಂಬಾ ಸಂಬಳ, ಕೆಲಸ ಗ್ಯಾರಂಟಿ- ಇಲ್ಲಿ ಅಪ್ಲೈ ಮಾಡಿ!
ಎಸ್, ಭಾರತ ದೇಶದ ರಾಜ್ಯದಲ್ಲಿ ಒಂದಾದ ರಾಜಸ್ಥಾನದ ಸರ್ಕಾರದ ಆದೇಶವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ರಸ್ತೆಗಳಲ್ಲಿ ತಿರುಗಾಡುವ ಹಸುಗಳಿಗೆ ಬೀದಿ ಹಸುಗಳು ಎಂಬ ಪದವನ್ನು ಬಳಸುವುದನ್ನು ಸರ್ಕಾರವು ನಿಷೇಧಿಸಿದೆ. ಅದು ಅವಹೇಳನಕಾರಿಯೆಂದು ಹೇಳಿರುವ ಸರ್ಕಾರ ಅದರ ಬದಲಿಗೆ ಹೆಚ್ಚು ಗೌರವಾನ್ವಿತವಾಗಿ ನಿರ್ಗತಿಕ ಹಸುಗಳು ಎಂಬ ಪದವನ್ನು ಬಳಸಲು ಅಧಿಸೂಚನೆಯನ್ನು ಹೊರಡಿಸಿದೆ.
ಈ ಸಂಬಂಧ ಎಲ್ಲಾ ಇಲಾಖೆಗಳು ಮತ್ತು ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರದ ಗೋಪಾಲನಾ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಗೋವುಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ. ಇಂದಿನ ಕಾಲದಲ್ಲಿ ನಾನಾ ಕಾರಣಗಳಿಂದ ಕೆಲವು ಹಸುಗಳು ನಿರ್ಗತಿಕರಾಗುತ್ತಿವೆ. ಅವು ಬೀದಿಗಳಲ್ಲಿ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡುಬರುತ್ತಿವೆ. ಈ ಹಸುಗಳಿಗೆ ಬೀದಿ ಹಸು ಎಂಬ ಪದವನ್ನು ಬಳಸುವುದು ಅನುಚಿತ ಮತ್ತು ಅವಹೇಳನಕಾರಿಯಾಗಿದೆ. ಇದು ನಮ್ಮ ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಮುಕ್ತವಾಗಿ ತಿರುಗಾಡುವ ಗೋವುಗಳಿಗೆ ‘ನಿರ್ಗತಿಕ’ ಎಂಬುದು ಸರಿಯಾದ ಪದವಾಗಿದೆ. ಈ ಪರಿಭಾಷೆಯು ಈ ಹಸುಗಳ ಬಗ್ಗೆ ಸಂವೇದನಾಶೀಲತೆ, ಗೌರವ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತದೆ ಎಂದು ಆದೇಶ ಹೊರಡಿಸಲಾಗಿದೆ.
ಎಲ್ಲಾ ಸರ್ಕಾರಿ ಆದೇಶಗಳು, ಮಾರ್ಗಸೂಚಿಗಳು, ಮಾಹಿತಿ ಪತ್ರಗಳು ಮತ್ತು ವರದಿಗಳಲ್ಲಿ ಡೆಸ್ಟಿಟ್ಯೂಟ್ ಪದವನ್ನು ಬಳಸಲು ಸರ್ಕಾರಿ ಇಲಾಖೆಗಳು, ಗೋಶಾಲಾ ಮತ್ತು ಇತರ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ